History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Nandi hills / ನಂದಿ ಬೆಟ್ಟ

    Nandi hills is at an altitude of 4851 ft. from the sea-level and at about 60 km from Bengaluru, the capital of Karnataka. Presiding deity of this temple is Sri Nandeeshwara in the form of Linga. This region was under the regime of several dynasties such as Nolambas, Rashtrakutas, Gangas, Hoysalas, Salvas and so on. This may have led to the development of the temple as a complex. Temples on Nandi Hills are symbolically described as indicative of four phases of human life. Sri Arunachaleshwara represents the childhood, Sri Bhoganandeeshwara the manhood and Sri Uma-Maheshwara represents married life. Sri Yoganandeeshwara represents renunciation or Vanaprastha. ಖ್ಯಾತವಾದ ಗಿರಿಧಾಮವಾದ, ನಂದಿದುರ್ಗ, ನಂದಿಗಿರಿ, ಕೂಷ್ಮಾಂಡಗಿರಿ, ಎಂದೆಲ್ಲಾ ಕರೆಯಲ್ಪಡುವ ನಂದಿಬೆಟ್ಟವು ಕರ್ನಾಟಕರಾಜ್ಯದ ರಾಜಧಾನಿ ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿದೆ. ಇದು ಸಮುದ್ರಮಟ್ಟದಿಂದ 4851 ಅಡಿ ಎತ್ತರದಲ್ಲಿದೆ. ಈ ಪ್ರಾಂತವು ನೊಳಂಬ, ರಾಷ್ಟ್ರಕೂಟ, ಗಂಗ, ಹೊಯ್ಸಳ, ಸಾಳುವ ಹೀಗೆ ಅನೇಕ ರಾಜರುಗಳ ಅಧಿಪತ್ಯಕ್ಕೆ ಒಳಪಟ್ಟಿತ್ತು. ಹೀಗಾಗಿ, ಇಲ್ಲಿರುವ ದೇವಾಲಯ ಸಮುಚ್ಚಯವು ಅನೇಕ ಸಾಮ್ರಾಜ್ಯಗಳಿಂದ ಬೆಳವಣಿಗೆಯಾಯಿತು. ನಂದಿಬೆಟ್ಟದ ದೇವಾಲಯಗಳನ್ನು ಹೀಗೆ ವರ್ಣಿಸುತ್ತಾರೆ: ಅರುಣಾಚಲೇಶ್ವರನ ದೇವಾಲಯವು ಬಾಲ್ಯವನ್ನು ಸೂಚಿಸುತ್ತದೆ. ಭೋಗನಂದೀಶ್ವರ ದೇವಾಲಯವು ಯೌವನಾವಸ್ಥೆಯನ್ನೂ, ಉಮಾಮಹೇಶ್ವರನ ದೇವಾಲಯವು ವಿವಾಹಾವಸ್ಥೆಯನ್ನೂ ಯೋಗನಂದೀಶ್ವರನ ದೇವಾಲಯವು ವೈರಾಗ್ಯವನ್ನೂ ಸೂಚಿಸುತ್ತದೆ. ಕನ್ನಡಸಾಹಿತ್ಯದ ಖ್ಯಾತ ಕೃತಿಯಾದ ಸಿರಿಭೂವಲಯದಲ್ಲಿ ಅಣುವಿಜ್ಞಾನದ ಮಾಹಿತಿಯನ್ನು ಕನ್ನಡದಲ್ಲಿ ಬಹಳ ಸರಳವಾಗಿ ವಿವರಿಸಿರುವ ಕುಮುದೇಂದುಮುನಿಯು ಚಿಕ್ಕಬಳ್ಳಾಪುರ ಜಿಲ್ಲೆಯ ಹಾಗೂ ತಾಲೂಕಿನ ನಂದಿಬೆಟ್ಟದ ಸಮೀಪದಲ್ಲಿರುವ ಯಲವಳ್ಳಿ ಎಂಬ ಗ್ರಾಮದವನು ಎಂಬ ಇತಿಹಾಸವಿದೆ.

