History - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
  • Puranic background / ಪೌರಾಣಿಕ ಹಿನ್ನಲೆ

    This region is known as Gautama Kshetra. It is stated in the Brahmanda Purana that, Lord Vishnu settled in this region as Lord Sri Ranganathaswamy to answer the prayers of Kaveri and Sage Gautama. Hence, this region is believed to be called Adirangakshetra among Pancharangakshetras and Gautamakshetra. ಶ್ರೀರಂಗ ಕ್ಷೇತ್ರದ ಸುತ್ತಲೂ ಹರಿಯುವ ಕಾವೇರಿ ಮಾತೆಯ ಪ್ರಾರ್ಥನೆಯ ಮೇರೆಗೆ ಹಾಗೂ ಶ್ರೀ ಗೌತಮ ಮಹರ್ಷಿಗಳ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಶ್ರೀಮಹಾವಿಷ್ಣುವು ಶ್ರೀರಂಗನಾಥ ನಾಮಾಂಕಿನಾಗಿ ಈ ಕ್ಷೇತ್ರದಲ್ಲಿ ನೆಲೆಸಿರುವುದಾಗಿ ಬ್ರಹ್ಮಾಂಡ ಪುರಾಣದಲ್ಲಿ ಉಕ್ತವಾಗಿದೆ. ಕಾವೇರಿ ನದಿಯಿಂದ ಸುತ್ತುವರಿಯಲ್ಪಟ್ಟ ಪಂಚರಂಗ ಕ್ಷೇತ್ರಗಳಲ್ಲಿ ಆದಿರಂಗಕ್ಷೇತ್ರವೆಂದೂ, ಗೌತಮ ಕ್ಷೇತ್ರವೆಂದೂ ಸಹ ಈ ಕ್ಷೇತ್ರವನ್ನು ಕರೆಯುತ್ತಾರೆ.

