History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Sose Kallu (Stone of daughter-in-law) / ಸೊಸೆ ಕಲ್ಲು

    There is a tiny stone right opposite the idol of the deity at the sanctum sanctorum. This stone is called as Sose Kallu. There is a special story attached to this stone. A mother-in-law, who used to torment her daughter-in-law every day at home followed her on a day with a rage and saw her daughter-in-law standing in front of the Goddess and doing meditation. The enraged mother-in-law shouted at her saying “Is the Darshan of Goddess more important to you than household duties.” The mother-in-law also took a cup (Chandra Battalu) that was lying by the side and crashed it on the forehead of the daughter-in-law. Unable to bear the pain after being hit, the daughter-in-law cried “Oh Mother Hasanamba, please protect me”. Moved by the cry of the daughter-in-law, the Motherly Goddess, who was impressed by her devotion, presented her with a boon to stay near her. It is said that the daughter-in-law is staying there still in the form of a tiny stone. It is believed that the daughter-in-law moves forward every year to the extent of a paddy grain and that the Kali Yuga will end at the moment she reaches the feet of the Goddess. This stone, symbolic of the daughter-in-law, can be still seen at the sanctum sanctorum. ದೇಗುಲದ ಗರ್ಭಗುಡಿಯಲ್ಲಿ ದೇವಿಯ ವಿಗ್ರಹದ ಎದುರು ಒಂದು ಪುಟ್ಟ ಕಲ್ಲು ಇದೆ. ಅದನ್ನು ಸೊಸೆ ಕಲ್ಲು ಎನ್ನುತ್ತಾರೆ. ಅದಕ್ಕೊಂದು ವಿಶೇಷ ಕಥೆಯಿದೆ. ಪ್ರತಿನಿತ್ಯ ಸೊಸೆಗೆ ಕಿರುಕುಳ ನೀಡುತ್ತಿದ್ದ ಅತ್ತೆಯು ಒಂದು ದಿನ ಸೊಸೆಯನ್ನು ಕಂಡು ಸಿಟ್ಟಿನಿಂದ ಹಿಂಬಾಲಿಸಿ ಹೋಗಲು, ಆಕೆಯು ಸೀದಾ ದೇವಾಲಯವನ್ನು ಸೇರಿ ದೇವಿಯ ಧ್ಯಾನದಲ್ಲಿ ಮಗ್ನಳಾಗಿರುವುದನ್ನು ಕಂಡು ಕೋಪದಿಂದ “ಮನೆಯ ಕೆಲಸಕ್ಕಿಂತ ದೇವಿ ದರ್ಶನವೇ ನಿನಗೆ ಮುಖ್ಯವಾಯಿತೇ?” ಎಂದು ಕೂಗಾಡಿ ಅಲ್ಲಿಯೇ ಪಕ್ಕದಲ್ಲಿದ್ದ ಚಂದ್ರಬಟ್ಟಲನ್ನು ತೆಗೆದುಕೊಂಡು ಸೊಸೆಯ ತಲೆಗೆ ಕುಕ್ಕಿದಾಗ, ನೋವನ್ನು ತಾಳಾಲಾರದ ಸೊಸೆಯು “ಅಮ್ಮಾ ಹಾಸನಾಂಬೆ, ತಾಯೀ ಕಾಪಾಡು” ಎಂದು ಭಕ್ತಿಯಿಂದ ಆರ್ತನಾದ ಮಾಡಿದಾಗ ಕರುಣಾಮಯಿ ಮಾತೃ ಹೃದಯದ ದೇವಿಯು ಸೊಸೆಯ ಭಕ್ತಿಗೆ ಮೆಚ್ಚಿ “ಯಾವಾಗಲೂ ನೀನು ನನ್ನ ಸನ್ನಿಧಾನದಲ್ಲೇ ನೆಲೆಸು” ಎಂದು ವರವನ್ನು ನೀಡಿದಾಗ ಸೊಸೆಯು ಅಲ್ಲೇ ಕಲ್ಲಾಗಿ ನೆಲಸಿದಳೆಂದು ಪ್ರತೀತಿ ಇದೆ. ವರ್ಷಕ್ಕೊಮ್ಮೆ ಒಂದು ಭತ್ತದ ಕಾಳಿನಷ್ಟು ದೇವಿಯ ವಿಗ್ರಹದ ಕಡೆ ಚಲಿಸುವಳೆಂದೂ, ಆಕೆಯು ದೇವಿ ಪಾದಗಳನ್ನು ತಲುಪಿದ ಕ್ಷಣವೇ ಕಲಿಯುಗವು ಅಂತ್ಯಗೊಳ್ಳುವುದೆಂದೂ ಹೇಳಲಾಗುತ್ತದೆ. ಈ ಸೊಸೆಕಲ್ಲನ್ನು ಈಗಲೂ ಹಾಸನಾಂಬ ದೇವಾಲಯದ ಗರ್ಭಗುಡಿಯಲ್ಲಿ ಕಾಣಬಹುದು.

