History - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temples  >  Sri Subrahmanya Mutt - Akshayanagar  >  History</span
 • Guru Parampara / ಗುರು ಪರಂಪರೆ

  Jagadguru Sri Madwacharya Sri Vishnu Teertharu Sri Aniruddha Teertharu Sri Varaaha Teertharu Sri Vaageesha Teertharu Sri Vishwesha Teertharu Sri Venkatesha Teertharu Sri Vakyadheesha Teertharu Sri Vidyaapathi Teertharu Sri Vaasudeva Teertharu Sri Vaamana Teertharu Sri Vedavyaasa Teertharu Sri Vaikuntavallabha Teertharu Sri Vijnaana Teertharu Sri Vimalathma Teertharu Sri Vibhudhesha Teertharu Sri Vedagarbha Teertharu Sri Vedapoojya Teertharu Sri Vedesha Teertharu Sri Vidyaadhiraaja Teertharu Sri Varadaraaja Teertharu Sri Varadesha Teertharu Sri Vidyaanidhi Teertharu Sri Vedaanthanidhi Teertharu Sri Vidyaadhipathi Teertharu Sri Vishwapooja Teertharu Sri Vishwavanddya Teertharu Sri Vishwaadhipathi Teertharu Sri Vishwapathi Teertharu Sri Vishwaadheesha Teertharu Sri Vidhyadheesha Teertharu Sri Vidhyaavallabha Teertharu Sri Vedaraaja Teertharu Sri Vidyaaraaja Teertharu Sri Vidyaapoorna Teertharu Sri Vyasa Teertharu Sri Vishwaanja Teertharu Sri Vidyaasindhu Teertharu Sri Vidhyabhooshana Teertharu Sri Vidyaprasanna teertha swamiji (Present Pontiff) ಜಗದ್ಗುರು ಶ್ರೀ ಮಧ್ವಾಚಾರ್ಯರು ಶ್ರೀ ವಿಷ್ಣುತೀರ್ಥರು ಶ್ರೀ ಅನಿರುದ್ಧತೀರ್ಥರು ಶ್ರೀ ವರಾಹತೀರ್ಥರು ಶ್ರೀ ವಾಗೀಶತೀರ್ಥರು ಶ್ರೀ ವಿಶ್ವೇಶತೀರ್ಥರು ಶ್ರೀ ವೆಂಕಟೇಶತೀರ್ಥರು ಶ್ರೀ ವಾಕ್ಪತಿತೀರ್ಥರು ಶ್ರೀ ವಿದ್ಯಾಪತಿತೀರ್ಥರು ಶ್ರೀ ವಾಸುದೇವತೀರ್ಥರು ಶ್ರೀ ವಾಮನತೀರ್ಥರು ಶ್ರೀ ವೇದವ್ಯಾಸತೀರ್ಥರು ಶ್ರೀ ವೈಕುಂಠವಲ್ಲಭತೀರ್ಥರು ಶ್ರೀ ವಿಜ್ಞಾನತೀರ್ಥರು ಶ್ರೀ ವಿಮಲಾತ್ಮತೀರ್ಥರು ಶ್ರೀ ವಿಭುಧೇಶತೀರ್ಥರು ಶ್ರೀ ವೇದಗರ್ಭತೀರ್ಥರು ಶ್ರೀ ವೇದಪೂಜ್ಯತೀರ್ಥರು ಶ್ರೀ ವೇದೇಶತೀರ್ಥರು ಶ್ರೀ ವಿದ್ಯಾಧಿರಾಜತೀರ್ಥರು ಶ್ರೀ ವರದರಾಜತೀರ್ಥರು ಶ್ರೀ ವರದೇಶತೀರ್ಥರು ಶ್ರೀ ವಿದ್ಯಾನಿಧಿತೀರ್ಥರು ಶ್ರೀ ವೇದಾಂತನಿಧಿತೀರ್ಥರು ಶ್ರೀ ವಿದ್ಯಾಧಿಪತಿತೀರ್ಥರು ಶ್ರೀ ವಿಶ್ವಪೂಜ್ಯತೀರ್ಥರು ಶ್ರೀ ವಿಶ್ವವಂದ್ಯತೀರ್ಥರು ಶ್ರೀ ವಿಶ್ವಾಧಿಪತಿತೀರ್ಥರು ಶ್ರೀ ವಿಶ್ವಪತಿತೀರ್ಥರು ಶ್ರೀ ವಿಶ್ವಧೀಶತೀರ್ಥರು ಶ್ರೀ ವಿದ್ಯಾಧೀಶತೀರ್ಥರು ಶ್ರೀ ವಿದ್ಯಾವಲ್ಲಭತೀರ್ಥರು ಶ್ರೀ ವೇದರಾಜತೀರ್ಥರು ಶ್ರೀ ವಿದ್ಯಾರಾಜತೀರ್ಥರು ಶ್ರೀ ವಿದ್ಯಾಪೂರ್ಣತೀರ್ಥರು ಶ್ರೀ ವ್ಯಾಸತೀರ್ಥರು ಶ್ರೀ ವಿಶ್ವಜ್ಞತೀರ್ಥರು ಶ್ರೀ ವಿದ್ಯಾಸಿಂಧುತೀರ್ಥರು ಶ್ರೀ ವಿದ್ಯಾಭೂಷಣತೀರ್ಥರು ಶ್ರೀ ವಿದ್ಯಾಪ್ರಸನ್ನತೀರ್ಥರು (ಈಗಿನ ಪೀಠಾಧಿಪತಿಗಳು)

