History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Historical background / ಐತಿಹಾಸಿಕ ಹಿನ್ನಲೆ

    Sri Arakeshwara Swamy temple in the Guthalu Layout of Mandya was built during the 12th century in the time of Cholas. This place was a dense forest before and hundreds of cows used to come here daily for grazing, in search of fresh food and grass. These cows belonged to the house of the Chief or Head of the Channapana Doddi village. The cowherd used to milch the cows after daily grazing. Among these cows, one cow used to give milk in a bushy place which contained an anthill. However, when milking the cow was tried in the cowshed, it used to ooze blood. The worried servant informed the Chief about this and the Chief decided to go and verify the strange occurrence himself. Before letting the cows to graze, he tied a plant vine for identification to the cow’s neck. As usual, the cow started giving milk in the same bushy place. The Chief who was observing all this from the top of a tree, got down, and started cutting down those bushes using his Chandrayudha. At that time, he accidentally hit a part of a stone idol of Linga that was hidden in the soil. A chunk came off and it pitched first in Basavanagudi, which was nearly 3 kms away and it pitched next after 2 more kms. It still rolled on further and finally came to rest. Worried chief consulted an oracle and Lord Shiva advised the chief through an oracle to build a temple for him in that bushy place. The Chief obeyed and built the temple. Later, the place got the names Guttalu and Arakeshwara Nagara. Even today, the family descendants of that Chief perform Rathotsava, Vijayadashami puja and other worships. It is believed that, if any victim of snake bite comes to this temple, he is given the Srigandha (Sandalwood) teertha prasada from the temple and the victim will be