History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • ಐತಿಹಾಸಿಕ ಹಿನ್ನೆಲೆ / Historical background

    ಬೆಂಗಳೂರು ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನವು ಹಳೆ ಮೈಸೂರು ಪ್ರಾಂತ್ಯದ ಗತ ವೈಭವವನ್ನು ಮತ್ತು ಆ ಕಾಲದಲ್ಲಿ ನಡೆದಿರುವ ಐತಿಹಾಸಿಕ ಘಟನೆಯನ್ನು ತಿಳಿಸಿಕೊಡುವ ಪುರಾತನವಾದ ದೇವಸ್ಥಾನವಾಗಿರುತ್ತದೆ. ಈ ದೇವಸ್ಥಾನವನ್ನು 15 ನೇ ಶತಮಾನದಲ್ಲಿ ಆಗಿನ ಮೈಸೂರು ರಾಜ್ಯದ ಅರಸರಾದ ಶ್ರೀ ಚಿಕ್ಕದೇವರಾಜ ಒಡೆಯರ್ರವರು, ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ಮೂರ್ತಿಯನ್ನು ಸುಮಾರು ನಾಲ್ಕು ಅಡಿ ಎತ್ತರದ ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಿ ಈ ದೇವಾಲಯದಲ್ಲಿ ಸ್ಥಾಪಿಸಿರುತ್ತಾರೆ. ಶ್ರೀ ಚಿಕ್ಕದೇವರಾಜ ಒಡೆಯರ್ರವರ ಪುತ್ರರಾದ ಕಂಠೀರವ ನರಸರಾಜ ಒಡೆಯರ್ರವರ ಆಳ್ವಿಕೆ ಸಮಯದಲ್ಲಿ ಬೆಂಗಳೂರು ಕೋಟೆಯ ಒಳಗೆ ತಮ್ಮ ತಂದೆಯವರು ಪ್ರತಿಷ್ಟಾಪಿದಂತಹ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿಯ ಶಾಶ್ವತ ಸೇವೆ, ಪಡಿತರ ದೀಪಾರಾಧನೆಗಾಗಿ ನಾಲ್ಕು ಗ್ರಾಮಗಳನ್ನು ದಾನ ಪೂರ್ವಕವಾಗಿ ಕೊಟ್ಟಿರುತ್ತಾರೆ. ಎಂದು ಪ್ರತೀತಿ , ಈ ಕುರಿತು ತಿಳಿಸುವ ಶಿಲಾ ಶಾಸನವೊಂದು ಬೆಂಗಳೂರು ನಗರದ ಕೊತ್ತನೂರು ಗ್ರಾಮದ ಊರು ಬಾಗಿಲಲ್ಲಿ ನೆಟ್ಟಿರುವ ಶಿಲಾ ಶಾಸನ ತಿಳಿಸುತ್ತದೆ. ಈ ಹಿಂದೆ ಈ ದೇವಾಲಯದ ಮುಂಭಾಗದಲ್ಲಿ ಬ್ರಿಟೀಷರ ಸೈನಿಕರಿಗೆ ಕವಾಯಿತು ನಡೆಸಲು ಮತ್ತು ತರಬೇತಿ ನೀಡುವ ಬಗ್ಗೆ ವಿಶಾಲವಾದ ಮೈದಾನವಿತ್ತು. ಹಾಗೂ ಈ ದೇವಾಲಯದ ಹಿಂಭಾಗದಲ್ಲಿ ಶ್ರೀ ಹೈದರಾಲಿ ಖಾನ್ ಮತ್ತು ಶ್ರೀ ಟಿಪ್ಪು ಸುಲ್ತಾನ್ ನಿರ್ಮಿಸಿರುವ ಬೇಸಿಗೆ ಅರಮನೆ ಇರುತ್ತದೆ. Bangalore’s Kote Sri Venkataramana Swamy Temple is an ancient shrine reveals the glory of Mysore region and historic events. This temple was constructed during 15th century in Dravidian and Vijayanagar style by the Wodeyar of Mysore, Sri Chikkadevaraja Wodeyar, the then ruler. The main deity of the divine shrine, Sri Prasanna Venkataramana Swamy statue was wonderfully carved in Saligrama Shile (Saligrama Stone) and consecrated in sanctum sanctorum and constructed this temple. During the reign of Kanteerava Narasaraja Wodeyar, offered Shashwatha Seva and gifted 4 villages to the temple to fulfill the daily puja requirements to Lord Venkateshwara Swamy, consecrated by his father Sri Chikkadevaraja Wodeyar. The epigraph about the information of this gift can be seen at the entrance of Kottanur village. During British regime, British soldiers used to perform the parade in the ground which was opposite to the temple. Tippu Sultan’s Summer Palace, another historical tourist attraction of Bangalore is behind the temple.

