History - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
  • Historical background / ಐತಿಹಾಸಿಕ ಹಿನ್ನೆಲೆ

    Sri Vasantha Vallabharaya Swamy temple is believed to have been built during the regime of Chola dynasty. However, since it is mentioned in the Sthalapurana that the temple was first constructed by Sage Mandavya, it can be inferred that the temple was renovated during the Chola period. ಐತಿಹಾಸಿಕವಾಗಿ, ವಸಂತಪುರದಲ್ಲಿರುವ ಶ್ರೀ ವಸಂತ ವಲ್ಲಭರಾಯ ಸ್ವಾಮಿ ದೇವಾಲಯವು ಚೋಳರ ಕಾಲದಲ್ಲಿ ನಿರ್ಮಾಣಗೊಂಡಿತೆಂದು ತಿಳಿದುಬರುತ್ತದೆ. ಆದರೆ, ಈ ದೇವಾಲಯದ ಸ್ಥಳಪುರಾಣದಲ್ಲಿ ಶ್ರೀ ಮಾಂಡವ್ಯ ಋಷಿಗಳು ಈ ದೇವಾಲಯವನ್ನು ಕಟ್ಟಿಸಿದರೆಂದು ಹೇಳಲಾಗಿರುವುದರಿಂದ, ಚೋಳರ ಕಾಲದಲ್ಲಿ ಈ ದೇವಾಲಯವನ್ನು ನವೀಕರಿಸಿರಬಹುದೆಂದು ತಿಳಿಯಬಹುದಾಗಿದೆ.

