History - Book online Pujas, Homam, Sevas, Purohits, Astro services| Pure Prayer
cart
Top
Image Alt
  • Guruparampare / ಗುರುಪರಂಪರೆ

    Shri Madhvacharyaru 1238 – 1317 Shri Padmanabha Teertharu 1317 – 1324 Shri Laksmidhara Teertharu 1324 – 1334 Shri Sankarshana Teertharu 1334 – 1354 Shri Parashurama Teertharu 1354 – 1364 Shri Adiraja Teertharu 1364 – 1384 Shri Satyavrata Teertharu 1384 – 1400 Shri Svarnavarna Teertharu 1400 – 1420 Shri Sripadaraja Teertharu 1412 – 1504 Shri Hayagreeva Teertharu 1500 – 1536 Shri Sripati Teertharu 1536 – 1571 Shri Sridhara Teertharu 1570 – 1598 Shri Gopalaswamy Teertharu 1598 – 1620 Shri Uttanda Ramachandra Teertharu 1620 – 1645 Shri Raghunatha Teertharu 1645 – 1670 Shri Lakshmi Manohara Teertharu 1670 – 1708 Shri Lakshmipati Teertharu 1700 – 1715 Shri Lakshminatha Teertharu 1715 – 1726 Shri Lakshmikantha Teertharu 1726 – 1746 Shri Srikantha Teertharu 1740 – 1761 Shri Srinidhi Teertharu 1761 – 1787 Shri Vidyanidhi Teertharu 1782 – 1795 Shri Gyananidhi Teertharu 1788 – 1800 Shri Gunanidhi Teertharu 1798 – 1804 Shri Gunasaranidhi Teertharu 1804 – 1813 Shri Pragnanidhi Teertharu 1813 – 1818 Shri Subodhanidhi Teertharu 1818 – 1839 Shri Vairagyanidhi Teertharu 1839 – 1851 Shri Sugnananidhi Teertharu 1851 – 1886 Shri Sugunanidhi Teertharu 1856 – 1885 Shri Sudhinidhi Teertharu 1881 – 1906 Shri Medhanidhi Teertharu 1906 – 1926 Shri Dayanidhi Teertharu 1926 – 1962 Shri Satyanidhi Teertharu 1955 – 1980 Shri Vijayanidhi Teertharu 1980 – 1987 Shri Vignananidhi Teertharu 1987 – 2010 Shri Keshavanidhi Teertharu (PRESENT PITATHIPATHI )