cured. ಶ್ರೀ ಅರಕೇಶ್ವರಸ್ವಾಮಿ ದೇವಾಲಯವು ಮಂಡ್ಯಜಿಲ್ಲೆಯ ಗುತ್ತಲು ಬಡಾವಣೆಯಲ್ಲಿದೆ. ಚೋಳರ ಕಾಲದ ಈ ದೇವಾಲಯವನ್ನು 12ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಯಿತು. ಹಿಂದೆ ಈ ಪ್ರದೇಶವು ಗೊಂಡಾರಣ್ಯವಾಗಿತ್ತು. ಚೆನ್ನಪ್ಪನದೊಡ್ಡಿ ಎಂಬ ಹಳ್ಳಿಯ ಪಾಳೆಯಗಾರನ ವಶದಲ್ಲಿದ್ದ ನೂರಾರು ಹಸುಗಳು ಈ ಅರಣ್ಯಪ್ರದೇಶದಲ್ಲಿ ಮೇವಿಗಾಗಿ ಹೋಗುತ್ತಿದ್ದವು. ದಿನಂಪ್ರತಿ ಮೇವಿನ ನಂತರ ಗೋಪಾಲಕನು ದೊಡ್ಡಿಯಲ್ಲಿ ಹಾಲು ಕರೆಯುತ್ತಿದ್ದನು. ಒಮ್ಮೆ, ಹಸುವೊಂದು ಆ ಪ್ರದೇಶದ ಪೊದೆಯೊಂದರಲ್ಲಿ ಹಾಲನ್ನು ಕರೆದು ಬರುವುದು ಗೌಳಿಗನ ಗಮನಕ್ಕೆ ಬಂದಿತು. ಗೌಳಿಗನು ಆ ಹಸುವನ್ನು ದೊಡ್ಡಿಯಲ್ಲಿ ಹಾಲು ಕರೆಯಲು ಯತ್ನಿಸಿದಾಗ, ಹಾಲಿನ ಬದಲು ರಕ್ತ ಸೂಸುತ್ತಿತ್ತು. ಆ ಪೊದೆಯಲ್ಲಿ ಹುತ್ತವೊಂದು ಕಂಡುಬಂದಿತು. ಭಯಭೀತನಾದ ಗೌಳಿಗನು ಈ ವಿಚಾರವನ್ನು ಪಾಳೆಯಗಾರನ ಗಮನಕ್ಕೆ ತಂದನು. ಪಾಳೆಯಗಾರನು ಪರೀಕ್ಷಿಸಲು ನಿರ್ಧರಿಸಿ, ಹಸುಗಳು ಮೇಯಲು ಹೋಗುವ ಮುನ್ನ ಪೊದೆಯಲ್ಲಿ ಹಾಲು ಕರೆಯುತ್ತಿದ್ದ ಹಸುವನ್ನು ಗುರುತಿಸಲು ಉಗನಿಹಂಬನ್ನು ಕುತ್ತಿಗೆಗೆ ಸುತ್ತಿದನು. ಪಾಳೇಗಾರನು ಪರೀಕ್ಷೆಗಾಗಿ ಅಲ್ಲಿದ್ದ ಮರದ ಮೇಲೆ ಕುಳಿತುಕೊಂಡು ನೋಡುತ್ತಿದ್ದನು. ಹಸುವು ಎಂದಿನಂತೆ ಗೌಳಿಗನು ತಿಳಿಸಿದ್ದ ಸ್ಥಳದಲ್ಲಿ ಹಾಲನ್ನು ಕರೆಯಲು ಆರಂಭಿಸಿತು. ಆಗ ಈ ಮರದಿಂದ ಇಳಿದು ಆಳುಗಳನ್ನು ಕರೆದುಕೊಂಡು ಬಂದು ಆ ಪೊದೆಗಳನ್ನು ಚಂದ್ರಾಯುಧದಲ್ಲಿ ಕತ್ತರಿಸುವಾಗ ಅಲ್ಲಿದ್ದ ಲಿಂಗಾಕಾರವಾದ ಶ್ರೀ ಅರಕೇಶ್ವರಸ್ವಾಮಿಯ ಮಂಡೆಗೆ ಏಟು ತಗುಲಿ ಆ ಮಂಡೆಯ ಒಂದು ಭಾಗ ಹೊಡೆದ ತಕ್ಷಣ ಸುಮಾರು ಮೂರು ಕಿ.ಮೀ. ದೂರದಲ್ಲಿ ಬಸವನಗುಡಿ ಹತ್ತಿರ ಪುಟ ಬಿದ್ದು ನಂತರ ಇನ್ನೂ ಎರಡು ಕಿ.ಮೀ. ದೂರದಲ್ಲಿ ಮತ್ತೆ ಪುಟ ಬಿದ್ದು, ಅದರಿಂದ ಪುನಃ ಉರುಳಿಕೊಂಡು ಹೋಗಿ ನಿಂತಿತು. ಹೀಗೇಕಾಯಿತೆಂದು ವಿಚಾರಿಸುವಾಗ ಓರ್ವನ ಮೈಮೇಲೆ ಸ್ವಾಮಿಯು ಬಂದು, ಈ ಸ್ಥಳದಲ್ಲಿ ದೇವಸ್ಥಾನವನ್ನು ಮಾಡಿಸಿ, ಪೂಜಾ, ಪುನಸ್ಕಾರಗಳನ್ನು ಸಲ್ಲಿಸಬೇಕೆಂದು ಆಜ್ಞಾಪಿಸಿದಾಗ, ಪಾಳೆಯಗಾರನು ಒಪ್ಪಿಕೊಂಡು ದೇವಸ್ಥಾನ ಮಾಡಿಸಲು ನಿರ್ಧರಿಸಿದನು. ಪೊದೆಯ ಪ್ರದೇಶದಲ್ಲಿ ಗುತ್ತಿ ಗಿಡ ಇದ್ದುದರಿಂದ ಈ ಊರಿಗೆ ಗುತ್ತಲುಗ್ರಾಮವೆಂದು ಹೆಸರಾಯಿತು. ಸುತ್ತಲೂ ಅವರಿಕೆ ಗಿಡ ಇದ್ದುದರಿಂದ ಶ್ರೀ ಅರಕೇಶ್ವರಸ್ವಾಮಿ ಎಂದು ನಾಮಧೇಯವಾಯಿತು. ಪಾಳೆಯಗಾರನ ವಂಶಸ್ಥರು ಈಗಲೂ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ. ರಥೋತ್ಸವ, ವಿಜದಶಮಿ ಮುಂತಾದ ಪೂಜಾವಿಧಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಹಾವಿನ ಕಡಿತಕ್ಕೆ ಒಳಗಾದವರು ಈ ದೇವಾಲಯಕ್ಕೆ ಬಂದು ಶ್ರೀಗಂಧ-ತೀರ್ಥಪಸಾದವನ್ನು ಸ್ವೀಕರಿಸಿದರೆ ವಿಷವಿಳಿಯುತ್ತದೆ ಎಂಬುದು ಸ್ಥಳೀಯರ ನಂಬಿಕೆ.

You don't have permission to register