History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • History / ಇತಿಹಾಸ

    The idols of Lord Sri Krishna-Lord Sri Mukhyapraana with Sri Raghavendra Swamy mruthika brundaavana were consecrated and unveiled to the public by Sri Sri Bhandarakeri and Palimaaru seer Sri Sri Vidyamaanyateertha Swamiji and pontiff of Sri Pejawara Matha, Sri Sri Vishweshateertha Swamiji on Jyeshtha Shuddha Navami of Srimukha Samvatsara. Sri Krishna Bhat donated a site measuring 150*80 feet to Sri Pejawara Swamiji to construct the temple. Sri Vishweshateertha Swamiji is the president of the temple and under his guidance, all puja ceremonies, religious programmes and discourse (Pravachana) activities are going on. In the same premises, Pravanchana Mandir in the ground floor, Sabha Gruha in the first floor and Yaga shala in the second floor have been constructed. Sri Krishna-Sri Raghavendra Seva Pratishtana Trust(R) is looking after the temple management and Sri Vishweshateertha Swamiji is the lifelong President of this Raayara Matha. ಶ್ರೀಮುಖ ಸಂವತ್ಸರ- ಜ್ಯೇಷ್ಠ ಶುದ್ಧ ದಶಮಿ ದಿನಾಂಕ ಭಾನುವಾರದಂದು ಪರಮಪೂಜ್ಯ ಭಂಡಾರಕೇರಿ ಹಾಗು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರು ಹಾಗು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಅಮೃತಹಸ್ತದಿಂದ ಶ್ರೀ ಕೃಷ್ಣ - ಶ್ರೀ ಮುಖ್ಯಪ್ರಾಣ ದೇವರು ಹಾಗು ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನಾ ಮಹೋತ್ಸವವು ನೆರವೇರಿತು ಎಂದು ತಿಳಿದುಬರುತ್ತದೆ. ಅಂದಿನಿಂದ ಶ್ರೀ ಮಠದ ಅಧ್ಯಕ್ಷರಾದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರ ಆದೇಶದಂತೆ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ಕಾರ್ಯಕ್ರಮಗಳು ಹಾಗು ಪಾಠಪ್ರವಚನ ಕಾರ್ಯಕ್ರಮಗಳು ನೆರವೇರುತ್ತಿದೆ. ಶ್ರೀ ಮಠದ ಆಡಳಿತವನ್ನು ನಡೆಸಲು "ಶ್ರೀ ಕೃಷ್ಣ-ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನ ಟ್ರಸ್ಟ್(ರಿ) ಎಂಬ ಸಂಸ್ಥೆಯನ್ನು ರಚಿಸಲಾಗಿದ್ದು, ಪರಮ ಪೂಜ್ಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಈ ಸಂಸ್ಥೆಯ ಆಜೀವ ಅಧ್ಯಕ್ಷರಾಗಿರುತ್ತಾರೆ. ಅಂದಾಜು 150 ಅಡಿ ಅಗಲ ಹಾಗು 80 ಅಡಿ ಉದ್ದ ಇರುವ ಜಾಗವನ್ನು ಶ್ರೀಯುತ ಕೃಷ್ಣ ಭಟ್ ರವರು ಪೇಜಾವರ ಶ್ರೀಗಳವರಿಗೆ ದಾನವಾಗಿ ನೀಡಿರುತ್ತಾರೆ. ಶ್ರೀ ಮಠಕ್ಕೆ ಸೇರಿದಂತೆ ನೆಲ ಮಹಡಿಯಲ್ಲಿ ಪ್ರವಚನ ಮಂದಿರ [ಅಂದಾಜು 100 ಜನರಿಗೆ ಸ್ಥಳಾವಕಾಶ], ಮೊದಲನೇ ಮಹಡಿಯಲ್ಲಿ ಸಭಾ ಗೃಹ [ಅಂದಾಜು 150 ಜನರಿಗೆ ಸ್ಥಳಾವಕಾಶ] ಹಾಗು ಎರಡನೇ ಮಹಡಿಯಲ್ಲಿ ಯಾಗ ಶಾಲೆಯನ್ನು[ಅಂದಾಜು 80 ಜನರಿಗೆ ಸ್ಥಳಾವಕಾಶ] ಕಟ್ಟಿದ್ದಾರೆ.

You don't have permission to register