  • Dhruvakumara / ಧೃವಕುಮಾರ

    Dhruva was a great devotee of Lord Vishnu, who undertook an arduous penance at the age of five with a desire to get his right over the throne of his father. However, when Lord Vishnu appeared in front of him, Dhruva forgot the purpose for which he had undertaken the penance. Lord Vishnu blessed him with His Conch. Dhruva received a royal welcome when he returned to his kingdom. He ascended the throne at the age of six years. Later Dhruva became a Pole Star. Dhruva-stuti finds mention in Sri Vishnu Purana and also Bhagavata Purana. Lord Vishnu granted the wish of Dhruva and decreed that the boy would attain Dhruvapada - a celestial state would not even be touched by Mahapralaya or final cataclysm. North Pole Star is called Dhruva Nakshatra in Sanskrit literature. Since this is an official post - Dhruvaraja thought that he would not be entitled to attain Moksha, the desired goal of every soul. He wanted to know the attributes of God in a disciplined manner during a lifetime in a place designated for the purpose in the universe i.e. Bharata. Accordingly, Dhruvaraja came down to the earth in an Amsha and assumed Sanyasa to complete his Sadana and goes by the name Sri Sripadaraja. ಧೃವಕುಮಾರನು ಮಹಾವಿಷ್ಣುವಿನ ಅನನ್ಯ ಭಕ್ತನಾಗಿದ್ದನು. ತನ್ನ ತಂದೆಯ ಸಿಂಹಾಸನವನ್ನೇರಲು ಅಡ್ಡಿಯಾದದ್ದರಿಂದ ಅದರ ಅಧಿಕಾರವನ್ನು ಪಡೆಯಲು ತನ್ನ ಐದನೇ ವಯಸ್ಸಿನಲ್ಲಿಯೇ ಧೃವಕುಮಾರ ತಪಸ್ಸನ್ನಾಶ್ರಯಿಸಿದನು. ಆದರೆ ಮಹಾವಿಷ್ಣುವು ಬಾಲಕನೆದುರಿಗೆ ಪ್ರತ್ಯಕ್ಷನಾಗಲು, ಅವನು ಕಣ್ಣುಮುಚ್ಚಿ ಕುಳಿತಿದ್ದನು. ಮಹಾವಿಷ್ಣುವು ಬಾಲಕನ ಮನಸ್ಸಿನೊಳಗೆ ಪ್ರವೇಶಿಸಿ ಅವನ ಕಣ್ಣು ತೆರೆಯಿಸಿದನು ಮತ್ತು ತನ್ನ ಶಂಖದಿಂದ ಸ್ಪರ್ಶಿಸಿ ಬಾಲಕನನ್ನು ಏನಾಗಬೇಕೆಂದು ಪ್ರಶ್ನಿಸಿದನು. ಭಗವಂತನ ಸಾಕ್ಷಾತ್ಕಾರವಾಗಲು ಮೂಕವಿಸ್ಮಿತನಾಗಿದ್ದ ಬಾಲಕ ತನ್ನ ಮೂಲ ಬೇಡಿಕೆಯನ್ನು ಮರೆತು ಸನ್ನ್ಯಾಸದ ವರವನ್ನು ಬೇಡುತ್ತಾನೆ. ಮಹಾವಿಷ್ಣುವು ಬಾಲಕನ ಧೀಶಕ್ತಿಯನ್ನು ಕಂಡು ಮೋಕ್ಷವನ್ನು ಕರುಣಿಸಿದುದಲ್ಲದೆ ಆತನ ಮೂಲ ಆಸೆಯಾಗಿದ್ದ ರಾಜ್ಯಾಭಿಷೇಕವನ್ನು ಕರುಣಿಸಿದನು. ಬಾಲಕ ಧೃವನು ತನ್ನ ಆರನೆ ವಯಸ್ಸಿನಲ್ಲಿ ರಾಜ್ಯಕ್ಕೆ ಹಿಂದಿರುಗಲಾಗಿ ಆತನನ್ನು ರಾಜನಾಗಿ ನೇಮಿಸಲಾಯಿತು. ಮಹಾವಿಷ್ಣುವು ನೀಡಿದ್ದ ವರದಂತೆ ಧೃವಕುಮಾರನು ತನ್ನ ಇಹಲೋಕದ ಯಾತ್ರೆಯನ್ನು ಪೂರ್ಣಗೊಳಿಸಿದ ನಂತರ ಉತ್ತರ ಧೃವತಾರೆಯಾಗಿ ಸ್ಥಾಪಿತನಾದನು. ಈತನು ಧೃವತಾರೆಯಾಗಿರುವುದರಿಂದ ಮಹಾಪ್ರಳಯಕಾಲದಲ್ಲಿಯೂ ಈತನಿಗೆ ಯಾವುದೇ ನಷ್ಟ ಉಂಟಾಗಲಾರದು. ತಾರಾಲೋಕ ಪ್ರಾಪ್ತಿಯಾದರೂ ಧೃವರಾಜನಿಗೆ ಮೋಕ್ಷಪ್ರಾಪ್ತಿಯಾಗಿಲ್ಲವೆನಿಸಿತು. ಆದ್ದರಿಂದ ಮೋಕ್ಷವನ್ನು ಪಡೆಯಲೋಸುಗ ಆತನು ಭವವಂತನ ವಿವಿಧ ಗುಣಗಳನ್ನು ನಿರ್ದಿಷ್ಟ ರೀತಿಯಲ್ಲಿ ತಿಳಿದುಕೊಳ್ಳಲು ಬಯಸಿದನು. ಈ ಕಾರಣದಿಂದ ಧೃವನು ಮತ್ತೆ ಒಂದಂಶದಿಂದ ಮತ್ತೆ ಭೂಲೋಕಕ್ಕೆ ಆಗಮಿಸಿ ಸನ್ನ್ಯಾಸ ಸ್ವೀಕಾರ ಮಾಡಿ ಶ್ರೀಪಾದರಾಜರೆಂದು ಹೆಸರು ಪಡೆದು ತನ್ಮೂಲಕ ಭಗವಂತನ ನಾಮಸ್ಮರಣೆ, ಧ್ಯಾನ, ಜಪ-ತಪಗಳಲ್ಲಿ ತೊಡಗಿಸಿಕೊಂಡು ಮೋಕ್ಷಪಡೆದನಲ್ಲದೆ ಲೋಕ ಕಲ್ಯಾಣವನ್ನೂ ಸಾಧಿಸಿದನು.