  • Sri Siddeshwara temple / ಶ್ರೀ ಸಿದ್ದೇಶ್ವರ ದೇವಾಲಯ

    There is an aesthetically attractive shrine that can be seen as soon as entering the main door of Sri Hasanamba temple. The self-manifested idol of the Lord Siddeshwara in this temple is in the form of Sri Ishwara presenting the Pashupatastra to Arjun. Vapors of water seeping through the forehead of the Lord is the mystic feature of this deity. Although the water seeps throughout the year, it can only be seen once in a year, when the temple is thrown open for the public. Every year, the mini-replica of the Goddess (Utsavamoorti) is taken out in a spectacular procession on the No Moon Day. Ravanotsava, Balipadyami and Chandramandala car festival (Rathotsava) are held here on a grand scale. The family of Patels of Hassan have contributed a lot to the present attractive and enthralling structure of the temple. ಶ್ರೀ ಹಾಸನಾಂಬಾ ದೇವಾಲಯದ ದ್ವಾರದಿಂದ ಒಳಪ್ರವೇಶಿಸಿದ ತಕ್ಷ್ಣವೇ ಮೊದಲು ನೋಡಬಹುದಾದ ಶ್ರೀ ಸಿದ್ದೇಶ್ವರ ಸ್ವಾಮಿಯ ದೇವಾಲಯವು ಅತ್ಯಂತ ಸುಂದರವಾಗಿದೆ. ಈ ದೇವಾಲಯದಲ್ಲಿರುವ ಸ್ವಯಂಭೂ ವಿಗ್ರಹವು ಶ್ರೀ ಈಶ್ವರನು ಅರ್ಜುನನಿಗೆ ಪಾಶುಪತಾಸ್ತ್ರಗಳನ್ನು ನೀಡುತ್ತಿರುವ ಭಂಗಿಯಲ್ಲಿದೆ. ಉದ್ಭವ ಮೂರ್ತಿಯ ಹಣೆಯ ಮೇಲೆ ಸದಾ ಜಿನುಗುತ್ತಿರುವ ನೀರಿನ ಬಿಂದುಗಳು ನಯನಮನೋಹರ. ವರ್ಷಪೂರ್ತಿಯೂ ಈ ದೃಶ್ಯವನ್ನು ಕಾಣಬಹುದಾದರೂ ಶ್ರೀ ಹಾಸನಾಂಬ ದೇವಾಲಯದ ಬಾಗಿಲುಗಳನ್ನು ಕೆಲವೇ ದಿನಗಳ ಮಟ್ಟಿಗೆ ತೆರೆಯಲಾಗುವುದರಿಂದ ವರ್ಷಕ್ಕೆ ಒಮ್ಮೆ ಮಾತ್ರ ಈ ಕೌತುಕವನ್ನು ವೀಕ್ಷಿಸಬಹುದಾಗಿದೆ. ಪ್ರತಿ ವರ್ಷವೂ ಈ ದೇವಾಲಯದ ಉತ್ಸವ ಮೂರ್ತಿಯನ್ನು ವೈಭವೋಪೇತವಾದ ಮೆರವಣಿಗೆಯಲ್ಲಿ ಕರೆದೂಯ್ಯಲಾಗುತ್ತದೆ. ಅಮಾವಾಸ್ಯೆಯಂದು ರಾವಣೋತ್ಸವ, ಬಲಿಪಾಡ್ಯಮಿ, ಚಂದ್ರಮಂಡಲ ರಥೋತ್ಸವ ಮುಂತಾದ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತವೆ. ಶ್ರೀ ಹಾಸನಾಂಬ ದೇವಾಲಯ ಹಾಗೂ ಅದರ ಸುತ್ತಮುತ್ತಲಿರುವ ದೇವಾಲಯಗಳನ್ನು ಆಕರ್ಷಣೀಯವಾಗಿ ನಿರ್ಮಿಸುವಲ್ಲಿ ಹಾಸನದ ಪಟೇಲ್ ವಂಶಸ್ಥರು ಅಪಾರವಾಗಿ ಕೊಡುಗೆ ನೀಡಿದ್ದಾರೆ.

