History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Historical Background / ಐತಿಹಾಸಿಕ ಹಿನ್ನೆಲೆ

    Sri Pejavara Adhokshaja Mutt was established by Sri Madhwacharya, founder of Dwaita Siddhanta in thirteenth century. Sri Madhwacharya first established the renowned temple of Sri Krishna at Udupi, and then he established eight Mutts, popularly denoted The Ashta Mutts, to ensure continuous worship of Sri Krishna. These eight Mutts have the responsibility of offering the worship in the temple and catering to the needs of pilgrims, who visit the temple from across the country. For this, they follow an ancient system known as “Paryaya”. Therefore, the responsibility of worshipping the presiding deity and providing requisite facilities to the pilgrims rotates amongst the eight mutts once in every two years. Sri Pejawara Adhokshaja Mutt is one of these eight Mutts. ಶ್ರೀಪೇಜಾವರ ಅಧೋಕ್ಷಜ ಮಠವು ದ್ವೈತ ಸಿದ್ಧಾಂತ ಪ್ರತಿಷ್ಠಾಪನಾಚಾರ್ಯರಾದ ಶ್ರೀಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಅಷ್ಟ ಮಠಗಳಲ್ಲೊಂದಾಗಿದೆ. ಶ್ರೀಮಧ್ವಾಚಾರ್ಯರು ಶ್ರೀಕೃಷ್ಣ ಮಠವನ್ನು ಪ್ರತಿಷ್ಠಾಪಿಸಿದ ನಂತರ ಶ್ರೀಕೃಷ್ಣ ಮೂರ್ತಿಯ ನಿರಂತರ ಪೂಜಾ ಕೈಂಕರ್ಯವನ್ನು ವ್ಯವಸ್ಥೆಗೊಳಿಸುವ ಉದ್ದೇಶದಿಂದ ತಮ್ಮ ಶಿಷ್ಯವೃಂದದಲ್ಲಿದ್ದ ಎಂಟು ಯತಿಗಳನ್ನು ಆ ಕಾರ್ಯಕ್ಕೆ ನಿಯೋಜಿಸಿದರು. ಈ ಎಂಟು ಯತಿಗಳು ಶ್ರೀಮಧ್ವಾಚಾಯರು ಸ್ಥಾಪಿಸಿದ ಅಷ್ಟ ಮಠಗಳ ಮೂಲಪುರುಷರೆಂದು ಗುರುತಿಸಲ್ಪಡುತ್ತಾರೆ. ಅಷ್ಟಮಠದ ಪೀಠಸ್ಥರು ಶ್ರೀಕೃಷನ ನಿರಂತರ ಪೂಜಾ ಕೈಂಕರ್ಯವನ್ನು “ಪರ್ಯಾಯ”ವೆಂಬ ಪ್ರಾಚೀನ ಪದ್ಧತಿಯಂತೆ ಸರಣಿಯೋಪಾದಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಅಷ್ಟೆ ಅಲ್ಲದೆ ಶ್ರೀ ಮಠವನ್ನು ಸಂದರ್ಶಿಸಲು ದಿನ ನಿತ್ಯವೂ ಆಗಮಿಸುವ ಭಕ್ತಾದಿಗಳಿಗೆ ಮೂಲ ಸೌಕರ್ಯವನ್ನು ಒದಗಿಸುವ ಜವಾಬ್ದಾರಿಯೂ ಪರ್ಯಾಯ ಪೀಠಸ್ಥರದ್ದಾಗಿರುತ್ತದೆ. ಶ್ರೀಮಧ್ವಾಚಾರ್ಯರು ಮೂಲತಃ ಎರಡು ತಿಂಗಳೆಂದು ನಿಗದಿ ಪಡಿಸಿದ್ದ ಪರ್ಯಾಯ ಅವಧಿಯನ್ನು ಸೋದೆ ಮಠಾಧೀಶರಾಗಿದ್ದ ಶ್ರೀವಾದಿರಾಜರು ಎರಡು ವರ್ಷಗಳಿಗೆ ವೃದ್ಧಿಸಿದ್ದು ಈಗಲೂ ಅದೇ ನಿಯಮವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಶ್ರೀ ಅಧೋಕ್ಷಜ ತೀರ್ಥರು ಶ್ರೀ ಪೇಜಾವರ ಮಠದ ಮೂಲ ಪೀಠಾಧಿಪತಿಗಳು.