  • Sripadarajaru / ಶ್ರೀಪಾದರಾಜರು

    Lakshminarayana was the name of Sripadaraja before being ordained into sainthood. He was born in 1404 to Sheshagiri and Tayamma at a small village called Abbur near Chennapatna, which is now famous for wooden handicrafts. Lakshminarayana was very popular in his village even as a boy for his wisdom and intelligence. Once, when he was going with his cows for grazing in the forest, he heard some strange sound and on turning in the direction of that sound, he saw a palanquin being brought. When the palanquin came to him, a saint sitting in the palanquin enquired with Lakshminarayana as to what was the distance from that point to the nearest village. Instead of giving a direct reply, the boy said that since he, along with his friends, was playing still in the open, the indication was that the village was quite nearby. Astonished by the wit of the boy and his eloquence, courage and intelligence of the boy, the saint blessed the boy with Mantrakshate. The saint had foreseen that the boy would one day be a great person. The boy was none other than Sripadaraja. Later, Sripadaraja was a beloved student of Sri Swarnavarna Tirtharu. ಶ್ರೀಪಾದರಾಜರ ಜನನ 1404ರಲ್ಲಿ ಚನ್ನಪಟ್ಟಣದ ಅಬ್ಬೂರಿನಲ್ಲಾಯಿತು. ಇವರ ತಂದೆಯ ಹೆಸರು ಶೇಷಗಿರಿ ತಾಯಿ ಗಿರಿಯಮ್ಮ. ಶ್ರೀಪಾದರಾಜರ ಪೂರ್ವದ ಹೆಸರು ಲಕ್ಷ್ಮೀನಾರಾಯಣ ಎಂದು, ಇವರು ಬಾಲ್ಯದಲ್ಲೆ ತಮ್ಮ ಅಪೂರ್ವ ಬುದ್ಧಿಮತ್ತತೆ ಹಾಗೂ ತೀಕ್ಷ್ಣತೆಯಿಂದ ಗ್ರಾಮದಲ್ಲೆಲ್ಲಾ ಹೆಸರುವಾಸಿಯಾಗಿದ್ದರು. ಒಮ್ಮೆ ಲಕ್ಷ್ಮಿನಾರಾಯಣ ಕಾಡಿನಿಂದ ಗೋವುಗಳನ್ನು ಮನೆಗೆ ಕರೆದುಕೊಂಡು ಬರುವಾಗ ಹಿಂದಿನಿಂದ ಏನೋ ಶಬ್ದ ಬಂದಂತಾಗಿ ಹಿಂತಿರುಗಿ ನೋಡಲು ಒಂದು ಪಲ್ಲಕ್ಕಿಯು ತನ್ನತ್ತ ಬರುತ್ತಿರುವುದನ್ನು ಕಂಡನು. ಅದು ಹತ್ತಿರ ಬರಲಾಗಿ ಅದರೊಳಗಿದ್ದ ಯತಿಯು ಹತ್ತಿರದ ಗ್ರಾಮಕ್ಕೆ ಎಷ್ಟು ದೂರ ಎಂದು ಕೇಳಿದರು. ಆಗ ಅವನು ನಾವು ಇನ್ನೂ ಇಲ್ಲೇ ಆಡುತ್ತಿದ್ದೇವೆ ಎಂದರೆ ಹಳ್ಳಿ ಹತ್ತಿರದಲ್ಲಿದೆ ಎಂದರ್ಥ ಎಂದು ಚಮತ್ಕಾರವಾಗಿ ಹೇಳಿದನು. ಆ ಮಾತನ್ನು ಕೇಳಿ ಅವರು ಆಶ್ಚರ್ಯ ಚಕಿತರಾದರು. ಆ ಪಲ್ಲಕ್ಕಿಯಲ್ಲಿದವರು ಶ್ರೀ ಸ್ವರ್ಣವರ್ಣ ತೀರ್ಥರು ಅವರು ಆ ಬಾಲಕನ ದಿವ್ಯ ಪ್ರಭೆಯನ್ನು ಕಂಡು ಅವನನ್ನು ಮಂತ್ರಾಕ್ಷತೆಯೊಂದಿಗೆ ಹರಸಿದರು. ಮುಂದೆ ಇವರ ವಿದ್ಯಾಭ್ಯಾಸ ಶ್ರೀಸ್ವರ್ಣವರ್ಣ ತೀರ್ಥರ ನೇತೃತ್ವದಲ್ಲಿ ನಡೆಯಿತು.