  • Historical background / ಐತಿಹಾಸಿಕ ಹಿನ್ನೆಲೆ

    Sri Ranganathaswamy temple is believed to have been built by Thirumalayya, who was a chieftain serving the Western Gangas in ninth Century AD. An inscription reveals this fact. The temple has enjoyed the patronage of Hoysalas. Inscription of Hoysala Ballala II, dated 1210 AD, establishes the Hoysala participation. The Presiding deity is a huge idol of Lord Vishnu as Ranganatha, reclining on the huge coils of seven-hooded Adisesha. Thirumalayya is believed to have constructed the Navaranga Mantap. He is also said to have built the temple of Lord Srinivasa as in Tirumala Tirupati at the left side of the Mahadwara. The Hosyala, Vijayanagar kingdoms and Wodeyar dynasty have contributed to the beautification and fortification of this temple complex. Hoysala king Vishnuvardhana is believed to have given grants to Sri Ramanujacharya for managing and running this temple complex. ಶ್ರೀರಂಗನಾಥಸ್ವಾಮಿಯ ದೇವಾಲಯವನ್ನು ತಲಕಾಡಿನ ಗಂಗರ ಕಾಲದಲ್ಲಿ ಮುಖ್ಯಸ್ಥನಾಗಿದ್ದ ತಿರುಮಲಯ್ಯನೆಂಬ ಪಾಳೆಯಗಾರನು 9ನೇ ಶತಮಾನದಲ್ಲಿ ನಿರ್ಮಿಸಿದನೆನ್ನಲಾಗುತ್ತದೆ. ಈ ವಿಷಯವನ್ನು ಇಲ್ಲಿರುವ ಶಿಲಾಶಾಸನದಿಂದ ಅರಿಯಬಹುದಾಗಿದೆ. ಹೊಯ್ಸಳರ ಕಾಲದಲ್ಲಿ ಈ ದೇವಾಲಯವು ಅಭಿವೃದ್ಧಿ ಕಂಡಿತೆಂದು ಹೇಳಲಾಗುತ್ತದೆ. ಹೊಯ್ಸಳರ ಎರಡನೆಯ ಬಲ್ಲಾಳನು ಬರೆಯಿಸಿದ ಕ್ರಿ.ಶ. 1210ರ ಶಿಲಾಶಾಸನವು ಈ ವಿಷಯವನ್ನು ಪುಷ್ಟೀಕರಿಸುತ್ತದೆ. ಶ್ರೀಮನ್ಮಹಾವಿಷ್ಣುವಿನ ರೂಪವಾದ ಶ್ರೀರಂಗನಾಥಸ್ವಾಮಿಯು ಇಲ್ಲಿನ ಆರಾಧ್ಯದೈವವಾಗಿದ್ದು ಏಳುಹೆಡೆಗಳುಳ್ಳ ಆದಿಶೇಷನ ಮೇಲೆ ಪವಡಿಸಿರುವಂತೆ ಕಡೆದಿರುವ ಬೃಹದಾಕಾರದ ಶಿಲ್ಪವಾಗಿದೆ. ಈ ದೇವಾಲಯದ ನವರಂಗಮಂಟಪವನ್ನು ಪಾಳೆಯಗಾರನಾದ ತಿರುಮಲಯ್ಯನು ನಿರ್ಮಿಸಿದನೆನ್ನಲಾಗುತ್ತದೆ. ಮಹಾದ್ವಾರದ ಎಡಬದಿಯಲ್ಲಿರುವ ಶ್ರೀನಿವಾಸನ ದೇವಾಲಯವನ್ನು ತಿರುಮಲ ತಿರುಪತಿಯ ಪ್ರತಿಕೃತಿಯಂತೆ ನಿರ್ಮಿಸಲಾಗಿದೆ. ಹೊಯ್ಸಳ, ವಿಜಯನಗರ ಹಾಗೂ ವೊಡೆಯರ್ ರಾಜಮನೆತನಗಳು ಈ ದೇವಾಲಯಸಮುಚ್ಚಯವನ್ನು ಪೋಷಿಸಿ ರಕ್ಷಿಸಿದರೆನ್ನಲಾಗಿದೆ. ಹೊಯ್ಸಳರಾಜ ವಿಷ್ಣುವರ್ಧನನು ದೇವಾಲಯವನ್ನು ಸಮರ್ಪಕವಾಗಿ ನಡೆಸಲು ಹಲವಾರು ದಾನ-ದತ್ತಿಗಳನ್ನು ಶ್ರೀರಾಮಾನುಜಾಚಾರ್ಯರಿಗೆ ಇತ್ತಿದ್ದನೆಂದು ನಂಬಲಾಗಿದೆ.

  • Temple Architecture / ದೇವಾಲಯ ವಿನ್ಯಾಸ

    The temple faces east and is entered through a gateway carrying an imposing tower of lime and brick called gopura of Vijayanagara period. The gopura of the temple features stories of Lord Vishnu. The Sri Ranaganatha temple consists of a garbhagriha, shukanasi, navaranga and mahamantapa enclosed by prakara. The complex has two prakaras around it called Pradakshinapatha. The roof of the mukhamantapa is decorated with a garland of miniature decorative towers called “Gudi” and “salu” in which different incarnations of Vishnu in stucco are seen. After crossing mukhamantapa, the Adishthana or Garbhagriha is visible. The Navaranga doorway is guarded on either side by two large Dwarapalakas.The main entrance has four pillars of the Vijayanagara period sculpted with the 24 forms of Vishnu. Navaranga has round bell shaped pillars, which was built during the Vijayanagar period, using the materials from Hoysala period, while in constructing the large-pillared courtyard. The shukanasi contains a ceiling with a carved lotus and a pendant. Antarala also houses see the images of Lord Srinivasa and Panchamukha Anjaneya, said to have been installed by Vyasaraya. A Tamil inscription can be seen on the base of the outer wall of the garbhagriha, which is dated in A .D 1210. Shrines like Ranganayaki, Narasimha, Sudarshana, Gopalkrishna, Srinivasa, Rama and Ramanujacharya are in the Complex. ಪೂರ್ವಾಭಿಮುಖವಾಗಿ ಕಟ್ಟಲಾಗಿರುವ ಈ ದೇವಾಲಯದ ಪ್ರವೇಶವು ಮುಗಿಲೆತ್ತರದ ಗಾರೆ ಮತ್ತು ಇಟ್ಟಿಗೆಗಳಿಂದ ನಿರ್ಮಿಸಿರುವ ರಾಜಗೋಪುರದಿಂದ. ಈ ಭಾಗವನ್ನು ವಿಜಯನಗರದ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಯಿತೆನ್ನಲಾಗುತ್ತದೆ. ಈ ರಾಜಗೋಪುರದಲ್ಲಿ ವಿಷ್ಣುವಿನ ಅನೇಕ ಅವತಾರಗಳ ಕಥೆಗಳನ್ನು ಬಿಂಬಿಸಲಾಗಿದೆ. ಶ್ರೀರಂಗನಾಥಸ್ವಾಮಿ ದೇವಾಲಯಸಮುಚ್ಚಯವು ಗರ್ಭಗೃಹ, ಶುಕನಾಸಿ, ನವರಂಗ ಹಾಗೂ ಮಹಾಮಂಟಪಗಳನ್ನೊಳಗೊಂಡಿದ್ದು ಸುತ್ತಲೂ ಪ್ರಾಕಾರವನ್ನು ನಿರ್ಮಿಸಲಾಗಿದೆ. ಎರಡು ಪ್ರಾಕಾರಗಳನ್ನು ಪ್ರದಕ್ಷಿಣಾಪಥವೆಂದು ಕರೆಯುತ್ತಾರೆ. ಮುಖಮಂಟಪದ ಮೇಲ್ಛಾವಣಿಯಲ್ಲಿ ಹಾರದಂತೆ ನಿರ್ಮಿಸಲಾಗಿರುವ ಗೂಡುಗಳಲ್ಲಿ ವಿಷ್ಣುವಿನ ಅವತಾರಗಳನ್ನು ನಿರ್ಮಿಸಲಾಗಿದೆ. ಇದನ್ನು ಗುಡಿ-ಸಾಲು, ಕುಡುಸಾಲು ಅಥವಾ ಕೂಡು-ಸಾಲು ಎಂದೂ ಗುರುತಿಸಲಾಗುತ್ತದೆ. ಮುಖಮಂಟಪವನ್ನು ದಾಟಿ ಮುಂದೆ ಹೋದರೆ, ಗರ್ಭಗೃಹ ಅಥವಾ ಶ್ರೀರಂಗನಾಥನ ಅಧಿಷ್ಠಾನದರ್ಶನವಾಗುತ್ತದೆ. ನವರಂಗದ ದ್ವಾರದಲ್ಲಿ ಇಬ್ಬರು ದ್ವಾರಪಾಲಕರ ದೊಡ್ಡ ವಿಗ್ರಹಗಳಿವೆ. ಮಹಾಮಂಟಪದ ಮುಖ್ಯದ್ವಾರದಲ್ಲಿ ನಾಲ್ಕು ಸ್ಥಂಭಗಳಿದ್ದು ಅವುಗಳಲ್ಲಿ ಶ್ರೀಮನ್ಮಹಾವಿಷ್ಣುವಿನ 24 ರೂಪಗಳನ್ನು ಚಿತ್ರಿಸಲಾಗಿದೆ. ಹೊಯ್ಸಳರ ಕಾಲದ ಶಿಲಾಕೃತಿಗಳನ್ನು ಬಳಸಿ ನವರಂಗದ ಸ್ಥಂಭಗಳನ್ನಾಗಿ ವಿಜಯನಗರದ ಕಾಲದ ಶಿಲ್ಪಿಗಳು ಬಳಸಿದ್ದಾರೆ. ಶುಕನಾಸಿಯ ಛಾವಣಿಯಲ್ಲಿ ಕಮಲಪುಷ್ಪವನ್ನು ಚಿತ್ರಿಸಲಾಗಿದೆ. ಮಹಾಮಂಟಪದ ಅಂತರಾಳದಲ್ಲಿ ಶ್ರೀ ವ್ಯಾಸರಾಜರು ಸ್ಥಾಪಿಸಿದ ಶ್ರೀ ಶ್ರೀನಿವಾಸ ಹಾಗೂ ಪಂಚಮುಖಿ ಆಂಜನೇಯಸ್ವಾಮಿಯ ವಿಗ್ರಹಗಳಿವೆ.

You don't have permission to register

Enquiry

[contact-form-7 404 "Not Found"]