 • Sri Sri Vidyaprasanna Teertha Swamiji / ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮಿಜಿ

  Sri Vidyaprasanna Tirtharu, the present pontiff of Sri Kukke Subrahmanya Mutt, is the 39th pontiff in the lineage. He has completed Anuvyaakhyaana-Nyaya Sudha Mangala under the tutelage of Sri Pejavar Mutt pontiff Sri Visvesha Tirtharu. Under the guidance and leadership of Sri Vidyaprasanna Tirtharu, the Mutt has scaled great heights. The Mutt has opened its branches at Bengaluru and Mumbai. Endowed with high administrative dexterity and a friendly, compassionate demeanor, the seer has been attracting devotees from across the country to the Sri Mutt. He is a firm believer in spirituality, tradition, morality, academic excellence and community services. Sri Vidyaprasanna Tirtharu has studied Ancient Law, Vedanta and Sanskrit Grammar at Poornaprajna Vidyapeetha, in Bengaluru. He completed a degree in Modern Law in 1992 and a post-graduate degree in Sanskrit in 1994. Being fully aware of the importance and significance of education in life and with a view to provide free education to poor children of Kukke and surrounding villages, Sri Vidyaprasanna Tirtharu has set up Sri Gopala Krishna High School and a Sanskrit Gurukul. At Gurukul, education is imparted in Sanskrit and Dwaita philosophy. All these activities show his social concern and desire to serve humanity. He has established Go Shalas (cow shelters) and is actively involved in nurturing, nourishing and protecting cows. ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥರು ಶ್ರೀ ಮಠದ ಗುರುಪರಂಪರೆಯಲ್ಲಿ 39ನೇ ಗುರುಗಳಾಗಿದ್ದಾರೆ. ಪ್ರಸಕ್ತ ಶ್ರೀಗಳ ಅವಿರತ ಚಟುವಟಿಕೆಗಳಿಂದ, ಮುಂದಾಲೋಚನೆಗಳಿಂದ ಮತ್ತು ಸಾಮಾಜಿಕ ಕಳಕಳಿಯಿಂದ ಶ್ರೀ ಮಠವು ಅಪೂರ್ವ ಅಭಿವೃದ್ಧಿಯನ್ನು ಸಾಧಿಸುತ್ತಿದೆ. ಶ್ರೀ ವಿದ್ಯಾಪ್ರಸನ್ನ ತೀರ್ಥರು, ಪೇಜಾವರ ಶ್ರೀಗಳಾದ ಶ್ರೀ ವಿಶ್ವೇಶತೀರ್ಥರ ಶಿಷ್ಯತ್ವದಲ್ಲಿ ಅನುವ್ಯಾಖ್ಯಾನ-ನ್ಯಾಯಸುಧಾಮಂಗಳವನ್ನು ಪೂರ್ಣಗೊಳಿಸಿದ್ದಾರೆ. ಶ್ರೀಗಳವರು ಸ್ವತಃ ವಿದ್ವಾಂಸರಾಗಿರುವರಲ್ಲದೇ, ಹಲವಾರು ವಿದ್ಯಾರ್ಥಿಗಳಿಗೆ ಹಿಂದೂ ಧರ್ಮಗ್ರಂಥಗಳ ಸಮಗ್ರ ಶಿಕ್ಷಣವನ್ನು ನೀಡುತ್ತಿದ್ದಾರೆ. ಶ್ರೀಗಳು ಏನ್ಶಿಯೆಂಟ್ ಲಾ(ಪ್ರಾಚೀನ ನ್ಯಾಯ ಸಂಹಿತೆ), ವೇದಾಂತ ಮತ್ತು ಸಂಸ್ಕೃತ ವ್ಯಾಕರಣ ಶಾಸ್ತ್ರಗಳ ಅಭ್ಯಾಸವನ್ನು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಮಾಡಿರುತ್ತಾರೆ. ಅಷ್ಟೇ ಅಲ್ಲದೆ, 1992ರಲ್ಲಿ, ಶ್ರೀಗಳು ಮಾಡರ್ನ್ ಲಾ ವಿಷಯದಲ್ಲಿ ಪದವಿ ಹಾಗೂ 1994ರಲ್ಲಿ ಸಂಸ್ಕೃತ ಸ್ನಾತಕೋತ್ತರ ಪದವಿಯನ್ನೂ ಪಡೆದಿರುತ್ತಾರೆ. ಸ್ವತಃ ವಿದ್ವಾಂಸರಾಗಿರುವ ಶ್ರೀಗಳಿಗೆ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಶೇಷ ಕಾಳಜಿ ಇದೆ. ಆದ್ದರಿಂದ, ಶ್ರೀಗಳು ಶ್ರೀಗೋಪಾಲಕೃಷ್ಣ ಪ್ರೌಢಶಾಲೆಯನ್ನು ಸ್ಥಾಪಿಸಿ ಮಕ್ಕಳ ಉಚಿತ ವಿದ್ಯಾಭ್ಯಾಸಕ್ಕೆ ಅನುಕೂಲವನ್ನು ಕಲ್ಪಿಸಿದ್ದಾರೆ . ಅಲ್ಲದೆ, ಶ್ರೀಗಳು ಸಂಸ್ಕೃತ ಗುರುಕುಲವೊಂದನ್ನು ಸ್ಥಾಪಿಸಿದ್ದಾರೆ. ಶ್ರೀಗಳು ಸಮಾಜಸೇವೆಯಲ್ಲಿ ಸದಾ ಆಸಕ್ತರಾಗಿದ್ದಾರೆ. ಶ್ರೀಗಳು ಸ್ಥಾಪಿಸಿರುವ ಶ್ರೀಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಕುಕ್ಕೆ ಹಾಗೂ ಸುತ್ತಮುತ್ತ ಹಳ್ಳಿಗಳಲ್ಲಿ ವಾಸಿಸುವ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದ್ದಾರೆ. ಶ್ರೀಗಳು ಗೋಸಂರಕ್ಷಣೆಯಲ್ಲೂ ಆಸಕ್ತಿವಹಿಸಿದ್ದಾರೆ.