  • Guru Parampara / ಗುರುಪರಂಪರೆ

    Sri Madhwacharyaru ಶ್ರೀಮನ್ಮಧ್ವಾಚಾರ್ಯರು Sri Adhokshaja Tirtharu ಶ್ರೀ ಅಧೋಕ್ಷಜ ತೀರ್ಥರು Sri Kamalaksha Tirtharu ಶ್ರೀ ಕಮಲಾಕ್ಷ ತೀರ್ಥರು Sri Pushkaraksha Tirtharu ಶ್ರೀ ಪುಷ್ಕರಾಕ್ಷ ತೀರ್ಥರು Sri Amarendra Tirtharu ಶ್ರೀ ಅಮರೇಂದ್ರ ತೀರ್ಥರು Sri Vijayarya Tirtharu ಶ್ರೀ ವಿಜಯಾರ್ಯ ತೀರ್ಥರು Sri Mahendra Tirtharu ಶ್ರೀ ಮಹೇಂದ್ರ ತೀರ್ಥರು Sri Vijayadhvaja Tirtharu ಶ್ರೀ ವಿಜಯಧ್ವಜ ತೀರ್ಥರು Sri Uttama Tirtharu ಶ್ರೀ ಉತ್ತಮ ತೀರ್ಥರು Sri Chintamani Tirtharu ಶ್ರೀ ಚಿಂತಾಮಣಿ ತೀರ್ಥರು Sri Damodara Tirtharu ಶ್ರೀ ದಾಮೋದರ ತೀರ್ಥರು Sri Vasudeva Tirtharu ಶ್ರೀ ವಾಸುದೇವ ತೀರ್ಥರು Sri Vadindra Tirtharu ಶ್ರೀ ವಾದೀಂದ್ರ ತೀರ್ಥರು Sri Vedagarbha Tirtharu ಶ್ರೀ ವೇದಗರ್ಭ ತೀರ್ಥರು Sri Anuprajna Tirtharu ಶ್ರೀ ಅಣುಪ್ರಜ್ಞ ತೀರ್ಥರು Sri Vishwaprajna Tirtharu ಶ್ರೀ ವಿಶ್ವಪ್ರಜ್ಞ ತೀರ್ಥರು Sri Vishveshwara Tirtharu ಶ್ರೀ ವಿಶ್ವೇಶ್ವರ ತೀರ್ಥರು Sri Vishvabhushana Tirtharu ಶ್ರೀ ವಿಶ್ವಭೂಷಣ ತೀರ್ಥರು Sri Vishvavandya Tirtharu ಶ್ರೀ ವಿಶ್ವವಂದ್ಯ ತೀರ್ಥರು Sri Vidyaraja Tirtharu ಶ್ರೀ ವಿದ್ಯಾರಾಜ ತೀರ್ಥರು Sri Vishvamurthy Tirtharu ಶ್ರೀ ವಿಶ್ವಮೂರ್ತಿ ತೀರ್ಥರು Sri Vishvapati Tirtharu ಶ್ರೀ ವಿಶ್ವಪತಿ ತೀರ್ಥರು Sri Vishvanidhi Tirtharu ಶ್ರೀ ವಿಶ್ವನಿಧಿ ತೀರ್ಥರು Sri Vishvadhisha Tirtharu ಶ್ರೀ ವಿಶ್ವಾಧೀಶ ತೀರ್ಥರು Sri Vishvadhiraja Tirtharu ಶ್ರೀ ವಿಶ್ವಾಧಿರಾಜ ತೀರ್ಥರು Sri Vishvabodha Tirtharu ಶ್ರೀ ವಿಶ್ವಬೋಧ ತೀರ್ಥರು Sri Vishvavallabha Tirtharu ಶ್ರೀ ವಿಶ್ವವಲ್ಲಭ ತೀರ್ಥರು Sri Vishvapriya Tirtharu ಶ್ರೀ ವಿಶ್ವಪ್ರಿಯ ತೀರ್ಥರು Sri Vishvavarya