History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Sri Ramanujacharya / ಶ್ರೀ ರಾಮಾನುಜಾಚಾರ್ಯ

    Sri Ramanuja (1017 - 1137) was born in Sriperambadur, Tamilnadu. At a young age, he went to Kanchi to study Vedas. He was influenced by the works of Sri Yamunacharya of Srirangam and systematized his philosophies into Vishishtadvaita. He succeeded Sri Yamunacharya and started preaching Vishishtadvaita philosophy to his followers and strengthened the Srivaishnavism movement. It is believed that around 1098 AD he travelled to Melukote and stayed there for twelve years. At Melukote he re-established the Sri Cheluvanarayana Swamy temple and brought many people into the folds of Srivaishnavism including Hoysala King Vishnuvardhana. He wrote 8 important literary works on Srivaishnavism. These include: 1) Sri Bhashya 2) Gita Bhashya 3) Vedantasarasangraha 4) Vedantasara 5) Gadyatrayam Saranaagatigadya 6) Srirangagadya 7) Srivaikuntagadya and 8) Nitya Grantha. He went back to Srirangam after he turned 100 years. Sri Ramanuja lived for 120 years and is considered to be one of the important gurus in the Vaishnava sect – especially Srivaishnavism. It was in the year 1137 AD Sri Ramanujacharya gave up his mortal body. His life-like statue was installed in Sriperambadur. It is believed that his physical body in sitting posture is preserved in the sanctum sanctorum dedicated to him in the Srirangam temple complex. ಶ್ರೀ ರಾಮಾನುಜಾಚಾರ್ಯರು (1017 - 1137) ತಮಿಳುನಾಡಿನ ಶ್ರೀಪೆರಂಬದೂರ್‌ನಲ್ಲಿ ಜನಿಸಿದರು. ಇವರು ಬಾಲ್ಯದಲ್ಲಿ ಕಂಚಿಗೆ ಹೋಗಿ ವೇದಾಧ್ಯಯನವನ್ನು ಕೈಗೊಂಡರು. ಶ್ರೀರಂಗಂನ ಯಮುನಾಚಾರ್ಯರಿಂದ ಪ್ರಭಾವಿತರಾಗಿ ವಿಶಿಷ್ಟಾದ್ವೈತ ಧರ್ಮವನ್ನು ಪ್ರಚಾರ ಮಾಡಿದರು. ಶ್ರೀ ರಾಮಾನುಜಾಚಾರ್ಯರು ಕ್ರಿ.ಶ.1098ರಲ್ಲಿ ಮೇಲುಕೋಟೆಗೆ ಹೋಗಿ, ಅಲ್ಲಿ ಹನ್ನೆರಡು ವರ್ಷ ವಾಸವಾಗಿದ್ದರು. ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯವನ್ನು ಪುನರ್ನಿರ್ಮಾಣ ಮಾಡಿ, ಪ್ರಮುಖವಾಗಿ ಹೊಯ್ಸಳರ ವಿಷ್ಣುವರ್ಧನನನ್ನು ಶ್ರೀ ವೈಷ್ಣವ ಧರ್ಮದ ಅನುಯಾಯಿಯಾಗಿ ಪರಿವರ್ತಿಸಿದರು. ಶ್ರೀ ವೈಷ್ಣವ ಧರ್ಮಕ್ಕೆ ಸಂಬಂಧಪಟ್ಟಂತೆ ಎಂಟು ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳೆಂದರೆ. ೧) ಶ್ರೀ ಭಾಷ್ಯ ೨)ಗೀತ ಭಾಷ್ಯ ೩) ವೇದಾಂತಸಾರಾಗ್ರಹ ೪) ವೇದಾಂತಸಾರ ೫)ಗದ್ಯತ್ರಯಮ್ ಶರಣಾಗತಿಗದ್ಯ ೬) ರಂಗಗದ್ಯ ೭) ಶ್ರೀವೈಕುಂಠಗದ್ಯ ಮತ್ತು ೮) ನಿತ್ಯ ಗ್ರಂಥ. ಇವರು ತಮ್ಮಇಳಿವಯಸ್ಸಿನಲ್ಲಿ(100ವರ್ಷ) ಶ್ರೀರಂಗಂಗೆ ತೆರಳಿದರು. ಶ್ರೀ ರಾಮಾನುಜಾಚಾರ್ಯರು 120 ವರ್ಷಗಳ ಕಾಲ ಬದುಕಿದ್ದರು. ಕ್ರಿ.ಶ.1137 ರಲ್ಲಿ ಇಹಲೋಕ ತ್ಯಜಿಸಿದರು. ಅವರ ಪ್ರತಿಮೆಯನ್ನು ಅವರ ಹುಟ್ಟೂರಾದ ಶ್ರೀಪೆರಂಬದೂರ್‌ನಲ್ಲಿ ನಿರ್ಮಿಸಲಾಗಿದೆ. ಅವರ ಶರೀರವನ್ನು ಕುಳಿತ ಭಂಗಿಯಲ್ಲಿ ಶ್ರೀರಂಗಂನ ದೇವಾಲಯದ ಆವರಣದಲ್ಲಿ ಇಡಲಾಗಿದೆ ಎಂದು ಹೇಳಲಾಗುತ್ತದೆ.

