History - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temples  >  Sri Kshetra Kanakagiri  >  History</span
 • Historical Background / ಇತಿಹಾಸಿಕ ಹಿನ್ನಲೆ

  The fact that Sri Kanakagiri is one of the most ancient Jain pilgrim centres in the world came to light very recently, thanks to excavations and detailed studies of the historical evidences available in the place. In ancient times, Sri Kanakiagiri was known as Hemanga. According to historical documents, Bhagawan Sri Mahaveera had come to Sri Kanakagiri Kshetra and conducted a spiritual discourse called ‘Samavasarana’ here. Kanakagiri is also known as ‘Kanakadri’, where ‘Kanaka’ means gold and ‘Giri’ or ‘Adri’ means hill. With the blessings of Jain Muni Simhanandi Acharya, the Ganga dynasty began its rule in Karnataka in 2nd century A.D., It was Ganga Kings who got Jain Basdis constructed atop the Kanakagiri during 5th and 6th century A.D., according to the available sources. ಶ್ರೀ ಕನಕಗಿರಿ ಕ್ಷೇತ್ರವು ಜಗತ್ತಿನಲ್ಲೇ ಅತ್ಯಂತ ಪ್ರಾಚೀನ ಜೈನ ಪವಿತ್ರ ಕ್ಷೇತ್ರಗಳಲ್ಲೊಂದು ಎಂಬ ವಿಷಯವು ಇತ್ತೀಚಿಗಷ್ಟೇ ಬೆಳಕಿಗೆ ಬಂದಿದೆ. ಶ್ರೀ ಕನಕಗಿರಿಯು ಪ್ರಾಚೀನಕಾಲದಲ್ಲಿ ಹೇಮಾಂಗದೇಶವೆಂದು ಪ್ರಸಿದ್ಧವಾಗಿತ್ತು. ಆಗಮಸಿದ್ಧಾಂತದಲ್ಲಿ ಉಲ್ಲೇಖಿಸಲಾಗಿರುವಂತೆ ಭಗವಾನ್ ಶ್ರೀ ಮಹಾವೀರರು ಹೇಮಾಂಗದೇಶಕ್ಕೆ ಆಗಮಿಸಿ ಸಮವಸರಣ ಸಭೆಯನ್ನು ಜರುಗಿಸಿದ್ದರೆಂದು ತಿಳಿದುಬರುತ್ತದೆ. ಕನಕ ಎಂದರೆ ಬಂಗಾರ ಮತ್ತು ಗಿರಿ ಅಥವಾ ಆದ್ರಿ ಎಂದರೆ ಬೆಟ್ಟ ಎಂದರ್ಥ. ಕ್ರಿ.ಶ. ಎರಡನೆಯ ಶತಮಾನದಲ್ಲಿ ಜೈನಮುನಿ ಸಿಂಹನಂದಿ ಆಚಾರ್ಯರ ಆಶೀರ್ವಾದದಿಂದ ಕರ್ನಾಟಕದಲ್ಲಿ ಗಂಗ ವಂಶದ ಸ್ಧಾಪನೆಯಾಯಿತು. ಈ ರಾಜರುಗಳು ಐದು ಮತ್ತು ಆರನೇ ಶತಮಾನದಲ್ಲಿ ಕನಕಗಿರಿ ಬೆಟ್ಟದ ಮೇಲೆ ಶಿಲಾಮಯ ಬಸದಿಯನ್ನು ಕಟ್ಟಿಸಿದರು, ಎಂದು ತಿಳಿದುಬರುತ್ತದೆ.

