History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Historical background / ಐತಿಹಾಸಿಕ ಹಿನ್ನೆಲೆ

    Sri Omkareshwara Swamy temple in Stuart Hill of Madikeri was constructed by Lingaraja Vodeyar II of Kodagu in 18th Century to rid himself of the sin of Brahmahatyadosha. The construction, which started in 1817, is believed to have been completed in two years, nine months and 26 days. ಮಡಿಕೇರಿಯ ಸ್ಟುವರ್ಟ್ ಪರ್ವತದಲ್ಲಿರುವ ಶ್ರೀ ಓಂಕಾರಲಿಂಗೇಶ್ವರ ದೇವಾಲಯವು ರಾಜನ ಬಲ, ಬ್ರಾಹ್ಮಣನ ಛಲ ತಮಸ್ಸು ಮತ್ತು ಸಾತ್ವಿಕ ಗುಣಗಳ ಸಂಘರ್ಷದ ಫಲವಾಗಿ ರೂಪುಗೊಂಡಿದೆಯೆಂದು ಪ್ರತೀತಿಯಿದೆ. ಬ್ರಹ್ಮಹತ್ಯಾ ದೋಷದಿಂದ ಮುಕ್ತಿ ಹೊಂದಲು ಪ್ರಾಯಶ್ಚಿತ್ತಾರ್ಥವಾಗಿ ಕೊಡಗಿನ ಅರಸನಾಗಿದ್ದ ಇಮ್ಮಡಿ ಲಿಂಗರಾಜ ಒಡೆಯನು 18ನೆಯ ಶತಮಾನದಲ್ಲಿ ಶ್ರೀ ಓಂಕಾರೇಶ್ವರ ದೇವಾಲಯವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. 1817ರಲ್ಲಿ ಆರಂಭಗೊಂಡ ದೇವಸ್ಥಾನದ ನಿರ್ಮಾಣ ಕಾರ್ಯವು ಎರಡು ವರ್ಷ, ಒಂಭತ್ತು ತಿಂಗಳು, 26 ದಿನಗಳ ಕಾಲದಲ್ಲಿ ಪೂರ್ಣಗೊಂಡಿತೆಂದು ತಿಳಿದುಬರುತ್ತದೆ.

