History - Book online Pujas, Homam, Sevas, Purohits, Astro services| Pure Prayer
Top
Image Alt
  • History / ಇತಿಹಾಸ

    According to History, Sri Raghavendra Seva Samiti Trust was established in January 1975. The main deity, Lord Sri Mukhyaprana and Sri Raghavendra Brundavana filled with the sacred soil/Rayara Mruttika, that was brought from Mantralayam by walk, were consecrated. The main deity in the sanctum sanctorum was unveiled by Sri Sri Vishweshateertha Swamiji, pontiff of Sri Sri Pejawara Matha, one of the Ashtha Mathas of Udupi. Later on, a spacious praakara, borewell, puja articles, silver claddings, goshaala and spacious Sabhagruha were constructed. Later in 2001, on the basis of “Tantrasara”, under the guidance of Sri Sri Vidyavachaspati Swamiji of Sosale Sri Sri Vyasaraja Matha, a beautifully carved Sri Prasanna Ganapathi statue was consecrated in the premises of Goshaala on Vaishaka Shuddha Panchami of Sri Vikrama Samvatsara of Hindu calendar. Till today, Seva Samiti is looking after the Matha administration and development works. ಶ್ರೀ ರಾಘವೇಂದ್ರ ಸೇವಾ ಸಮಿತಿ ಟ್ರಸ್ಟ್ ಸಂಸ್ಥೆಯು 1975 ರ ಜನವರಿಯಲ್ಲಿ ಪ್ರಾರಂಭವಾಯಿತೆಂಬ ಉಲ್ಲೇಖವಿದ್ದು, ಬಿ.ಡಿ.ಎ.ಯಿಂದ ಪಡೆದ ನಿವೇಶನದಲ್ಲಿ 1979 ನೇ ಇಸವಿ, ಸಿದ್ಧಾರ್ಥ ನಾಮ ಸಂವತ್ಸರದ ವೈಶಾಖ ಶುದ್ಧ ತೃತೀಯದಂದು, ಉಡುಪಿಯ ಅಷ್ಟಮಠಗಳಲ್ಲೊಂದಾದ ಶ್ರೀ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಶ್ರೀ ಮುಖ್ಯಪ್ರಾಣದೇವರ ಶಿಲಾವಿಗ್ರಹ ಮತ್ತು ಮಂತ್ರಾಲಯದಿಂದ ಕಾಲ್ನಡಿಗೆಯಲ್ಲಿ ತಂದ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕೆಯಿಂದೊಡಗೂಡಿದ ಶ್ರೀ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಲಾಗುತ್ತದೆ. ನಂತರ ವಿಶಾಲ ಹಾಗು ಭವ್ಯವಾದ ಪ್ರಾಕಾರ, ಕೊಳವೆ ಬಾವಿ, ಪೂಜಾಸಾಮಗ್ರಿಗಳು, ಬೆಳ್ಳಿಕವಚಗಳು ಗೋಶಾಲೆ ಮತ್ತು ಗರ್ಭಗುಡಿಗೆ ಹೊಂದಿಕೊಂಡಂತೆ ವಿಶಾಲ ಸಭಾಗೃಹವು ನಿರ್ಮಾಣವಾಯಿತು. ಸುಮಾರು 1991 ನೇ ಇಸವಿಯಲ್ಲಿ ಶ್ರೀ ಗುರುರಾಜರ ಕಲ್ಯಾಣ ಮಂಟಪವನ್ನು ನಿರ್ಮಿಸಿ, ಅದನ್ನು ಸಹ ಶ್ರೀ ಶ್ರೀ ವಿಶ್ವೇಶತೀರ್ಥರಿಂದ ಉದ್ಘಾಟಿಸಿದರೆಂಬ ಮಾತಿದ್ದು, ಮುಂದೆ 2001 ರಲ್ಲಿ ಶ್ರೀ ವಿಕ್ರಮ ಸಂವತ್ಸರ ಮಾಘ ಶುದ್ಧ ಪಂಚಮಿಯಂದು ಶ್ರೀ ಶ್ರೀ ಸೋಸಲೆ ವ್ಯಾಸರಾಜ ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಾಚಸ್ಪತಿಗಳ ನೇತೃತ್ವದಲ್ಲಿ 'ತಂತ್ರಸಾರ' ದ ಆಧಾರದ ಮೇಲೆ ನಿರ್ಮಾಣವಾಗಿರುವ ಸುಂದರ ಶ್ರೀ ಪ್ರಸನ್ನ ಗಣಪತಿಯ ಶಿಲಾ ವಿಗ್ರಹವನ್ನು, ಗೋಶಾಲೆಯ ಆವರಣದಲ್ಲಿ ಪ್ರತಿಷ್ಠಾಪಿಸಿದರೆಂಬ ಉಲ್ಲೇಖವಿದೆ. ಅಂದಿನಿಂದ ಇಂದಿನವರೆಗೂ ಮಠದ ಆಡಳಿತ ಹಾಗು ಅಭಿವೃದ್ಧಿ ಕಾರ್ಯಗಳನ್ನು ಸಮಿತಿಯು ನಿಭಾಯಿಸುತ್ತಿದೆ.

You don't have permission to register

Enquiry

ENQUIRY