Tirtharu ಶ್ರೀ ವಿಶ್ವವರ್ಯ ತೀರ್ಥರು Sri Vishvaraja Tirtharu ಶ್ರೀ ವಿಶ್ವರಾಜ ತೀರ್ಥರು Sri Vishvamanohara Tirtharu ಶ್ರೀ ವಿಶ್ವಮನೋಹರ ತೀರ್ಥರು Sri Vishvajna Tirtharu ಶ್ರೀ ವಿಶ್ವಜ್ಞ ತೀರ್ಥರು Sri Vishvamanya Tirtharu ಶ್ರೀ ವಿಶ್ವಮಾನ್ಯ ತೀರ್ಥರು Sri Vishvesha Tirtharu (present, senior swamiji) ಶ್ರೀ ವಿಶ್ವೇಶ ತೀರ್ಥರು (ಪ್ರಸ್ತುತ ಹಿರಿಯ ಯತಿಗಳು) Sri Vishwaprasanna Tirtharu (present, junior swamiji) ಶ್ರೀ ವಿಶ್ವಪ್ರಸನ್ನ ತೀರ್ಥರು (ಪ್ರಸ್ತುತ ಕಿರಿಯ ಯತಿಗಳು)

  • Presiding deity / ಪಟ್ಟದ ದೇವರು

    Sri Vitthala, flanked by Sri Devi Bhoodevi, the main deity of Pejavar Mutt, was given to Sri Adhokshaja Tirtharu, the founder pontiff of the Mutt, by Sri Madhvacharya. This idol, with one of its hands placed on hips, is also known as Aja Vitthala, to distinguish it from other idols of Vitthala. Along with the idol of Vitthala, the idol of Sri Rama, said to have been cast by KanvaTirtharu, is also worshipped at Sri Pejawar Mutt. ಶ್ರೀ ಪೇಜಾವರ ಮಠದ ಮುಖ್ಯದೇವತೆಯಾದ ಶ್ರೀದೇವಿ, ಭೂದೇವಿಸಹಿತ ವಿಠ್ಠಲಮೂರ್ತಿಯನ್ನು ಶ್ರೀ ಮಧ್ವಾಚಾರ್ಯರು ತಮ್ಮ ಶಿಷ್ಯೋತ್ತಮರಾದ ಶ್ರೀ ಅಧೋಕ್ಷಜ ತೀರ್ಥರಿಗೆ ನೀಡಿದ್ದರು. ಈ ವಿಗ್ರಹದಲ್ಲಿ ಶ್ರೀ ವಿಠಲನು ತನ್ನ ಒಂದು ಕೈಯನ್ನು ನಿತಂಬದ ಮೇಲಿಟ್ಟಿರುವನು. ಆದ್ದರಿಂದಲೇ ಈ ಮೂರ್ತಿಯನ್ನು ಅಜವಿಠ್ಠಲನೆಂದು ಕರೆಯಲಾಗುತ್ತದೆ. ಈ ರೀತಿ ಕರೆಯುವುದರಿಂದ ಇತರ ವಿಠ್ಠಲಮೂರ್ತಿಗಳಿಂದ ಅಜವಿಠ್ಠಲ ವಿಭಿನ್ನವೆಂದು ಗುರುತಿಸಲಾಗುವುದು. ಶ್ರೀ ವಿಠಲ ಮೂರ್ತಿ ಅಲ್ಲದೆ ಶ್ರೀ ಕಣ್ವತೀರ್ಥ ಕರಾರ್ಚಿತವೆಂದು ಹೇಳಲಾಗುವ ಶ್ರೀರಾಮಚಂದ್ರ ಮೂರ್ತಿಯನ್ನು ಶ್ರೀ ಪೇಜಾವರ ಮಠದಲ್ಲಿ ಅರ್ಚಿಸಲಾಗುತ್ತದೆ.

  • Sri Visvesa Tirtharu / ಶ್ರೀ ವಿಶ್ವೇಶತೀರ್ಥರು

    His Holiness Sri Sri Visvesa Tîrtha Swamiji is the 33rd Peethadhipati of Sri Pejawar Mutt. He was born in 1931 (Prajotpatti, Vaishakha Shuddha, Dashami); he was initiated into sainthood on December 3, 1938 (Bahudhanya, Margashira Shuddha, Dasami) on the banks of River Tungabhadra, In the holy presence of Yantroddharaka Mukhyaprana in Hampi by His Holiness Sri Sri Vishwamanya Tirtharu. At the time of initiation into sainthood, the Acharya was only seven years old. Under great scholar-saint Sri Vidyamanya Tirtharu, Sri Visvesa Tirtharu completed his studies in Shastra, Scriptures and Sahitya, Nyaya and Vyakarana. Later, Sri Sri Vidyamanya Tirtharu asked Sri Visvesa Tîrtha to preside over Madhwa Raddhanta Samvardhini Sabha. After the demise of Sri Sri Vishwamanya Tirtharu in 1940, Sri Visvesa Tirtharu became the 33rd Peethadhipati of Sri Mutt. In 1979 Sri Visvesha Tirtharu appointed Sri Vishwaprasanna Tirtha, one of his disciples as his successor. During his first paryaya (in January, 1953), Sri Pejawar seer organised the All-India Madhwa Conference in Udupi. During his second paryaya, he renovated the Badagumalige; during his third, he renovated the wall of Sri Krishna Temple and got a spacious auditorium constructed at Rajangana and a chaultry (Sri Krishnadhama) there. ಪೇಜಾವರಮಠದ ಗುರುಪರಂಪರೆಯಲ್ಲಿಯೇ ಶ್ರೀ ವಿಶ್ವೇಶತೀರ್ಥರು ೩೩ನೆಯವರು. ಇವರು