Sri Mukthinaga Temple – Ramohalli

Sri Mukthi Naga temple is located in Ramohalli, Bangalore. It is about 1km from Ramohalli bus stand. The huge monolithic statue of Lord Muktinaga Subramanya Swamy is consecrated in sanctum sanctorum. Patron deity Patalamma, Kshetra palaka Sri Kaalabhairaveshwara Swamy, Sri Karyasiddi Vinayaka and Nagabana are aesthetically consecrated around temple premises. The car festival during anniversary of the temple is very famous and celebrates with pomp and show. More number of devotees attends the anniversary celebration. The management of the temple is now looking after by Sri Subramanya Seva Trust.

ಕರ್ನಾಟಕ ರಾಜ್ಯದ ಬೆಂಗಳೂರಿನ ರಾಮೋಹಳ್ಳಿ ಬಸ್ ನಿಲ್ದಾಣದಿಂದ ಸುಮಾರು 1 ಕಿ. ಮೀ. ದೂರದೊಳಗೆ ಶ್ರೀ ಮುಕ್ತಿನಾಗ ಕ್ಷೇತ್ರವಿದೆ. ಈ ದೇವಾಲಯದ ಪ್ರಧಾನ ದೇವರು ಶ್ರೀ ಮುಕ್ತಿನಾಗ ಸುಬ್ರಹ್ಮಣ್ಯ ಸ್ವಾಮಿ. ಈ ದೇವಸ್ಥಾನದ ಆವರಣದಲ್ಲಿ, ಗ್ರಾಮ ದೇವತೆ ಪಟ್ಟಾಲಮ್ಮ, ಕ್ಷೇತ್ರ ಪಾಲಕ ಶ್ರೀ ಕಾಲಭೈರವ ಸ್ವಾಮಿ , ಶ್ರೀ ಕಾರ್ಯಸಿದ್ಧಿ ವಿನಾಯಕ ದೇವರ ದೇವಾಲಯಗಳಿದೆ ಹಾಗು ನಾಗಬನವಿದೆ. ಈ ದೇವಾಲಯವನ್ನು ಪ್ರಸ್ತುತ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ನೋಡಿಕೊಳ್ಳುತ್ತಿದೆ. ಈ ಕ್ಷೇತ್ರದಲ್ಲಿ ನಡೆಯುವ ರಥೋತ್ಸವವು ಬಹು ವೈಭವೋಪೇತವಾಗಿ ನಡೆಯುತ್ತದೆ. ಈ ಮಹೋತ್ಸವದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ.