Sri Srinivasa Sri Ramanajaneya Sri Raghavendra Swamy Temple – Malleshwaram

Sri Srinivasa, Sri Ramanjaneya, Sri Raghavendra Swamy temple is located in Malleshwaram, Bangalore. The main deity in the sanctum sanctorum is Sri Rama. The devotees can have the blessings of Sri Mukhyaprana, Sri Raghavendra Swamy Mruttika Brundavana and Sri Srinivasa in the holy shrine. Sri Raghavendra Swamy Aradhana, Sri Rama Navami and Karthika Deepotsava are celebrated with pomp and show. At present the administration of temple is looking after by Palimaru Samsthana, Udupi.

ಶ್ರೀ ಶ್ರೀನಿವಾಸ, ಶ್ರೀರಾಮಾಂಜನೇಯ, ಶ್ರೀರಾಘವೇಂದ್ರ ಸ್ವಾಮಿ ದೇವಾಲಯವು ಬೆಂಗಳೂರಿನ ಮಲ್ಲೇಶ್ವರಂನಲ್ಲಿದೆ. ದೇವಾಲಯದ ಪ್ರಮುಖ ದೇವರು ಶ್ರೀ ರಾಮ ದೇವರು. ದೇವಾಲಯದಲ್ಲಿ ಶ್ರೀ ಮುಖ್ಯ ಪ್ರಾಣದೇವರು, ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಹಾಗು ಶ್ರೀ ಶ್ರೀನಿವಾಸ ದೇವರ ಸನ್ನಿಧಿಯನ್ನು ಕಾಣಬಹುದಾಗಿದೆ. ದೇವಾಲಯದಲ್ಲಿ ನಡೆಯುವ ಶ್ರೀ ರಾಯರ ಆರಾಧನೆ, ಶ್ರೀ ರಾಮನವಮಿ ಹಾಗು ಕಾರ್ತೀಕ ದೀಪೋತ್ಸವವು ಬಹು ವೈಭವದಿಂದ ನಡೆಯುತ್ತದೆ. ಪ್ರಸ್ತುತ ದೇವಾಲಯದ ಆಡಳಿತವನ್ನು ಉಡುಪಿಯ ಅಷ್ಟ ಮಠಗಳಲ್ಲೊಂದಾದ ಪಲಿಮಾರು ಸಂಸ್ಥಾನವು ನೋಡಿಕೊಳ್ಳುತ್ತಿದೆ.