  • Temple Architecture / ದೇವಾಲಯದ ವಿನ್ಯಾಸ

    The structure of the temple is in the rare Indo-Saracenic style. Sanctum sanctorum is surrounded by a strong five-ft. thick wall built by using the ancient technique of In-Situ mortar. Sanctum sanctorum is shaped as a perfect square. A dome adorned with a Kalash has been constructed at the centre of the temple. Minaret-like pillars have been erected at four corners with small domes. At the base of each pillar, two bulls sharing a common head have been placed. A brass inscription can be seen at the entrance of sanctum snctorum. The details of King Lingaraja and construction of the temple have been inscribed in Halegannada (Ancient Kannada) script. Idols of Sri Ganapati and Sri Subrahmanya Swamy with Shivagana have been installed on the sides of the sanctum sanctorum. Procession idols (Utsavamurtis) of Uma Maheshwara are also placed here. Additional features include two Rajangans, a place for performing sacrifices and installations of Navagrahas and Dikpalakas. The sanctum sanctorum is surrounded by a wide Prakara. A dome is atop the sanctum sanctorum. The sanctum adorned with 12 windows resembles Sri Chakra in construction. The window is decorated with rods made of alloy containing five metals. A pond in front of the temple is decorated with a ‘Kushala Gopura’ or Mantap. It is believed that due to suspected presence of evil spirits, the local masons and builders refused to construct the temple. Therefore, King Lingaraja Vodeyar assigned the task of construction