  • Historical Background / ಇತಿಹಾಸಿಕ ಹಿನ್ನಲೆ

    Hasanamba temple is a unique temple of its kind where in enshrined Goddess is represented by an Ant hill'. The temple is open to visiting devotees only for a week time once in a year during October month. The temple is most revered shrine in Hassan Town the District head quarters which is named after the presiding deity Hasanamba the smiling Goddess. A big fair is being held every year on the opening of the temple doors. The temple town Hassan is known for its temple Architecture as one can visit several temples with amazing carvings and sculptures of Hoysala architecture. Hasanamba temple, Siddeshwara swamy temple, Belur and Halebeedu temple are a few of such temples to mention. The famous Hasanamba temple has been built in 12th century AD during the period of Krishnappa Naik a Palegar under Hoysala Dynasty. Another temple at the entrance of Hasanamba temple is Siddeshwara swamy temple which has also been built during 12th century by Sri Venkatappa Naik one of the ruler of Nayaka clan of Hoysala period. The shrine enshrines a Main deity Siddeshwara swamy in the form of Linga. It displays the trinity Bramha, Vishnu and Maheshwara and Surrounded by Ganesha and Kartikeya. Siddeshwara Rathotsava which is the highlight of Hasanamba utsava being celebrated on the occasion of Balipadyami. The unique feature of the utsava is that the rituals and Jagarane is being held on the occasion. These are the last