 • Guru Parampara / ಗುರು ಪರಂಪರೆ

  According to the various stone inscriptions unearthed here, Ajitamuni, Chandrasenacharya, Chandrakeertimuni, Vajranandi Siddhantadeva, Vidyanandi, Vadisihma, Bhattaakalanka, the pontiff of Kanakagiri Kshetra, Vadiraja Muni, Munichandradeva, Prabhendu Prabhachandra, Bahubali Pandita Deva, Bhattaraka of Lalithakeerthi near Hanasoge and several other scholarly persons, philosophers of high esteem achieved self-realisation and attained Samadhi or salvation in this place. The present Swamiji, Sri Bhuvanakeerthi Bhattaraka,a postgraduate in Sanskrit and a scholar in many languages and dialects, is heading Kanakagiri Kshetra and committed to its development and social services. ಶಿಲಾಶಾಸನಗಳ ಪ್ರಕಾರ ಅಜಿತಮುನಿ, ಚಂದ್ರಸೇನಾಚಾರ್ಯ, ಚಂದ್ರಕೀರ್ತಿಮುನಿ, ವಜ್ರನಂದಿ ಸಿದ್ಧಾಂತದೇವ, ವಿದ್ಯಾನಂದಿ, ವಾದಿಸಿಂಹ, ಕನಗಿರಿ ಪೀಠದ ಭಟ್ಟಾಕಳಂಕ ಮುನಿ, ವಾದಿರಾಜ ಮುನಿಗಳು, ಮುನಿಚಂದ್ರದೇವ, ಪ್ರಭೇoದು ಪ್ರಭಾಚಂದ್ರರು, ಬಾಹುಬಲಿ ಪಂಡಿತ ದೇವ, ಹನಸೋಗೆ ಬಳಿಯ ಲಲಿತಕೀರ್ತಿ ಭಟ್ಟಾರಕರು ಮುಂತಾದ ಪ್ರಸಿದ್ಧ ಧರ್ಮ ಪೀಠಾಚಾರ್ಯರಲ್ಲದೆ ಇನ್ನೂ ಅನೇಕ ಜೈನ ಮುನಿಗಳು ಇಲ್ಲಿ ಸನ್ಯಾಸಾನಂತರ ವಿಧಿಪೂರ್ವಕ ಸಮಾಧಿ ಪಡೆದರೆಂದು ತಿಳಿದುಬರುತ್ತದೆ. ಈಗಿನ ಜೈನ ಗುರುಗಳಾದ ಶ್ರೀ ಭುವನಕೀರ್ತಿ ಭಟ್ವಾರಕರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರರೂ, ಅನೇಕ ಭಾಷೆಗಳ ಪ್ರವೀಣರೂ ಆಗಿದ್ದು ಶ್ರೀ ಕನಕಗಿರಿಯ ಅಭಿವೃದ್ಧಿಗಾಗಿ ತಮ್ಮನ್ನು ತಾವೇ ಸಮರ್ಪಿಸಿಕೊಂಡಿದ್ದಾರೆ. ಶ್ರೀ ಗುರುಗಳು ಅನೇಕ ಸಮಾಜ ಸೇವಾ ಕಾರ್ಯಗಳನ್ನು ಸದಾ ಹಮ್ಮಿಕೊಂಡಿರುತ್ತಾರೆ.

 • Raja Vijaya’s regime / ರಾಜ ವಿಜಯನ ಕಾಲ

  It is mentioned in a book titled "Praacheena Rajavalee Kathaasaara" that King Vijaya of the Ganga dynasty was ruling over this region, which is on the banks of River Kaveri surrounded by a thick forest, which was known for a huge population of elephants. Talakadu was the capital city of that kingdom. One of his elephants was going to River Kaveri every day, plucking a lotus flower from there and submitting it at a particular spot. On excavation of the spot, statues of Sri Vrushabhadeva and Sri Parshwanatha were found there. The king arranged for the consecration of the two statues and built temples for them. "ಪ್ರಾಚೀನ ರಾಜಾವಳೀ ಕಥಾಸಾರ” ಗ್ರಂಥದ ಪ್ರಕಾರ, ಕಾವೇರಿ ನದಿಯ ತಟದ ಗಜಾರಣ್ಯ ಪರಿಸರದಲ್ಲಿದ್ದ ತಲಕಾಡು ಗಂಗವಂಶ ರಾಜರ ರಾಜಧಾನಿಯಾಗಿತ್ತು. ವಿಜಯನೆಂಬ ರಾಜನು ರಾಜ್ಯಭಾರ ಮಾಡುತ್ತಿದ್ದನು. ಅವನ ಆನೆಯು ಪ್ರತಿದಿನ ಕಾವೇರಿ ನದಿಯಿಂದ ಜಲ ಮತ್ತು ಕಮಲ ಪುಷ್ಪಗಳನ್ನು ತಂದು ಒಂದು ಸ್ಥಳದಲ್ಲಿ ಅರ್ಪಿಸುತ್ತಿತ್ತು. ಅಲ್ಲಿ ಶೋಧಿಸಿದಾಗ ದೊರೆತ ಶ್ರೀ ವೃಷಭದೇವ ಮತ್ತು ಶ್ರೀ ಪಾರ್ಶ್ವನಾಥರ ಪ್ರತಿಮೆಗಳನ್ನು ವಿಜಯರಾಜನು ಶ್ರದ್ಧೆ ಮತ್ತು ಭಕ್ತಿಪೂರ್ವಕವಾಗಿ ಪ್ರತಿಷ್ಠಾಪಿಸಿ ಜಿನಮಂದಿರಗಳನ್ನು ನಿರ್ಮಿಸಿದನು.