  • Puranic background / ಪೌರಾಣಿಕ ಹಿನ್ನೆಲೆ

    According to mythology, the deity Sri Cheluvanarayana was close to Srirama’s heart and was worshipped by the Kings of Surya Vamsha. Hence the deity is also known by the name Ramapriya. Legend has it that Sri Rama gave Sri Cheluvanarayana idol to Sri Krishna who also worshipped it. At the end of Dwapara Yuga, Sri Yadu Maharaj worshiped Sri Cheluvanarayana and hence the place came to be known as Yadugiri. ಪುರಾಣಗಳ ಪ್ರಕಾರ ಶ್ರೀ ಚೆಲುವನಾರಾಯಣಸ್ವಾಮಿಯು ಶ್ರೀರಾಮನ ಇಷ್ಟದೈವವಾಗಿತ್ತು. ಶ್ರೀರಾಮನು ಈ ಮೂರ್ತಿಗೆ ಪೂಜೆ ಸಲ್ಲಿಸಿದ್ದನೆಂಬ ನಂಬಿಕೆಯಿದೆ. ಆದ್ದರಿಂದ ಈ ಮೂರ್ತಿಯನ್ನು “ರಾಮಪ್ರಿಯ “ ಎಂದೂ ಕರೆಯುತ್ತಾರೆ. ಪುರಾಣಗಳ ಪ್ರಕಾರ ಶ್ರೀರಾಮನು ಶ್ರೀಕೃಷ್ಣನಿಗೆ ಶ್ರೀ ಚೆಲುವನಾರಾಯಣಸ್ವಾಮಿಯ ಮೂರ್ತಿಯನ್ನು ಕೊಟ್ಟಿದ್ದನೆಂಬ ನಂಬಿಕೆಯಿದೆ. ದ್ವಾಪರಯುಗದಲ್ಲಿ ಶ್ರೀ ಯದುಮಹಾರಾಜರು ಈ ಮೂರ್ತಿಗೆ ಪೂಜೆ ಮಾಡಿದ್ದರೆಂಬ ನಂಬಿಕೆಯಿದೆ; ಇದರಿಂದ ಈ ಸ್ಥಳವು ಯದುಗಿರಿ ಎಂದೂ ಪ್ರಖ್ಯಾತವಾಯಿತೆಂದು ಹೇಳಲಾಗುತ್ತದೆ.