of the temple to Muslim builders. As they did not know the temple architecture, they offered to construct the temple in Islamic style. ಭಾರತದ ಯಾವುದೇ ಭಾಗದಲ್ಲಿ ಕಾಣಸಿಗದ ಇಂಡೋ-ಸಾರ್ಸೆನಿಕ್ (ಗಾಂಧಾರ) ವಾಸ್ತುಶಿಲ್ಪದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಗರ್ಭಗುಡಿಯ ಸುತ್ತಲೂ ಐದು ಅಡಿಯಷ್ಟು ದಪ್ಪನಾದ ವಜ್ರಗಾರೆಯಿಂದ ಕಟ್ಟಲಾದ ಬಲಿಷ್ಟ ಗೋಡೆಯಿದೆ. ಇದು ಚೌಕಾಕಾರದಲ್ಲಿದೆ. ದೇವಾಲಯದ ಮಧ್ಯಭಾಗದಲ್ಲಿ ಕಲಶಸಹಿತ ಗುಮ್ಮಟವಿದೆ. ನಾಲ್ಕೂ ಮೂಲೆಗಳಲ್ಲಿರುವ ಸ್ತಂಭಗೋಪುರಗಳಲ್ಲಿ ಸಣ್ಣ-ಸಣ್ಣ ಗುಮ್ಮಟಗಳಿದ್ದು, ಪ್ರತಿಯೊಂದರ ತಳಭಾಗದಲ್ಲಿ ಏಕಮುಖದ ಜೋಡಿ ನಂದಿ ವಿಗ್ರಹವನ್ನು ಸ್ಥಾಪಿಸಲಾಗಿದೆ. ಗರ್ಭಗುಡಿಯ ದ್ವಾರದ ಮೇಲ್ಭಾಗದಲ್ಲಿ ಹಿತ್ತಾಳೆಯ ಶಾಸನವಿದ್ದು, ಅದರಲ್ಲಿ ಲಿಂಗರಾಜ ಮತ್ತು ದೇವಾಲಯ ನಿರ್ಮಾಣದ ಬಗ್ಗೆ ಹಳೆಗನ್ನಡದಲ್ಲಿ ಉಲ್ಲೇಖವಿದೆ. ಗರ್ಭಗುಡಿಯ ಎಡಬಾಗದಲ್ಲಿ ಶ್ರೀ ಗಣಪತಿ, ಬಲಭಾಗದಲ್ಲಿ ಶ್ರೀ ಸುಬ್ರಹ್ಮಣ್ಯ ಮತ್ತು ಶಿವನ ಪರಿವಾರ ದೇವತೆಗಳನ್ನು ಸ್ಥಾಪಿಸಲಾಗಿದೆ. ಪಂಚಲೋಹದ ಉಮಾಮಹೇಶ್ವರ ಉತ್ಸವಮೂರ್ತಿಗಳಿವೆ. ಎರಡು ರಾಜಾಂಗಣಗಳು, ಬಲಿಪೀಠದ ಜೊತೆಗೆ ನವಗ್ರಹ ಮತ್ತು ಅಷ್ಟದಿಕ್ಪಾಲಕರನ್ನು ಸ್ಥಾಪಿಸಲಾಗಿದೆ. ದೇವಾಲಯದ ಸುತ್ತಲೂ ವಿಶಾಲವಾದ ಪ್ರಾಕಾರವಿದ್ದು, ಗರ್ಭಗುಡಿಯ ಮೇಲೆ ಗೋಪುರವಿದೆ. ಗರ್ಭಗುಡಿಯನ್ನು ಶ್ರೀ ಚಕ್ರದ ಆಧಾರದಲ್ಲಿ ಕಟ್ಟಲಾಗಿದ್ದು, ಹೊರಭಾಗವು ಗುಂಬಜ್ ವಿನ್ಯಾಸವನ್ನು ಹೊಂದಿದೆ. ಗರ್ಭಗುಡಿಗೆ 12 ಕಿಟಕಿಗಳಿದ್ದು, ಪ್ರತಿ ಕಿಟಕಿಯ ಮೇಲಿನ ಪಂಚಲೋಹದ ಪ್ರತಿ ಸರಳಿನಲ್ಲೂ, ಲಿಂಗರಾಜನ ಗುರುತಾಗಿ ‘ಲಿಂ’ ಎಂಬ ಅಕ್ಷರವನ್ನು ನಮೂದಿಸಲಾಗಿದೆ. ದೇವಸ್ಥಾನದ ಮುಂಭಾಗದಲ್ಲಿ ಪುಷ್ಕರಿಣಿಯಿದ್ದು, ಅದರ ಮಧ್ಯಭಾಗದಲ್ಲಿ ಉತ್ಸವ ಮೂರ್ತಿಯ ಪೂಜೆಗೆ ಕುಶಲ ಗೋಪುರವನ್ನು ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ಅಗೋಚರ ಶಕ್ತಿಯ ಸಂಚಾರವಿರುವ ಸಂಶಯವಿದ್ದ ಕಾರಣ ಸ್ಥಳೀಯರು ದೇವಾಲಯವನ್ನು ನಿರ್ಮಿಸಲು ಹಿಂಜರಿದರು. ಆದ್ದರಿಂದ ಲಿಂಗರಾಜನು ಮುಹಮ್ಮದೀಯರನ್ನು ಕರೆತಂದಾಗ, ಅವರು ತಮಗೆ ಹಿಂದೂ ಶೈಲಿಯಲ್ಲಿ ಕಟ್ಟಲು ಬರುವುದಿಲ್ಲವೆಂಬ ಕಾರಣದಿಂದ ದೇವಸ್ಥಾನವನ್ನು ಗುಂಬಜ್ ಮಾದರಿಯಲ್ಲಿ ನಿರ್ಮಿಸಿದರೆಂಬ ಐತಿಹ್ಯವಿದೆ.