 • Vishnuvardhana’s regime / ವಿಷ್ಣುವರ್ಧನನ ಕಾಲ

  Vishnuvardhana, the then Hoysala ruler, was passing through difficult times and he did not have a son to succeed. On hearing the gracious popularity of the deity at Kanakagiri, he vouched to offer worship to Sri Parshwanatha. As soon as the royal preceptor offered the holy water with which the Lord had been anointed, the king experienced good omen indicating victory in the battle. In addition, he begot a son. He instantaneously offered prayer and worship to Lord Parshwanatha and got a statue of Sri Parshwanatha consecrated in his palace and rechristened the deity as Sri Vijaya Parshwanatha. He also named his son as Vijaya Narasimha. Punisamaiah, Chief Commander of Vishnuvardhana, got a sprawling Jain temple constructed at Chamarajanagar and consecrated the statue of Sri Parshwanatha on May 29, 1116 (Monday) or Jyeshtha Shuddha Pratipada of Durmukhi Samvatsara, when Holy Star Moola was reigning. He too called Sri Parshwanatha as Sri Vijaya Parshwanatha. Thus, this temple at Chamarajanagar has a history of nine hundred years. ಹೊಯ್ಸಳರಾಜನಾದ ವಿಷ್ಣುವರ್ಧನನು ಅನೇಕ ಬಾರಿ ಯುದ್ಧ ಸೇರಿದಂತೆ ತನ್ನ ಹಲವಾರು ಕಾರ್ಯಗಳಲ್ಲಿ ಅಸಫಲನಾಗಿದ್ದ. ಅವನಿಗೆ ಪುತ್ರಪ್ರಾಪ್ತಿಯೂ ಆಗಿರಲಿಲ್ಲ. ಶ್ರೀ ಪಾರ್ಶ್ವನಾಥ ಸ್ವಾಮಿಯ ಖ್ಯಾತಿಯನ್ನು ತಿಳಿದು ಹರಕೆಯನ್ನು ಸಲ್ಲಿಸಿದನಂತರ ರಾಜಪುರೋಹಿತರು ಅರಮನೆಯಲ್ಲಿ ಜಿನಗಂಧೋದಕ ಕೊಡಲು ಹೋದ ತಕ್ಷಣ ಅವನಿಗೆ ವಿಜಯದ ಸೂಚನೆ ದೊರಕಿತು. ಇನ್ನೊಂದೆಡೆ ಪುತ್ರರತ್ನವೂ ಪ್ರಾಪ್ತವಾಯಿತು. ಇದಕ್ಕಾಗಿಯೇ ರಾಜನು ಪಾರ್ಶ್ವನಾಥನನ್ನು ಪೂಜಿಸಿದ. ಅರಮನೆಯಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥನ ಉನ್ನತ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಸ್ವಾಮಿಯನ್ನು ಶ್ರೀ ವಿಜಯ ಪಾರ್ಶ್ವನಾಥನೆಂದು ಕರೆದನು ಹಾಗೂ ತನ್ನ ಪುತ್ರನಿಗೆ ವಿಜಯ ನಾರಸಿಂಹ ಎಂದು ನಾಮಕರಣ ಮಾಡಿದ ಎಂದು ಶಾಸನಗಳಿಂದ ತಿಳಿದು ಬರುತ್ತದೆ. ವಿಷ್ಣುವರ್ಧನನ ಸೇನಾಧಿಪತಿಯಾಗಿದ್ದ ಪುಣಿಸಮಯ್ಯನು ಚಾಮರಾಜನಗರದಲ್ಲಿ ಕ್ರಿ. ಶ. ಮೇ 29, 1116 ರಂದು (ಶಕವರ್ಷ 1039 ಅಥವಾ ದುರ್ಮುಖಿನಾಮ ಸಂವತ್ಸರದ ಜ್ಯೇಷ್ಟ ಶುದ್ಧ ಪ್ರತಿಪಾದ ಮೂಲಾ ನಕ್ಷತ್ರದ ಯೋಗವಿರುವಾಗ ಒಂದು ವಿಶಾಲ ಜಿನ ಮಂದಿರವನ್ನು ಕಟ್ಟಿಸಿ ಭಗವಾನ್ ಶ್ರೀ ವಿಜಯ ಪಾರ್ಶ್ವನಾಥ ಸ್ವಾಮೀ ವಿಗ್ರಹವನ್ನು ಪ್ರತಿಷ್ಠಾಪಿಸಿದ. ಇಂದು ಈ ಮಂದಿರಕ್ಕೆ 900 ವರ್ಷಗಳು ತುಂಬಿವೆ. ಹೀಗೆ ಸಂಪೂರ್ಣ ಮೈಸೂರು ಪ್ರಾಂತ್ಯದಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥರ ಪ್ರತಿಮೆಗಳು ಭಗವಾನ್ ಶ್ರೀ ವಿಜಯ ಪಾರ್ಶ್ವನಾಥರೆಂದೇ ಪ್ರಸಿದ್ಧಿಯನ್ನು ಪಡೆದಿವೆ.