  • Sri Cheluvanarayana Swamy Temple / ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯ

    The Existing temple complex of Melukote was constructed during the time of Srivaishnava Saint Sri Ramanuja in the 12th century. He stayed in Melukote for 12 years and gained many followers, including the Hoysala King, Vishnuvardhana. Legend has it that Sri Ramanuja dreamt of Sri Cheluvanarayana beckoning him to unearth the Vishnu idol from the ruins, in a nearby place. With the help of King Vishnuvardhana and his army, Ramanuja dug up the idol of Cheluvanarayana and re-installed the deity in a newly constructed temple. He also established regular prayers and rituals for the deity. From then the place gained the name "Yathishaila" (Saint Hill). The temple of Sri Cheluvanarayana Swamy had grants from the Mysore kings who offered silver ritual utensils, lamps and highly valuable ornaments especially the crowns called Mudis. ಇತಿಹಾಸದ ಪ್ರಕಾರ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯವು ಶ್ರೀವೈಷ್ಣವಧರ್ಮದ ಸ್ಥಾಪನಾಚಾರ್ಯರಾದ ಶ್ರೀ ರಾಮಾನುಜಾಚಾರ್ಯರ ಕಾಲದಲ್ಲಿ ಪುನರ್ನಿರ್ಮಾಣವಾಯಿತು. ಶ್ರೀ ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿ ಹನ್ನೆರಡು ವರ್ಷಗಳ ಕಾಲ ನೆಲೆಸಿದ್ದು, ವೈಷ್ಣವ ಧರ್ಮವನ್ನು ಪ್ರಚಾರಪಡಿಸಿ ಅನೇಕ ಅನುಯಾಯಿಗಳನ್ನು ಗಳಿಸಿದರು. ಇವರಲ್ಲಿ ಹೊಯ್ಸಳ ದೊರೆಯಾದ ವಿಷ್ಣುವರ್ಧನನೂ ಒಬ್ಬನು. ಶ್ರೀ ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿದ್ದಾಗ ಅವರಿಗೆ ಕನಸಿನಲ್ಲಿ ಶ್ರೀ ಚೆಲುವನಾರಾಯಣ ಸ್ವಾಮಿಯ ಮೂರ್ತಿಯು ಭೂಮಿಯಲ್ಲಿ ಅಡಗಿದ್ದಾಗಿ ಗೋಚರಿಸುತ್ತದೆ. ನಂತರ ಅವರು ಆ ಸ್ಥಳವನ್ನು ಪತ್ತೆಮಾಡಿ ಭೂಮಿಯಿಂದ ಚೆಲುವನಾರಾಯಣಸ್ವಾಮಿಯ ವಿಗ್ರಹವನ್ನು ತೆಗೆದು ಅಲ್ಲಿಯೇ ಪ್ರತಿಷ್ಠಾಪಿಸಿ, ನಿತ್ಯಪೂಜಾವಿಧಿಗಳನ್ನು ನೆರವೇರಿಸಲು ವ್ಯವಸ್ಥೆ ಮಾಡಿದುದಾಗಿ ಸ್ಥಳ ಪುರಾಣ ತಿಳಿಸುತ್ತದೆ. ಶ್ರೀ ರಾಮಾನುಜಾಚಾರ್ಯರು ಈ ಕ್ಷೇತ್ರದಲ್ಲಿ ನೆಲೆಸಿದ್ದರಿಂದ ಈ ಕ್ಷೇತ್ರ “ಯತಿಶೈಲ” ಎಂಬುದಾಗಿಯೂ ಪ್ರಖ್ಯಾತವಾಯಿತು. ಮೈಸೂರಿನ ಅರಸರಿಂದ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯಕ್ಕೆ ಅನೇಕ ಕೊಡುಗೆಗಳು ಬಂದಿವೆ. ಅವುಗಳಲ್ಲಿ ಪ್ರಮುಖವಾದವು ಬೆಳ್ಳಿಯ ಪೂಜಾಸಾಮಗ್ರಿಗಳು, ದೀಪಗಳು, ಬೆಲೆಬಾಳುವ ಆಭರಣಗಳು ಹಾಗೂ ರಾಜಮುಡಿಗಳು.

You don't have permission to register