  • Mulabagilu / ಮುಳಬಾಗಿಲು

    Mulabagilu is a town and Taluk headquarters of Mulabagilu taluk in the Kolar district in the state of Karnataka, India. It lies just off the National Highway 4 as the eastern most town of the state and a hill landmark. "Mulabagilu" comes from the word mudalabagilu, which means the "eastern door" in the native Kannada language. Mulabagilu was supposedly the easternmost frontier of (and thereby the entrance to) the state of Mysuru. Hence, the name. Mulabagilu was also the eastern gate to the Vijayanagara Empire. Mulabagilu is home to several famous temples, and is popularly known as the land of "Temple Places." ಮುಳಬಾಗಿಲು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿನ ಒಂದು ಊರು. ಆಂಧ್ರ ಪ್ರದೇಶದಗಡಿಯಲ್ಲಿರುವ ಈ ಜಿಲ್ಲೆಯಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳನ್ನು ಮಾತನಾಡುತ್ತಾರೆ. ಪೂರ್ವ ದಿಕ್ಕಿನಿಂದ ಕರ್ನಾಟಕವನ್ನು ಪ್ರವೇಶಿಸಲು ಇದು ಬಾಗಿಲು. ಕರ್ನಾಟಕದ ಮೂಡಣ ಬಾಗಿಲು - ಮೂಡು ಬಾಗಿಲು - ಮುಂದೆ ಅದು ಮುಳಬಾಗಿಲು ಎನಿಸಿಕೊಂಡಿದೆ. ಇಲ್ಲಿ ಅನೇಕ ದೇವಸ್ಥಾನಗಳಿವೆ ಹಾಗೂ ಮಾಧ್ವ ಯತಿಗಳಲ್ಲೊಬ್ಬರಾದ ಮತ್ತು ದಾಸ ಸಾಹಿತ್ಯದ ಪ್ರಮುಖರಾಗಿರುವ ಶ್ರೀಪಾದರಾಜರ ಬೃಂದಾವನವಿರುವ ನರಸಿಂಹ ತೀರ್ಥವೂ ಇದೆ.

You don't have permission to register

Enquiry

[contact-form-7 404 "Not Found"]