 • Harihara Raya’s regime / ಹರಿಹರ ರಾಯನ ಕಾಲ

  According to a stone inscription at Maleyur, a village near Kanakagiri, King Harihara Raya of the Vijayanagar Empire, was facing defeats and failure in all expeditions and actions. On being told about the power of the deities at Kanakagiri, he offered worship to Sri Parshwanatha Swamy and sought the blessings for success. From then on, King Harihara Raya was successful in all his actions and activities. Delighted by the turn of events in life, King Harihara Raya gifted Maleyur village, along with its four frontiers, to the temple on Shravana Shuddha Paurnami of Shubhakrutanama Samvatsara (Saka era 1344) or August 2, 1422, and made a public announcement to that effect. A stone inscription detailing the above incident still exists at Maleyur. ಕನಕಗಿರಿಯ ಸಮೀಪದಲ್ಲಿರುವ ಮಲೆಯೂರು ಗ್ರಾಮದ ಒಂದು ಶಿಲಾಶಾಸನದ ಪ್ರಕಾರ, ವಿಜಯನಗರದ ಹರಿಹರ ರಾಯನು ಯುದ್ಧ ಹಾಗೂ ಇನ್ನಿತರ ಕಾರ್ಯಗಳಲ್ಲಿ ಅಸಫಲನಾಗುತ್ತಾ ಇರುತ್ತಾನೆ. ಕ್ಷೇತ್ರದ ಖ್ಯಾತಿಯಬಗ್ಗೆ ತಿಳಿದು ಆಗಮಿಸಿದ ರಾಜನು ಶ್ರೀ ಪಾರ್ಶ್ವನಾಥ ಸ್ವಾಮಿಗೆ ಅರ್ಚನೆಯನ್ನು ಮಾಡಿಸಿ ವಿಜಯದ ಅಭಿಲಾಷೆಯನ್ನು ಅರುಹಿಕೊಂಡ. ಕೆಲವೇ ದಿನಗಳಲ್ಲಿ ಅವನಿಗೆ ವಿಜಯದ ಸೂಚನೆ ದೊರಕಿತು. ಇದರಿಂದ ಅವನು ಪ್ರಸನ್ನನಾಗಿ ಶಾಲಿವಾಹನ ಶಕ 1344 ಶುಭಕೃತನಾಮ ಸಂವತ್ಸರದ ಶ್ರಾವಣ ಶುದ್ಧ ಪೌರ್ಣಮಿಯ ದಿನದಂದು (ಕ್ರಿ.ಶ. 02 ಆಗಸ್ಟ್ 1422) ಮಲೆಯೂರು ಗ್ರಾಮದ ನಾಲ್ಕೂ ಸೀಮೆಗಳನ್ನು ದಾನವಾಗಿ ನೀಡಿ ಶಾಸನವನ್ನು ಪ್ರತಿಷ್ಠಾಪಿಸಿ ದತ್ತಿ ನೀಡಿದ ಘೋಷಣೆಯನ್ನು ಹೊರಡಿಸಿದನು.

