Sri Sripadaraja Mutt – Raghavendra Colony

Sri Sripadaraja Mutt is on the Fifth Main of Raghavendra Colony in Chamarajpet of Bengaluru. It is at 3.5 km from Bengaluru Kempegowda Bus Station and Sangolli Rayanna City Railway Station. Sri Sripadaraja Mutt was established in 1937 and is said to be the third oldest Mutt to have been established in Bengaluru. The deities presiding in the temple are Sri Hayagreeva, Sri Mukhyaprana, Sri Rudra, Mrittika Brindavana of Sri Jayatirtha, Mrittika Brindavan of Sri Raghavendra Swamy and an idol of Sri Bhoota Raja. Expert priests of the temple perform daily and occasional pujas to the presiding deities as per the established norms.

ಶ್ರೀ ಶ್ರೀಪಾದರಾಜ ಮಠವು ಬೆಂಗಳೂರಿನ ಚಾಮರಾಜಪೇಟೆ ರಾಘವೇಂದ್ರ ಕಾಲೋನಿಯ ೫ನೇ ಮುಖ್ಯ ರಸ್ತೆಯಲ್ಲಿದೆ. ಇದು ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಮತ್ತು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸುಮಾರು 3.5 ಕಿ ಮೀ ದೂರದಲ್ಲಿದೆ, ಈ ಮಠವು 1937 ರಲ್ಲಿ ಸ್ಥಾಪನೆಯಾಗಿದ್ದು, ಬೆಂಗಳೂರಿನ ೩ನೇ ಅತ್ಯಂತ ಹಳೆಯ ಮಠವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ, ಶ್ರೀ ಹಯಗ್ರೀವ ದೇವರು ಮತ್ತು ಶ್ರೀ ಮುಖ್ಯ ಪ್ರಾಣರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದರೊಂದಿಗೆ, ಶ್ರೀ ಲಿಂಗ ರೂಪಿ ರುದ್ರ ದೇವರನ್ನು ಮತ್ತು ಭೂತ ರಾಜರನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲದೇ, ಶ್ರೀ ಜಯತೀರ್ಥರ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನಗಳನ್ನೂ ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನದ ನುರಿತ ಅರ್ಚಕರು, ದೇವಸ್ಥಾನದ ಎಲ್ಲ ದೇವರುಗಳಿಗೆ ನಿತ್ಯ ಹಾಗು ವಿಶೇಷ ಪೂಜೆಗಳನ್ನು ಶಾಸ್ತ್ರೋಕ್ತ ವಿಧಿ-ವಿಧಾನಗಳಿಂದ ನೆರವೇರಿಸುತ್ತಾರೆ.