Glimpses of the pilgrims gets at the temple of Goddess Hasanamba. As soon as the festivities are ended the temple doors will be closed and responded only year later. However the lamp in the sanctum sanatorium of Hasanamba keeps burning throughout the year it is said. The Sthala purana of Hasanamba temple through light on the existence of divine power. It is said , that during the earlier period, the saptamatruka devis viz Bramhi, Maheshwari, Kumari, Vaishanavi, Varati, Indrani and Chamundi who were traveling on one morning towards south Bharath from Kashi happened to visit the present place which attracted their attention with its scenic beauty. As such they decided to stay at this place. While six devis settled themselves at Hassan the other one stayed at Kenchammana Hasakote in the name of Kenchamba devi. Hasnamba name depicts the meaning of smiling Goddess. It is not known still about the secret behind the Hasanamba diets existing in the form of Ant Hill. Historically the place Hassan was ruled by Chola king Bukkanaika and his family for over a period of one hundred years during 11th century. It is said that Bukkanaika in remberance of his victory built a fort town as Channapatna. However he had a bad omen while he was about to enter that new fort town. The disgraced Nayaka is said to have been consoled by Goddess Hasanamba in his dream and initiated him to built another Fort Town. As such he built another Fort Town and named it as Hassan in the name of the presenting deity Hasanamba. A stone inscription is installed at kuderegundi village said to have been a Veeragallu of 11th century period thrown light on Goddess Hasanamba. The abode of Saptamatrukas of epic puranas enshrined as Hasanamba is a place of divine power and a pilgrimage center. ಹಾಸನಾಂಭ ದೇವಿಯನ್ನು ಭಕ್ತರು ಎಲ್ಲ ಸಮಯದಲ್ಲೂ ದರ್ಶನ ಮಾಡಲು ಸಾಧ್ಯವಿಲ್ಲ. ವರ್ಷಕ್ಕೊಂದು ಸಾರಿ ಆಶ್ವೀಜ ಮಾಸ ಪೂರ್ಣೀಮೆಯ ನಂತರ ಬರುವ ಗುರುವಾರದಂದು ಬಾಗಿಲು ತೆರೆದರೆ ಅನಂತರ ಬಲಿಪಾಡ್ಯಮಿ ಮರುದಿನ ಬಾಗಿಲು ಮುಚ್ಚುವುದು. ಪುನಃ 1 ವರ್ಷದ ಕಾಲ ದೇವಿಯ ದರ್ಶನ ಸಿಗುವುದಿಲ್ಲ. ಬಾಗಿಲು ಮುಚ್ಚಿದ ದಿವಸ ಹಚ್ಚಿದ ದೀಪವು ಮುಂದಿನ ವರ್ಷ ಬಾಗಿಲು ತೆರೆಯುವ ತನಕ ಒಂದು ವರ್ಷಗಳ ಕಾಲ ದೇವಿಯ ಗರ್ಭಗುಡಿಯಲ್ಲಿ ದೀಪ ಉರಿಯುವುದು ದೇವಿಯರ ವಿಶೇಷ ಮಹಿಮೆ. ಹಾಸನಾಂಭ ದೇವಿಯ ಬಾಗಿಲು ತೆಗೆಯುವ ಸಮಯ ಬಂದಿತೆಂದರೆ ಜಿಲ್ಲೆಯ ಎಲ್ಲ ಮೂಲೆಗಳಿಂದಲೂ ಭಕ್ತಾದಿಗಳು ದೇವಿಯ ದರ್ಶನಕ್ಕೆ ಸಾಲು ಸಾಲಾಗಿ ನಿಂತು ದರ್ಶನ ಮಾಡುವ ನೋಟವು ಜಾತ್ರೆಯಂತೆ ಕಾಣುತ್ತದೆ. ಬಾಗಿಲು ತೆರೆಯುವ ಸಮಯ ಬಂದಿತೆಂದರೆ ದರ್ಶನಕ್ಕೊಸ್ಕರ ಭಕ್ತಾದಿಗಳು ಕಾದು ನಿಂತಿರುತ್ತಾರೆ. ಬಾಗಿಲು ತೆಗೆಯುವ ದಿವಸ ಹಾಸನದಲ್ಲಿರುವ ಎಲ್ಲ ತಳವಾರ ಮನೆತನದವರು ದೇವಿಯ ಗರ್ಭಗುಡಿಯ ಎದುರಿಗೆ ಬಾಳೆ ಕಂದನ್ನು ನೆಟ್ಟು ಹಾಸನಾಂಭೆಯನ್ನು ಭಕ್ತಿಯಿಂದ ಪೂಜಿಸುತ್ತ ಬಾಳೆ ಕಂದ(ಕಂಬ)ನ್ನು ಕತ್ತಿರಿಸಿದ ನಂತರವೇ ಬಾಗಿಲನ್ನು ತೆಗೆಯುವ ಪ್ರತೀತಿ ಮೊದಲಿನಿಂದಲೂ ಇದೆ. ಈ ದೃಶ್ಯವನ್ನು ನೋಡಲು ಭಕ್ತಾದಿಗಳು ಕಾದುಕುಳಿತಿರುತ್ತಾರೆ. ಮೊದಲು ಈ ಊರಿಗೆ ಸಿಂಹಾಸನ ಪುರಿ ಎಂದು ಹೆಸರಿದ್ದು ಹಾಸನಾಂಭ ದೇವಿಯು ನೆಲೆಸಿದ ಮೇಲೆ ಹಾಸನ ಎಂದು ಹೆಸರು ಬಂದಿತು. ಹಾಸನಾಂಬೆಯ ದೇವಾಲಯದ ದ್ವಾರದಿಂದ ಒಳ ಪ್ರವೇಶಿಸಿದರೆ ತಕ್ಷಣ ಮೊದಲು ನೋಡಬಹುದಾದ ಸಿದ್ದೇಶ್ವರ ಸ್ವಾಮಿ ದೇವಾಲಯವು ಸುಂದರ ರೂಪದಲ್ಲಿದೆ. ಈ ದೇವಾಲಯದಲ್ಲಿ ಸಿದ್ದೇಶ್ವರ ಸ್ವಾಮಿಯನ್ನು ಲಿಂಗರೂಪದಲ್ಲದೆ ಉದ್ಬವ ಮೂರ್ತಿಯು ಅರ್ಜುನನಿಗೆ ಈಶ್ವರನು ಪಾಶುಪತಾಸ್ತ್ರ ಕೊಡುವ ಅಕಾರದಲ್ಲಿದೆ. ಉದ್ಬವ ಮೂರ್ತಿಯ ಹಣೆಯ ಮೇಲೆ ಜಿನಿಗುವ ರೂಪದಲ್ಲಿ ಪ್ರತಿವರ್ಷವು ವಿಶೇಷವಾಗಿ ನೋಡಬಹುದು. ಪ್ರಕೃತಿಯ ವರ ಪಡೆದು ಸಂಸ್ಕøತಿಯ ಸಾರದ ದೀರೋಧಾತ ಗುಣ ಮೆರೆಸಿ, ಸರ್ವ ಮತ ಸಮನ್ವಯ ತತ್ವವನ್ನು ಅನುಷ್ಠಾನದಲ್ಲಿ ತಂದುಕೊಂಡು ನಾಡಿಗೆ ಮಾದರಿಯಾದ ಚಕ್ರಾಧಿಪತ್ಯವನ್ನು ಭರಿಸಿ ಮೆರೆದ ಪುಣ್ಯ ಭೂಮಿ ಹಾಸನ ಜಿಲ್ಲೆ. ಈ ಹಾಸನ ಜಿಲ್ಲೆಯ ಆಡಳಿತ ಕೇಂದ್ರ ನಗರ ಹಾಸನ. ಹಾಸನ ಅಭಿಮಾನದ ಅನುಪಮ ಪ್ರಭಾವದ ಶಕ್ತಿ ದೇವತೆ ಶ್ರೀ ಹಾಸನಾಂಬೆ. ಈಕೆಯನ್ನು ಹಾಸನಮ್ಮ, ಹಾಸನದ ಅಮ್ಮ, ಸಪ್ತಮಾತೃಕೆಯರೆಂದು ಅನನ್ಯ ಭಕ್ತಯಿಂದ ಆರಾಧಿಸುವುದೇ ಪರಿಪಾಠವಾಗಿದೆ. ಅಮ್ಮ ಎನ್ನುವ ಮಾತು ಮನುಷ್ಯನ ಬಾಯಿಂದ ಮೊದಲು ಬಂದ ಮಾತು. ಅದಕ್ಕಾಗಿ ಮಾತೃದೇವೋಭವ ಎಂದರು ನಮ್ಮ ಹಿರಿಯರು. ಅಮ್ಮ ನಮ್ಮ ಇರುವಿಗೆ ಕಾರಣವಾಗಿ ನಮ್ಮ ನೆಮ್ಮದಿಗೆ ನೆರವಾಗುವ ತಾಯಿ ಎಂದು ಅರ್ಥ. ಮೂರ್ತಿಕಲ್ಪನೆ ಒದಗಿದ ಕಾಲದಲ್ಲಿ ಪುರಾಣ ಮೈದಳೆದ ಕಾಲದಲ್ಲಿ ಈಅಮ್ಮನ ಎರಡುಮುಖಗಳಿಗೆ ರೂಪ ಸಿದ್ದವಾಯಿತು. ಶಕ್ತಿ ಹಲವಾರು ವಿವರಗಳನ್ನು ಸೂಚಿಸುವಂತೆ ಹತ್ತಾರು ಕೈಗಳು, ಕಪಾಲ ಶೂಲ, ಖಡ್ಗ, ಅಂಕುಶಗಳು ಬಂದವು. ವರದ ಅಭಯ ಪುಷ್ಪ ಅನ್ನ ಪಾತ್ರೆಗಳು ಬಂದವು. ಮುಖದಲ್ಲಿ ಮಂದಾಹಾಸವು ಮೂಡಿತು. ಹುರಿನಾಲಿಗೆ, ಕೋರೆಡಾಡೆಗಳು, ಕೆಂಗಣ್ಣುಗಳು ಕಾಣಿಸಿ ಕೊಂಡವು. ಸುಖಾಸನದಲ್ಲಿ ರಾಜರಾಜೇಶ್ವರಿಯಾಗಿ ಕೂತವಳು ಅವಳೇ. ಸಿಟ್ಟಿನಿಂದ ಶಿವನ ಮೇಲೆ ಕುಣಿಯುತ್ತ ಬೆತ್ತಲೆಯಾಗಿ ಅಟ್ಟ ಹಾಸದಿಂದ ಕತ್ತಿ ಇರಿದು ನಿಂತವಳು ಅವಳೇ. ಸಿಂಹದ ಮೇಲೆರಿ ಅಸುರನನ್ನು ಕೊಲ್ಲುತ್ತ ಉಗ್ರವಾಗಿಯು ಸೌಮ್ಯವಾಗಿಯು ತೊರಿಕೊಂಡವಳೂ ಅವಳೆ. ತನ್ನ ತಲೆಯನ್ನೆ ಕಡಿದುಕೊಂಡು ಕುತ್ತಿಗೆಯಿಂದ ಚಿಮ್ಮುವ ರಕ್ತವನ್ನು ಡಾಕಿನಿಯರಿಗೆ ಕುಡಿಸುತ್ತಿರುವ ಮಸ್ತ ದೇವಿಯೂ ಅವಳೆ. ಶ್ರವಣ ಸಂಪ್ರದಾಯದ ಪ್ರಭಾವದಿಂದ ಸನ್ಯಾಸಿನಿಯ ಮನೋವೃತ್ತಿ ಬಲಗೊಂಡಾಗ ಹೆಣ್ಣು, ಹೊನ್ನು, ಮಣ್ಣು ಈ 3 ರನ್ನು ಬಿಟ್ಟುಬಿಡಬೇಕು ಎನ್ನುವ ಉಪದೇಶ ಸಿದ್ದವಾಯಿತು. ದೇವಿಯ ಆರಾಧನೆ ನಡೆಯುವ ಕೆಲವು ಪ್ರಸಿದ್ದ ಸ್ಥಳಗಳು, ಕಾಂಚಿಪುರ (ಕಂಚಿಕಾಮಾಕ್ಷಿ), ಕಾಶಿ (ವಿಶಾಲಾಕ್ಷಿ), ಮಧುರೆ(ಮೀನಾಕ್ಷಿ), ತುಳಜಪುರ(ಭವಾನಿ), ಶೃಂಗೇರಿ(ಶಾರದೆ), ಮಂಗಳೂರು(ಮಂಗಳಾದೇವಿ), ಕೊಲ್ಲೂರು(ಮೂಕಾಂಭಿಕೆ), ಸೌದತ್ತಿ (ಯಲ್ಲಮ್ಮ), ಕೇರಳದ (ಭಗವತಿ), ಬಂಗಾಳದ (ದುರ್ಗೆ), ಹಾಸನದ (ಹಾಸನಾಂಬೆ) ಹಿಂದೂ ದೇವಗಣದಲ್ಲಿ ಸಪ್ತ ಮಾತೃಕೆಯರಿಗೊಂದು ವಿಶಿಷ್ಟ ಸ್ಥಾನವಿದೆ. ಭಾರತಾದ್ಯಂತ ಕಂಡುಬರುವ ಸಪ್ತ ಮಾತೃಕೆಯರ ಅಸಂಖ್ಯಾಂತ ಶಿಲ್ಪಗಳು ಈ ದೇವತೆಗಳ ಆರಾಧನೆಯ ಜನಪ್ರಿಯತೆಗೆ ದೀಕ್ಷೆ. ಶಿಲ್ಪದಲ್ಲಿ ಸಪ್ತ ಮಾತೃಕೆಯರನ್ನು ಒಂದೇ ಫಲದಲ್ಲಿ ಸಾಲಾಗಿ ಅಥವ ಏಳು ಬೇರೆಬೇರೆ ಮೂರ್ತಿಗಳಾಗಿ ಕಡೆದಿರುವುದು ವಾಡಿಕೆ. ಆಗ ಅವರ ಕ್ರಮ ಸಾಮನ್ಯವಾಗಿ ಬ್ರಾಹ್ಮಿ ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಹಾಗೂ ಚಾಮುಂಡಿ. ಬ್ರಾಹ್ಮಿಯ ಬಲಭಾಗದಲ್ಲಿ ವೀರಭದ್ರನನ್ನು, ಚಾಮುಂಡಿಯ ಎಡಭಾಗದಲ್ಲಿ ಗಣೇಶನನ್ನು ಇರಿಸಿ ನಡುವೆ ಮಾತೃಗಣಗಳನ್ನಾರಿಸಬೇಕೆಂದು ವಿಧಿ ಇದೆ. ದೇವತೆಗಳ ಶಕ್ತಿಯರಾದ ಇವರು ಸಂಬಂಧಪಟ್ಟ ಪುರುಷ ದೇವತೆಗಳಂತೆಯೇ ಆಯುಧ, ಆಭರಣ, ವಾಹನ ಹಾಗೂ ಸಂಕೇತಗಳನ್ನು ಹೊಂದಿರುವುದು ಪದ್ದತಿ. ಬ್ರಾಹ್ಮಿಯು ಬ್ರಹ್ಮನಂತೆ, ಮಹೇಶ್ವರಿಯು ಶಿವನಂತೆ, ಕೌಮಾರಿ ಸ್ಕಂದನಂತೆ, ಇತ್ಯಾದಿ. ಹೊಯ್ಸಳರ ಕಾಲದ ಸಪ್ತಮಾತೃಕೆಯರ ವಿಗ್ರಹಗಳು ಮೈತುಂಬ ಆಭರಣಗಳೂ ಸುಂದರವಾದ ಕೀರಿಟ ಮಂದಹಾಸ ಪೂರ್ಣ ಮುಖ ಮುದ್ರೆಗಳಿಂದ ತುಂಬಾ ಆರ್ಕಷಣಿಯಕರವಾಗಿರುತ್ತದೆ. ಐತಿಹಾಸಿಕವಾಗಿ ಈ ತಾಲ್ಲೂಕನ್ನು ಚೋಳರ ಅರಸರ ಅಧಿಪತಿಯಾದ ಬುಕ್ಕನಾಯಕ ಮತ್ತು ಅವನ ವಂಶಸ್ಥರು ಕ್ರಿ.ಶ.ಸುಮಾರು 11ನೇ ಶತಮಾನದಿಂದ ಒಂದು ಶತಮಾನಕ್ಕೂ ಹೆಚ್ಚು ಕಾಲ ಆಳಿದರು ಎಂದು ತಿಳಿದುಬರುತ್ತದೆ. ಹೊಯ್ಸಳರಿಗೂ ಪೂರ್ವ ಕಾಲದಲ್ಲಿದ್ದ ಗಂಗರ ಆಡಳಿತಕ್ಕೆ ಒಳಪಟ್ಟಿತ್ತು. 11ನೇ ಶತಮಾನದಲ್ಲಿ ಬುಕ್ಕನಾಯಕನು ತನ್ನ ವಿಜಯೋತ್ಸವದ ನೆನಪಿಗಾಗಿ ಒಂದು ಕೋಟೆಯನ್ನು ಕಟ್ಟಿ ಆ ಸ್ಥಳಕ್ಕೆ ಚನ್ನಪಟ್ಟಣ ಎಂದರೆ ಚೆಲುವಾದ ಪಟ್ಟಣ ಎಂದು ಹೆಸರಿಟ್ಟನಂತೆ. ಈ ನಾಯಕ ಒಮ್ಮೆ ಪ್ರಯಾಣ ಹೊರಟಾಗ ಒಂದು ಮೊಲ ಅಡ್ಡಬಂದು ಪಟ್ಟಣದ ಒಳಗೆ ಪ್ರವೇಶಿಸಿತ್ತೆಂದು ಅಪಶಕುನದಿಂದ ನಾಯಕನು ನೊಂದುಕೊಂಡನಂತೆ ಆಗ ಅವನಿಗೆ ಹಾಸನಾಂಭ ಪ್ರತ್ಯಕ್ಷಳಾಗಿ ಮಗು ಖಿನ್ನಮನಸು ತೊರೆದು ಈ ಸ್ಥಳದಲ್ಲಿ ಕೋಟೆಯನ್ನು ಕಟ್ಟು ಎಂದಳಂತೆ ಅದೇ ಪ್ರಕಾರ ನಾಯಕನು ಒಂದು ಕೋಟೆಯನ್ನು ಕಟ್ಟಿ ಅದಕ್ಕೆ ಹಾಸನಾಂಭ ಎಂದು ಹೆಸರಿಟ್ಟನೆಂದು ಪ್ರತೀತಿ ಇದೆ.

You don't have permission to register