 • Main deity / ಆರಾಧ್ಯ ದೈವ

  There is a fort enclosing all the temples of Kanakagiri. The five main deities at Kanakagiri are Bhagawan Sri Parshwanatha, Sri Padmavathi Devi, Sri Jwalamalini Devi, Sri Kushmandini Devi and Sri Kshetrapala Brahma Yakshi. Bhagawan Sri Parshwanatha is the only statue that has been consecrated in the sanctum sanctorum. ಶ್ರೀ ಕನಕಗಿರಿಯ ಎಲ್ಲಾ ದೇವಸ್ಥಾನಗಳನ್ನು ಒಳಗೊಂಡಿರುವಂತೆ ಒಂದು ಬೃಹತ್ ಕೋಟೆಯನ್ನು ಕಟ್ಟಲಾಗಿದೆ. ಶ್ರೀ ಕನಕಗಿರಿಯಲ್ಲಿರುವ ಐದು ಪ್ರಮುಖ ದೇವತೆಗಳೆಂದರೆ ಭಗವಾನ್ ಶ್ರೀ ಪಾರ್ಶ್ವನಾಥ, ಶ್ರೀ ಪದ್ಮಾವತಿ ದೇವಿ, ಶ್ರೀ ಜ್ವಾಲಾಮಾಲಿನೀ ದೇವಿ, ಶ್ರೀ ಕೂಷ್ಮಾಂಡಿನೀ ದೇವಿ ಮತ್ತು ಶ್ರೀ ಕ್ಷೇತ್ರಪಾಲ ಬ್ರಹ್ಮಯಕ್ಷಿ. ಭಗವಾನ್ ಶ್ರೀ ಪಾರ್ಶ್ವನಾಥಸ್ವಾಮಿಯು ಮಾತ್ರ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ.