  • Puranic background / ಪೌರಾಣಿಕ ಹಿನ್ನೆಲೆ

    According to a legend, Sri Vasantha Vallabharaya Temple was originally built by Sri Mandavya Rishi. Once, Sage Mandavya, who was in Badarikashrama in the Himalayas, decided to visit holy places in south India. He visited Melkote and after offering worship to Sri Cheluvanarayana Swamy at Melkote, he was on his return journey. At that moment, while he was meditating, Sri Vallabharaya Swamy appeared to him in a dream and told him that he was residing at Kalyanapuri, which is now called as Vasanthapura in Bengaluru. Accordingly, Sage Mandavya reached Kalyanapura and found a beautiful idol of Sri Vallabharaya Swamy. He consecrated the idol in accordance with the Tantra Sara Scriptures and began offering worship to the deity every day. He was doing penance in a nearby cave called Guptagiri. While he was living in Guptagiri, Srinivasa Kalyana or the wedding of Sri Srinivasa with Padmavati, took place on Earth. Learning about the wedding of Sri Srinivasa, Sage Mandavya regretted for having missed a golden opportunity of witnessing such a sacred incident. The Lord understood the emotions of Sage Mandavya and therefore appeared in front of him, along with his three wives Bhudevi, Neeladevi and Vasanthanayaki. Impressed with the beauty of Kalyanapura, Sri Vallabharaya Swamy, along with his wives, took bath in five lakes in the vicinity. These water bodies came to be known as Shankha Teertha, Chakra Teertha, Plava Teertha, Deva Teertha and Vasantha Teertha. However, only one of the five ponds (Kalyani) is now lying on the premises of the temple. ಒಂದು ದಂತಕಥೆಯ ಪ್ರಕಾರ, ವಸಂತಪುರದಲ್ಲಿರುವ ಶ್ರೀ ವಸಂತ ವಲ್ಲಭರಾಯ ಸ್ವಾಮಿ ದೇವಾಲಯವು ಮೂಲತಃ ಮಹರ್ಷಿ ಮಾಂಡವ್ಯರಿಂದ ನಿರ್ಮಾಣಗೊಂಡಿತೆಂದು ಸ್ಥಳಪುರಾಣದಲ್ಲಿ ಉಲ್ಲೆಖಿಸಲಾಗಿದೆ. ಹಿಮಾಲಯದ ಬದರಿಕಾಶ್ರಮದಲ್ಲಿದ್ದ ಮಾಂಡವ್ಯ ಋಷಿಗಳು ಒಮ್ಮೆ ದಕ್ಷಿಣ ಭಾರತ ಯಾತ್ರಾ ಸ್ಥಳಗಳನ್ನು ಸಂದರ್ಶಿಸಲು ನಿರ್ಧರಿಸುತ್ತಾರೆ. ಅಂತೆಯೇ, ಮಾಂಡವ್ಯರು ಮೇಲುಕೋಟೆಯಲ್ಲಿದ್ದ ಶ್ರೀ ಚೆಲುವ ನಾರಾಯಣಸ್ವಾಮಿಯ ದರ್ಶನವನ್ನು ಮಾಡಿ, ಅರ್ಚಿಸಿ ಆ ದಿನಗಳಲ್ಲಿ ಕಲ್ಯಾಣಪುರಿಯೆಂದು ಕರೆಯಲ್ಪಡುತ್ತಿದ್ದ ಇಂದಿನ ವಸಂತಪುರವನ್ನು ತಲುಪುತ್ತಾರೆ. ವಸಂತಪುರದಲ್ಲಿ ಮಹರ್ಷಿಗಳು ತಪಸ್ಸನ್ನಾಚರಿಸಲು ಆರಂಭಿಸುತ್ತಾರೆ. ಸಮೀಪದಲ್ಲಿಯೇ ಇದ್ದ ಗುಪ್ತಗಿರಿ ಎಂಬಲ್ಲಿ ತಪಶ್ಚರ್ಯೆಯಲ್ಲಿ ತೊಡಗಿದರು. ಆಗೊಮ್ಮೆ ಮಾಂಡವ್ಯರ ಸ್ವಪ್ನದಲ್ಲಿ ಗೋಚರಿಸಿದ ಭಗವಂತನು ತನ್ನ ಸ್ವಯಂಭೂ ಪ್ರತಿಮೆಯೊಂದು ಕಲ್ಯಾಣಪುರಿಯಲ್ಲಿರುವುದೆಂದೂ ಅದನ್ನು ಕಲ್ಯಾಣಪುರಿಯಲ್ಲೇ ಪ್ರತಿಷ್ಠಾಪಿಸಬೇಕೆಂದೂ ಸೂಚಿಸಿದನಂತೆ. ಹೀಗೆ ಮಹರ್ಷಿಗಳು ಅಂದಿನ ಕಲ್ಯಾಣಪುರಿಯಲ್ಲಿ ವಸಂತ ವಲ್ಲಭರಾಯನ ಸುಂದರ ವಿಗ್ರಹವೊಂದನ್ನು ಕಂಡು, ತಂತ್ರಸಾರದಲ್ಲಿ ಹೇಳಿರುವಂತೆ ಶಾಸ್ತ್ರೋಕ್ತವಾಗಿ ಶ್ರೀ ವಸಂತ ವಲ್ಲಭರಾಯನ ಪ್ರಾಣಪ್ರತಿಷ್ಠಾಪನೆಯನ್ನು ನೆರವೇರಿಸಿ, ನಿತ್ಯವೂ ಪೂಜೆ, ಅರ್ಚನೆ ಮಾಡಲಾರಂಭಿಸಿದರು. ಹೀಗಿರುವಾಗ, ಭೂಲೋಕದಲ್ಲಿ ಶ್ರೀ ಶ್ರೀನಿವಾಸ-ಪದ್ಮಾವತಿಯರ ವಿವಾಹ ಮಹೋತ್ಸವವು ನಡೆಯಿತೆಂದು ಮಾಂಡವ್ಯರಿಗೆ ತಿಳಿದುಬರುತ್ತದೆ. ಇಂತಹ ಅಪೂರ್ವವಾದ, ಪುಣ್ಯಕರವಾದ ಮತ್ತು ಅನೂಹ್ಯವಾದ ಪರಮಾತ್ಮನ ವಿವಾಹ ಮಹೋತ್ಸವವನ್ನು ವೀಕ್ಷಿಸಲಾಗಲಿಲ್ಲವೆಂದು ಮಾಂಡವ್ಯ ಋಷಿಗಳು ನೊಂದುಕೊಳ್ಳುತ್ತಾರೆ. ಇವರ ಮನೋಗತವನ್ನು ಅರಿತ ಪರಮಾತ್ಮನು ತನ್ನ ಮೂವರು ಭಾರ್ಯೆಯರಾದ ಭೂದೇವಿ, ನೀಳಾದೇವಿ ಹಾಗೂ ರಂಗನಾಯಕಿಯರೊಂದಿಗೆ ಕಲ್ಯಾಣಪುರಿಗೇ ಆಗಮಿಸಿ, ಮಾಂಡವ್ಯ ಋಷಿಗಳ ಮನಸ್ಸನ್ನು ತೃಪ್ತಿಗೊಳಿಸುತ್ತಾನೆ. ಕಲ್ಯಾಣಪುರಿಯ ವಿಹಂಗಮ ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಪರಮಾತ್ಮನು, ಸಮೀಪದಲ್ಲಿದ್ದ ಶಂಖ ತೀರ್ಥ, ಚಕ್ರ ತೀರ್ಥ, ಪ್ಲವ ತೀರ್ಥ, ದೇವ ತೀರ್ಥ ಮತ್ತು ವಸಂತ ತೀರ್ಥ ಎಂದು ಕರೆಯಲಾಗುತ್ತಿದ್ದ ಪಂಚ ತೀರ್ಥಗಳಲ್ಲಿ ಸ್ನಾನಮಾಡಿದನೆಂದು ಹೇಳಲಾಗುತ್ತದೆ. ಆದರೆ, ಇವುಗಳಲ್ಲಿ ಒಂದು ಕಲ್ಯಾಣಿ ಮಾತ್ರ ಇಂದಿಗೂ ಶ್ರೀ ವಸಂತ ವಲ್ಲಭರಾಯ ಸ್ವಾಮಿ ದೇವಾಲಯದ ಆವರಣದಲ್ಲಿ ಕಾಣಸಿಗುತ್ತದೆ.

You don't have permission to register

Enquiry

[contact-form-7 404 "Not Found"]