 • Historical Background / ಐತಿಹಾಸಿಕ ಹಿನ್ನೆಲೆ

  Sri L.K. Narayan, a devotee of Sri Raghavendra Swamiji donated a vacant site for the construction of Sri Subramanya Mutt in the locality. Inaugurated in 2007 on the auspicious day of Akshaya Triteeya, Sri Subramanya Mutt at Akshaya Nagar has inculcated all the traditional practices and the knowledgeable priests perform the routine daily puja to the presiding deity of Sri Lakshmi Narasihma and also the idol Sri Mukyaprana and the Mrittika Brindavan of Sri Raghavendra Swamiji. This Mutt is under the governance of Sri Subrahmanya Mutt at Kukke and hence, all the important festivals are celebrated with grandeur and the rituals are performed in accordance with the desires of the devotees. ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರಾಗಿದ್ದ ಶ್ರೀ ಎಲ್. ಕೆ ನಾರಾಯಣ್ ಎಂಬುವರು ಅಕ್ಷಯನಗರದಲ್ಲಿದ್ದ ತಮ್ಮ ನಿವೇಶನವೊಂದನ್ನು ಶ್ರೀ ಮಠದ ನಿರ್ಮಾಣಕ್ಕೆಂದು ದಾನ ಮಾಡಿದರು. ೨೦೦೭ನೇ ಇಸವಿಯ ಪವಿತ್ರವಾದ ಅಕ್ಷಯತೃತೀಯಾ ದಿನದಂದು ಆರಂಭಗೊಂಡ ಅಕ್ಷಯನಗರದ ಶ್ರೀ ಸುಬ್ರಹ್ಮಣ್ಯ ಮಠವು ಎಲ್ಲ ಧಾರ್ಮಿಕ ಸಂಪ್ರದಾಯಗಳನ್ನೂ ಯಾವುದೇ ನ್ಯೂನತೆಯಿಲ್ಲದಂತೆ ಅನುಸರಿಸಿಕೊಂಡು ಬಂದಿದೆ. ಇಲ್ಲಿರುವ ನುರಿತ, ಜ್ಞಾನಿಗಳಿಂದ ಅರ್ಚಕರು ದೈನಂದಿನ ಪೂಜಾಕಾರ್ಯಗಳನ್ನು ಶ್ರದ್ಧಾಭಕ್ತಿಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀ ಮಠವು ಕುಕ್ಕೆಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಮಾಠದ ಆಡಳಿತಕ್ಕೊಳಪಟ್ಟಿದೆ.

 • Inauguration of the Mutt / ಮಠದ ಉಧ್ಘಾಟನೆ

  In the gracious presence of Sri Sri Vishveshatirtha Sripadangalavaru, Sri Sri Sushameendra Sripadangalavaru of Sri Mantralayam Mutt and Sri Sri Vidyaprasannatirtha Sripadangalavaru, a branch of the Sri Mutt was inaugurated at Akshayanagar in Bangalore in 2007. Simultaneously, the consecration of Sri Lakshminarasihma, Pranadevaru and Subrahmanyadevaru as well as the Moola Mruttika Brindavana of Sri Raghavendra Swamy were ceremoniously performed. 2007 ರಲ್ಲಿ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಮತ್ತು ಮಂತ್ರಾಲಯ ಮಠದ ಶ್ರೀ ಶ್ರೀ ಸುಶಮೀಂದ್ರ ಶ್ರೀಪಾದಂಗಳ ದಿವ್ಯ ಸಮ್ಮುಖದಲ್ಲಿ ಹಾಗೂ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳ ದಿವ್ಯೋಪಸ್ಥಿತಿಯಲ್ಲಿ ಶ್ರೀಮಠದ ಶಾಖೆ ಉದ್ಘಾಟನೆಯಾಯಿತು. ಶ್ರೀ ಲಕ್ಷ್ಮೀನರಸಿಂಹ, ಪ್ರಾಣದೇವರು, ಸುಬ್ರಹ್ಮಣ್ಯದೇವರು ಮತ್ತು ರಾಘವೇಂದ್ರಸ್ವಾಮಿಗಳ ಮೂಲಮೃತಿಕಾ ಬೃಂದಾವನ ಪ್ರತಿಷ್ಠಾಪನೆ ನಡೆಯಿತು. ಈ ಸ್ಥಳವು ನಗರದ ಬಿಡುವಿಲ್ಲದ ವಾತಾವರಣದಿಂದ ದೂರದಲ್ಲಿ ಪ್ರಶಾಂತವಾಗಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು (ಶಾಂತಿ, ನಾಮಕರಣ, ಉಪನಯನ ಇತ್ಯಾದಿ ಷೋಡಷ ಕರ್ಮಗಳು) ಮಾಡಲು ಅನುಕೂಲವಾಗಿದೆ.

You don't have permission to register

Enquiry

ENQUIRY