 • Temple Architecture / ಮಂದಿರ ವಿನ್ಯಾಸ

  The Jain temple in Kanakagiri is within the precincts of a fort constructed in Dravidian style with local rocks and stone. It has been divided into three parts. In the second portion of the temple, the images of Jain Tirthankaras made of brass, Panchaloha, an alloy of five metals, granite and local stones, have been installed. In addition, the stately statue of Sri Kooshmandinee Devi has been installed in front of the statue of Goddess Sri Padmavathi Devi. The five-feet black-stone idol of Sri Parshwanatha in Khadgaasana posture installed at the sanctum sanctorum is called Sri Vijaya Parshwanatha. This 32 ft. wide and 80 ft. long Jain temple dates back to 5th Century A.D. The adjoining conference hall and the self-study rooms in the backyard of the temple are all constructed with stone. In the nearby Chaityalaya of Lord Bhattaraka, there are beautiful idols made of precious stones called Gomedha, Havala, Sphatika, Manikya, jade and gems such as Padmaraga, Chandrakantha, Vaidhurya, Garudamani and so on. The hill is at a height of 662 m from sea-level. At the foothill, there is a magnificent statue of Bhagawan Sri Parshwanatha. ಕಲ್ಲಿನ ಕೋಟೆಯೊಳಗೆ ಸಂಪೂರ್ಣ ಸ್ಥಳೀಯ ಕಲ್ಲುಗಳಿಂದ ನಿರ್ಮಿತವಾದ ದ್ರಾವಿಡ ಶೈಲಿಯ ಮೂರು ಭಾಗಗಳಲ್ಲಿ ಈ ಜಿನಮಂದಿರವು ವಿಭಕ್ತವಾಗಿದೆ. ಜಿನಮಂದಿರದ ದ್ವಿತೀಯ ಭಾಗದಲ್ಲಿ ಹಿತ್ತಾಳೆ, ಪಂಚಲೋಹ, ಅಮೃತಶಿಲೆ, ಪ್ರಾದೇಶಿಕ ಶಿಲೆಗಳಿಂದ ರಚಿಸಲಾದ ತೀರ್ಥಂಕರರ ಬಿಂಬಗಳು ಇವೆ. ಜೊತೆಗೆ ಮಹಾಮಾತೆ ಶ್ರೀ ಪದ್ಮಾವತೀ ದೇವಿಯ ಅಭಿಮುಖವಾಗಿ ಮಾತೆ ಶ್ರೀ ಆಮ್ರಕೂಷ್ಮಾಂಡಿನೀ ದೇವಿಯು ವಿರಾಜಮಾನರಾಗಿದ್ದಾರೆ. ಗರ್ಭಗೃಹದಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥರ ಮನೋಹರವಾದ ಐದು ಅಡಿ ಎತ್ತರದ ಖಡ್ಗಾಸನದಲ್ಲಿರುವ ಕಪ್ಪು ಶಿಲೆಯ ಮೂರ್ತಿಯು ಶ್ರೀ ವಿಜಯ ಪಾರ್ಶ್ವನಾಥ ಸ್ವಾಮಿ ಎಂದು ಪ್ರಖ್ಯಾತವಾಗಿದೆ. 32 ಅಡಿ ಅಗಲ 80 ಅಡಿ ಉದ್ದದ ಈ ಜಿನಮಂದಿರ 5 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದೆಂದು ಪುರಾವೆಗಳಿಂದ ವ್ಯಕ್ತವಾಗುತ್ತದೆ. ಪೂಜ್ಯ ಭಟ್ಟಾರಕರ ಚೈತ್ಯಾಲಯದಲ್ಲಿ ಬಹುಮೂಲ್ಯ ರತ್ನಮೂರ್ತಿಗಳು ದರ್ಶನೀಯವಾಗಿವೆ. ಗೋಮೇಧ, ಹವಳ, ಸ್ಪಟಿಕ, ಮಾಣಿಕ್ಯ, ಪಚ್ಚೆ, ಪದ್ಮರಾಗಮಣಿ, ಚಂದ್ರಕಾಂತ ಮಣಿ, ವೈಡೂರ್ಯ, ಗರುಡಮಣಿ, ಮುಂತಾದ ಕಲಾತ್ಮಕ ಒರೆಗಲ್ಲಿನ ಅಮೂಲ್ಯ ಭವ್ಯ ಮೂರ್ತಿಗಳಿವೆ. ಇಲ್ಲಿರುವ ಅನೇಕ ಗುಹೆಗಳು ಮತ್ತು ಮಂಟಪಗಳು ಭಕ್ತರನ್ನು ವಿಶೇಷವಾಗಿ ಆಕರ್ಷಿಸುತ್ತವೆ. ಸಮುದ್ರಮಟ್ಟದಿಂದ ಬೆಟ್ಟದ ಎತ್ತರವು ಸುಮಾರು 662 ಮೀ.ಗಳಷ್ಟು ಇದೆ. ಬೆಟ್ಟದ ಕೆಳಗೆ 9 ಅಡಿಯ ಭಗವಾನ್ ಶ್ರೀ ಪಾರ್ಶ್ವನಾಥರ ಮನೋಹರ ಪ್ರತಿಮೆ ವಿರಾಜಮಾನವಾಗಿದೆ.

You don't have permission to register

Enquiry

[contact-form-7 404 "Not Found"]