ಪ್ರಜೋತ್ಪತ್ತಿಸಂವತ್ಸರದ ವೈಶಾಖ ಶುದ್ಧ ದಶಮಿಯಂದು 1931ರಲ್ಲಿ ಜನಿಸಿದರು. ಡಿಸೆಂಬರ್ 3, 1938ರಂದು, ಅಂದರೆ ಬಹುಧಾನ್ಯಸಂವತ್ಸರದ ಮಾರ್ಗಶಿರ ಮಾಸ ಶುಕ್ಲ ದಶಮಿಯಂದು ಸನ್ನ್ಯಾಸ ಸ್ವೀಕರಿಸಿದರು. ಶ್ರೀ ವಿಶ್ವಮಾನ್ಯತೀರ್ಥರು ಅಂದು ಶ್ರೀವಿಶ್ವೇಶತೀರ್ಥರಿಗೆ ತುಂಗಭದ್ರಾ ನದಿಯ ತೀರದಲ್ಲಿ, ಹಂಪೆಯ ಶ್ರೀ ಯಂತ್ರೋದ್ಧಾರಕ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಸಂನ್ಯಾಸ ದೀಕ್ಷೆಯನ್ನು ನೀಡಿದರು. ಸಂನ್ಯಾಸ ಸ್ವೀಕರಿಸಿದಾಗ ಶ್ರೀ ವಿಶ್ವೇಶತೀರ್ಥರಿಗೆ ವಯಸ್ಸು ಏಳು ವರ್ಷ. ಶ್ರೇಷ್ಠ ವಿದ್ವಾಂಸರಾಗಿದ್ದ ಶ್ರೀ ವಿಶ್ವಮಾನ್ಯತೀರ್ಥರನ್ನು ಗುರುಗಳಾಗಿ ಪಡೆದ ಶ್ರೀ ವಿಶ್ವೇಶತೀರ್ಥರು ಶಾಸ್ತ್ರಪಾಠದಲ್ಲಿ ತದೇಕಚಿತ್ತರಾಗಿದ್ದರು. ಧರ್ಮಗ್ರಂಥಗಳನ್ನು ಆಳವಾಗಿ ಅಭ್ಯಸಿಸಿದ ಶ್ರೀ ವಿಶ್ವೇಶತೀರ್ಥರು ಬಹು ಬೇಗ ಪಾಂಡಿತ್ಯವನ್ನು ಸಾಧಿಸಿದರು. ಸಾಹಿತ್ಯ, ನ್ಯಾಯ, ವ್ಯಾಕರಣಾದಿಗಳಲ್ಲಿ ಶ್ರೀ ವಿಶ್ವೇಶತೀರ್ಥರು ವಿಶೇಷವಾದ ಜ್ಞಾನವನ್ನು ಸಂಪಾದಿಸಿದರು. ಇವರಿಗೆ ಇನ್ನೂ ಹೆಚ್ಚಿನ ಹೊಣೆಯನ್ನು ನೀಡಬೇಕೆಂದು ನಿರ್ಧರಿಸಿದ ಶ್ರೀ ವಿಶ್ವಮಾನ್ಯರು ಶ್ರೀವಿಶ್ವೇಶತೀರ್ಥರನ್ನು ಮಧ್ವರಾದ್ಧಾಂತ ಸಂವರ್ಧಿನೀಸಭೆಯ ಅಧ್ಯಕ್ಷತೆ ವಹಿಸುವಂತೆ ಆಜ್ಞೆ ಮಾಡಿದರು. ಶ್ರೀವಿಶ್ವಮಾನ್ಯರು 1940ರಲ್ಲಿ ದೇಹತ್ಯಾಗ ಮಾಡಿದ ನಂತರ ಶ್ರೀವಿಶ್ವೇಶತೀರ್ಥರು ಶ್ರೀಮಠದ ಆಸನವನ್ನಲಂಕರಿಸಿದರು. 1953ರ ಜನವರಿಯಲ್ಲಿ ಪರ್ಯಾಯಪೀಠವನ್ನೇರಿದ ಶ್ರೀವಿಶ್ವೇಶತೀರ್ಥರು ಅಖಿಲ ಭಾರತ ಮಾಧ್ವಮಹಾಸಭೆಯನ್ನು ಉಡುಪಿಯಲ್ಲಿ ಏರ್ಪಡಿಸಿದರು. ತಮ್ಮ ಎರಡನೆಯ ಪರ್ಯಾಯಾವಧಿಯಲ್ಲಿ ಶ್ರೀಗಳು ಬಡಗು ಮಾಳಿಗೆಯನ್ನು ನವೀಕರಿಸಿದರು. ಶ್ರೀಕೃಷ್ಣಮಠದ ಶಿಥಿಲಗೊಂಡಿದ್ದ ಗೋಡೆಗಳನ್ನು ತಮ್ಮ ಮೂರನೆಯ ಪರ್ಯಾಯಾವಧಿಯಲ್ಲಿ ನವೀಕರಿಸಿದ ಶ್ರೀವಿಶ್ವೇಶತೀರ್ಥರು, ಅದೇ ಅವಧಿಯಲ್ಲಿ ಭವ್ಯವಾದ ರಾಜಾಂಗಣ ಎಂಬ ಸಭಾಗೃಹ ಹಾಗೂ ಶ್ರೀಕಷ್ಣಧಾಮವೆಂಬ ಕಲ್ಯಾಣಮಂಟಪಗಳ ನಿರ್ಮಾಣವನ್ನು ಮಾಡಿಸಿದರು. ಶ್ರೀವಿಶ್ವಪ್ರಸನ್ನತೀರ್ಥರೆಂಬ ಅನುಯಾಯಿಗಳನ್ನು ತಮ್ಮ ಕಿರಿಯ ಪೀಠಾಧಿಪತಿಯನ್ನಾಗಿ ನೇಮಿಸಿದರು.

You don't have permission to register