  • Brahmahatyadosha / ಬ್ರಹ್ಮಹತ್ಯಾದೋಷ

    According to a legend, King Lingaraja Vodeyar II was harassing women and had confined several women in his harem. A poor Brahmin in Puttur, who had six daughters, thought of marrying off his eldest daughter to the King to get out of his poverty. He expressed his desire with one Subbarasiah, who was a priest in the royal court. However, the priest was aware of the misconduct of the king and advised the Brahmin to instantly return home. Meanwhile, the king came to know about the priest’s conversation with the Brahmin. The king started torturing the priest and even asked the latter to bring the Brahmin back from Puttur. With the priest ignoring his instruction, the enraged king got the children of the priest killed. Unable to bear the grief, priest’s wife committed suicide. Annoyed by the king’s deeds, the Brahmin priest vouched to eternally torment the king. ಕೊಡಗಿನ ಅರಸನಾಗಿದ್ದ ಇಮ್ಮಡಿ ಲಿಂಗರಾಜ ಒಡೆಯನು ಸ್ತ್ರೀಲೋಲುಪನಾಗಿದ್ದನೆಂದು ತಿಳಿದುಬರುತ್ತದೆ. ತನ್ನ ದೃಷ್ಟಿಗೆ ಬೀಳುವ ಎಲ್ಲ ಸುಂದರ ಸ್ತ್ರೀಯರನ್ನು ಅಂತಃಪುರಕ್ಕೆ ಸೇರಿಸಿಕೊಳ್ಳುತ್ತಿದ್ದನು. ಹೀಗಿರುವಾಗ ಒಮ್ಮೆ ಆರು ಹೆಣ್ಣುಮಕ್ಕಳಿದ್ದ ಪುತ್ತೂರಿನ ಒಬ್ಬ ಬಡಬ್ರಾಹ್ಮಣನು ತನ್ನ ಹಿರಿಯ ಪುತ್ರಿಯನ್ನು ಲಿಂಗರಾಜ ದೊರೆಯೊಂದಿಗೆ ವಿವಾಹ ಕೊಟ್ಟು ತನ್ಮೂಲಕ ತನ್ನ ಬಡತನದಿಂದ ಪಾರಾಗಲು ಯೋಚಿಸಿದನು. ಈ ವಿಷಯದಲ್ಲಿ ತನ್ನ ಸ್ನೇಹಿತನಾಗಿದ್ದ ಸುಬ್ಬರಸನೆಂಬುವನು ಕೊಡಗಿನ ಅರಮನೆಯಲ್ಲಿ ಅರ್ಚಕನಾಗಿದ್ದನು. ಬ್ರಾಹ್ಮಣನು ಸುಬ್ಬರಸನನ್ನು ಸಂದರ್ಶಿಸಿ ತನ್ನ ಮನೋಭಿಲಾಶೆಯನ್ನು ಅರುಹಿದನು. ಆದರೆ, ಸುಬ್ಬರಸನಿಗೆ ಲಿಂಗರಾಜನ ಬಗ್ಗೆ ಅರಿವಿದ್ದುದರಿಂದ ಬ್ರಾಹ್ಮಣನಿಗೆ ಕೂಡಲೆ ಪುತ್ತೂರಿಗೆ ಹಿಂದಿರುಗಬೇಕೆಂದೂ, ಯಾವುದೇ ಕಾರಣಕ್ಕೂ ಲಿಂಗರಾಜನೊಂದಿಗೆ ವ್ಯವಹರಿಸಬಾರದೆಂದೂ ತಿಳಿಸಿಬಿಡುತ್ತಾನೆ. ಬ್ರಾಹ್ಮಣನು ಹಿಂದಿರುಗಿದ ನಂತರ ರಾಜನಿಗೆ ನಡೆದ ಸಂಗತಿ ತಿಳಿಯುತ್ತದೆ. ಸುಬ್ಬರಸನಿಗೆ ಪುತ್ತೂರಿನಿಂದ ಬ್ರಾಹ್ಮಣನನ್ನು ಕರೆತರಬೇಕೆಂದು ರಾಜನು ಆಜ್ನೆ ಮಾಡುತ್ತಾನೆ. ಆದರೆ, ಸುಬ್ಬರಸನು ಒಪ್ಪದಿರಲು, ಲಿಂಗರಾಜ ಆತನಿಗೆ ಚಿತ್ರ ಹಿಂಸೆ ನೀಡಿ, ಆತನ ಎರಡು ಮಕ್ಕಳ ಶಿರಚ್ಚೀದ ಮಾಡಿಸಿದನು. ಇದರಿಂದ ಮನನೊಂದ ಸುಬ್ಬರಸಯ್ಯನ ಹೆಂಡತಿ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಳು. ಇಷ್ಟಾದರೂ ಸುಬ್ಬರಸಯ್ಯ ಛಲ ಬಿಡದಿದ್ದಾಗ ಲಿಂಗರಾಜ ಆತನ್ನನ್ನು ಕೊಲ್ಲಿಸುತ್ತಾನೆ. ತಾನು ಸಾಯುವಾಗ ಸುಬ್ಬರಸಯ್ಯನು ರಾಜನತ್ತ ನೇರ ದೃಷ್ಟಿಯಿಟ್ಟು, “ನಾನು ಸತ್ತರೂ, ಇದ್ದರೂ ನಿನ್ನನ್ನು ಬಿಡುವುದಿಲ್ಲ” ಎಂದು ಪ್ರಾಣವನ್ನು ತೊರೆಯುತ್ತಾನೆ.