  • ದೇವಾಲಯದ ವಿನ್ಯಾಸ / Temple Architecture

    ಈ ದೇವಾಲಯವು ದ್ರಾವಿಡ ಶೈಲಿಯಿಂದ ಕೂಡಿದ್ದು, ಗರ್ಭಗೃಹ, ಶುಕನಾಸಿ, ಮಧ್ಯರಂಗ ಹಾಗೂ ನವರಂಗವನ್ನು ಹೊಂದಿರುತ್ತದೆ. ಗರ್ಭಗೃಹದ ಹೊರಭಾಗದ ಮೂರು ದಿಕ್ಕುಗಳಲ್ಲಿ ರಥಾರೂಢವಾಗಿ ಮತ್ತು ವಾಹನರೂಢರಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರ ಮೂರ್ತಿಗಳನ್ನು, ಸಪ್ತಋಷಿಗಳು, ಸಪ್ತ ಮಾತೃಕೆಯರು, ಹಾಗೂ ಅಷ್ಠ ದಿಕ್ಪಾಲರಿಂದ ಕೂಡಿರುವ ಗಿರಿಜಾ ಕಲ್ಯಾಣ ಮೂರ್ತಿಗಳ ಶಿಲೆಯನ್ನು ಕೆತ್ತಿರುತ್ತಾರೆ. ನವರಂಗದಲ್ಲಿ 18 ಶಿಲಾ ಸ್ತಂಭಗಳಿದ್ದು, ಪ್ರಮುಖ ನಾಲ್ಕು ಸ್ತಂಭಗಳಲ್ಲಿ ಸಿಂಹಗಳಿಂದ ಕೂಡಿದ ಸವಾರಿ ಮಾಡುತ್ತಿರುವ ವೀರಯೋಧನ ಕೆತ್ತನೆ ಕೆಲಸವನ್ನು ನೋಡಬಹುದಾಗಿರುತ್ತದೆ. ಮುಖ ಮಂಟಪದಲ್ಲಿ ಅಪರೂಪವಾದ ಪ್ರಾಣಿಗಳ, ಪಕ್ಷಿಗಳ ಚಿತ್ರಗಳನ್ನು ಕೆತ್ತಿರುತ್ತಾರೆ. ಈ ದೇವಸ್ಥಾನದ ನವರಂಗದಲ್ಲಿ ಏಕಶಿಲೆಯಿಂದ ನಿರ್ಮಿಸಿರುವ ಸುಮಾರು 10 ಅಡಿ ಉದ್ದ 7 ಅಡಿ ಅಗಲದ ಶಿಲಾ ಮಂಟಪವಿರುತ್ತದೆ. ಈ ಮಂಟಪದಲ್ಲಿ ಅಧ್ಯಯನೋತ್ಸವ (ಕೊಠಾರೋತ್ಸವ) ಆಸ್ಥಾನ ಸೇವೆಯು ನಡೆಯುತ್ತದೆ. This temple was constructed in Dravidian style and including Sanctum Sanctorum, Shukanaasi, Madhyaranga and Navarang sculpture. On the outer yard of sanctum sanctorum, represents the sculpture of Girija Kalyana featuring various deities including Brahma, Vishnu, Maheshwara on chariot, Sapta Rishis, Sapta matrukas, and Ashta Dikpalakas. The Navarang has 18 stone pillars, and among that four huge pillars represents the sculpture of gallant hero, who was riding lions. The sculptures of rare birds and animals at Mukha mantap 10 feet height and 7 feet width monolith Shila mantap was constructed at Navarang. Adyayanotsava (kotharotsava) and Asthana seva will be performed in the mantap.

You don't have permission to register