  • Temple construction to get rid of the sin / ಪಾಪ ಪರಿಹಾರಕ್ಕೆ ದೇವಾಲಯ ನಿರ್ಮಾಣ

    A few days after the demise of Subbarasaiah, the king started experiencing some troubles. He felt as if the hymns that Subbarasa was reciting were reverberating in his ears. Once it so happened that he slipped from the throne and fell on the ground. He lost his mental balance too. Lingaraja firmly believed that the trouble was being caused by the spirit of Subbarasa. Perturbed by the series of troubles, Lingaraja consulted astrologers and performed certain rituals and sacrifices through Brahmin priests. However, there was no relief to him from the troubles. Meanwhile, an ascetic came to the the royal court and suggested the king to bring a Shiva Linga from Varanasi and get it consecrated in a temple to absolve himself from the Brahmahatyadosha. Accordingly, the King brought a Linga from Varanasi, got it consecrated and built a temple around the sacred Linga. ಸುಬ್ಬರಸನು ಕಾಲವಾದ ಕೆಲ ದಿನಗಳ ಬಳಿಕ ಲಿಂಗರಾಜನಿಗೆ ತೊಂದರೆಗಳು ಎದುರಾಗುತ್ತವೆ. ಅವನ ಕಿವಿಗಳಲ್ಲಿ ಸುಬ್ಬರಸಯ್ಯನ ಮಂತ್ರಗಳು ಪ್ರತಿಧ್ವನಿಸುತ್ತಿರುವಂತೆ ಭಾಸವಾಗುತ್ತದೆ. ಒಮ್ಮೆ ಸಿಂಹಾಸನದಿಂದ ಉರುಳಿಬಿದ್ದ ರಾಜನು, ಬುದ್ಧಿಭ್ರಮಣೆಗೂ ಒಳಗಾಗುತ್ತಾನೆ. ತನಗೊದಗಿದ ಅನಾಹುತದಿಂದ ಆತಂಕಗೊಂಡ ಲಿಂಗರಾಜನು, ಜ್ಯೋತಿಷಿ, ಮಂತ್ರವಾದಿಗಳು ಹಾಗೂ ಪಂಡಿತರನ್ನು ಕರೆಸಿ ಶಾಂತಿ ಹೋಮಗಳನ್ನು ಮಾಡಿಸುತ್ತಾನೆ. ಆದರೂ ಆತನು ತೊಂದರೆಗಳಿಂದ ವಿಮುಕ್ತನಾಗಲಿಲ್ಲ. ಏತನ್ಮಧ್ಯೆ, ಯೋಗಿಯೊಬ್ಬರು ಅರಮನೆಗೆ ಬಂದು ರಾಜನನ್ನು ಸಂದರ್ಶಿಸುತ್ತಾರೆ. ಕಾಶಿಯಿಂದ ಶಿವಲಿಂಗವನ್ನು ತರಿಸಿ ಪ್ರತಿಷ್ಠಾಪಿಸಬೇಕೆಂದೂ, ನಂತರ ತ್ರಿಕಾಲ ಪೂಜೆಗಳನ್ನು ನೆರವೇರಿಸಿ ಪೂಜಾ-ಕೈಂಕರ್ಯಗಳನ್ನು ಕೈಗೊಂಡರೆ ಮಾತ್ರ ದೋಷ ನಿವಾರಣೆಯಾಗಬಹುದು ಎಂದು ಯೋಗಿಗಳು ರಾಜನಿಗೆ ಸಲಹೆ ನೀಡಿದರು. ಅಂತೆಯೇ, ರಾಜನು ಲಿಂಗವೊಂದನ್ನು ವಾರಣಾಸಿಯಿಂದ ತರಿಸಿ ಶ್ರೀ ಓಂಕಾರಲಿಂಗೇಶ್ವರ ದೇವಾಲಯವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ.

  • Kushalagopura / ಕುಶಲಗೋಪುರ

    When King Lingaraja came to witness the consecration of Shiva Linga at Sri Omkareshwara temple, he experienced some resistance. He consulted many astrologers to know the reason. He came to know that he had not yet been relieved from the ill-effects of Brahmahatyadosha. As suggested by the astrologers, the king got a Mantap or Kushala Gopura constructed in the middle of a pond, which was lying in front of the temple, and had the Darshan of Sri Omkareshwara from that Mantap. A Champak tree that exists on the temple premises is said to have been planted in memory of priest Subbarasiah. ಶಿವಲಿಂಗದ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಲಿಂಗರಾಜನಿಗೆ ಅಗೋಚರ ಶಕ್ತಿಯೊಂದು ತಡೆಯುತ್ತಿರುವಂತೆ ಅನುಭವವಾಗುತ್ತದೆ. ಈ ಬಗ್ಗೆ ಜ್ಯೋತಿಷಿಗಳಲ್ಲಿ ವಿಚಾರಿಸಿದಾಗ, ರಾಜನು ಬ್ರಹ್ಮಹತ್ಯಾ ದೋಷದಿಂದ ಮುಕ್ತನಾಗಿಲ್ಲವೆಂದು ತಿಳಿದುಬರುತ್ತದೆ. ಜ್ಯೋತಿಷಿಗಳು ಹಾಗೂ ವಿದ್ವಾಂಸರು ಸೂಚಿಸಿದಂತೆ ರಾಜನು ಶ್ರೀ ಓಂಕಾರೇಶ್ವರ ದೇವಾಲಯದ ಮುಂಭಾಗದಲ್ಲಿದ್ದ ಪುಷ್ಕರಣಿಯ ಮಧ್ಯಭಾಗದಲ್ಲಿ ಕುಶಲ ಗೋಪುರವೊಂದನ್ನು ನಿರ್ಮಿಸಿ ಅಲ್ಲಿಂದಲೇ ಲಿಂಗರೂಪೀ ಪರಶಿವನ ದರ್ಶನವನ್ನು ಪಡೆಯುತ್ತಾನೆ. ಅಲ್ಲಿಂದಲೇ ರಾಜನು ಶ್ರೀ ಓಂಕಾರೇಶ್ವರಸ್ವಾಮಿಗೆ ವಿಶೇಷಪೂಜೆ ಮತ್ತು ಮಹಾಮಂಗಳಾರತಿಯನ್ನು ಸಲ್ಲಿಸುತ್ತಾನೆ. ಸುಬ್ಬರಸನ ಸ್ಮರಣಾರ್ಥವಾಗಿ ದೇವಾಲಯದ ಉತ್ತರದಿಕ್ಕಿನಲ್ಲಿ ಸಂಪಿಗೆ ಮರವೊಂದನ್ನು ನೆಡಲಾಗಿದೆ. ಆ ಸಂಪಿಗೆ ಮರವನ್ನು ಇಂದಿಗೂ ದೇವಸ್ಥಾನದ ಆವರಣದಲ್ಲಿ ಕಾಣಬಹುದಾಗಿದೆ.

  • Specialty of consecration / ಪ್ರತಿಷ್ಠಾಪನೆಯ ವಿಶೇಷ

    It is believed that the soul of Brahmarakshas has been trapped in a vessel and sealed with Srichakra, Sudarshana Chakra and Aghora Chakra. The vessel has been closed with a stone slab. A mantap has been constructed above this and Shiva Linga consecrated in the Mantap. Daily sevas and other rituals are performed here strictly in accordance with the scriptures. ಬ್ರಹ್ಮರಾಕ್ಷಸನ ಆತ್ಮವನ್ನು ಕುಂಭವೊಂದರಲ್ಲಿ ಬಂಧಿಸಿ, ಶ್ರೀಚಕ್ರ, ಅಘೋರ ಚಕ್ರ ಮತ್ತು ಸುದರ್ಶನ ಚಕ್ರಗಳಿಂದ ಸ್ತಂಭನ ಮಾಡಲಾಗಿದೆ. ಕುಂಭವನ್ನು ಹಾಸುಗಲ್ಲಿನಿಂದ ಮುಚ್ಚಿ ಅದರ ಮೇಲೆ ಶಿಲಾಮಂಟಪವನ್ನು ನಿರ್ಮಿಸಿ ಅದರಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ವೈದಿಕಾಗಮದ ಪ್ರಕಾರ ನಿತ್ಯವೂ ತ್ರಿಕಾಲ ಪೂಜೆ ಮತ್ತು ಮಹಾಮಂಗಳಾರತಿಗಳಿಂದ ಅರ್ಚಿಸಲಾಗುತ್ತದೆ.

You don't have permission to register