  • Sri Yoga Nandeeshwara / ಶ್ರೀ ಯೋಗನಂದೀಶ್ವರ

    It is believed that Sri Yoganandishwara was consecrated by the twin sages Kushmanda and Shravanaka. The temple structure rests on the rock bottom without any foundation. The history of the temple goes back to the period of Cholas, Banas, Gangas, Nolambas, Hoysalas and Vijayanagar Kings. Seeking the blessings of Goddess Parvati is believed to result in full benefits after darshan of Sri Yoga Nandishwara. Hence, Muktamba is the name of Parvati in this temple. ಶ್ರೀ ಯೋಗನಂದೀಶ್ವರಸ್ವಾಮಿಯನ್ನು ಅವಳಿಋಷಿಗಳಾದ ಕೂಷ್ಮಾಂಡ ಹಾಗೂ ಶ್ರವಣಕರಿಂದ ಪ್ರತಿಷ್ಠಾಪಿಸಲ್ಪಟ್ಟಿತು ಎಂದು ಪ್ರತೀತಿಯಿದೆ. ಈ ದೇವಾಲಯವನ್ನು ಯಾವುದೇ ಅಡಿಪಾಯವಿಲ್ಲದೆ ಬಂಡೆಯ ಮೇಲೆ ಕಟ್ಟಿದ್ದಾರೆ. ಗಂಗರ, ರಾಷ್ಟ್ರಕೂಟರ, ನೊಳಂಬರ ಕಾಲದಲ್ಲಿ ಈ ದೇವಾಲಯವು ಬೆಳವಣಿಗೆಯನ್ನು ಕಂಡಿದೆ. ದೇವಾಲಯದ ಕಟ್ಟಡವನ್ನು 11ನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ಕಟ್ಟಲಾಗಿದೆ. ನಂತರ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ದೇವಾಲಯವು ಅಭಿವೃದ್ದಿ ಹೊಂದಿತೆಂದು ಹೇಳಲಾಗುತ್ತದೆ. ಯೋಗನಂದೀಶ್ವರನ ದರ್ಶನಕ್ಕೆ ಬರುವ ಭಕ್ತಾದಿಗಳೆಲ್ಲರೂ ಪಾರ್ವತಿಯ ದರ್ಶನ ಪಡೆದರೆ ಮಾತ್ರ ಈಶ್ವರನ ಪೂಜಾಫಲವನ್ನೂ ಹಾಗೂ ಮುಕ್ತಿಯನ್ನೂ ಹೊಂದಬಹುದೆಂದು ನಂಬುತ್ತಾರೆ. ಆದ್ದರಿಂದ ಇಲ್ಲಿನ ಪಾರ್ವತಿಗೆ ಮುಕ್ತಾಂಬಾ ಎಂದು ಕರೆಯುತ್ತಾರೆ.

  • Sri Yoganandeeshwara Swamy Temple Architecture / ಶ್ರೀ ಯೋಗನಂದೀಶ್ವರಸ್ವಾಮಿ ದೇವಾಲಯ ವಿನ್ಯಾಸ

    Sri Yoganandeeshwara temple, as stated represents Vairagya or pinnacle of life. Here, the deities of Ishwara and Parvati are consecrated separately. Two Mantaps have been constructed between the temples of these deities. Both the temples have Sanctum sanctorum, Shukanasi, Navaranga and Mukhamantap. A tower (Gopura) has been constructed on the on each sanctum. Twin towers (Rajagopura) have been constructed to the south of the temple. The Chola style is evident from the gates constructed in the eastern and western parts that are twenty foot high. The roof of Mukhamantap displays Uma-Maheshwara with Ashta Dikpalaks. A 10 ft- deep kalyani has been carved in a big rock behind the temple. Navagrahas have been consecrated here recently. ಶ್ರೀ ಯೋಗನಂದೀಶ್ವರಸ್ವಾಮಿ ದೇವಾಲಯದ ಶುಕನಾಸಿಯನ್ನು ವಿಜಯನಗರದ ಅರಸರು ಬೆಳ್ಳಿ, ಬಂಗಾರ, ತಾಮ್ರ, ಕಂಚು ಹಾಗೂ ಹಿತ್ತಾಳೆಯನ್ನು ಸೇರಿಸಿ ಮಾಡಲಾಗುವ ಪಂಚಲೋಹದಿಂದ ನಿರ್ಮಿಸಿದ್ದಾರೆ. ಇಲ್ಲಿನ ದ್ವಾರಪಾಲಕರನ್ನು ಸಹ ಪಂಚಲೋಹದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಭೈರವಿ, ನಂದಿ, ಸ್ಥೂಲಬ್ರಹ್ಮ, ರಥಾರೂಢ ಸೂರ್ಯ, ಗಣೇಶ, ದಕ್ಷಿಣಾಮೂರ್ತಿ, ಬೈರವ, ಪಾಣಿಪೀಠಸಹಿತ ಲಿಂಗ, ಚಂಡಿಕೇಶ್ವರಾದಿ ದೇವತೆಗಳ ಮೂರ್ತಿಗಳಿವೆ. ಶ್ರೀ ಯೋಗನಂದೀಶ್ವರಸ್ವಾಮಿ ದೇವಾಲಯದಲ್ಲಿ ಈಶ್ವರ ಮತ್ತು ಪಾರ್ವತಿಯರ ದೇವಾಲಯಗಳು ಬೇರೆ ಬೇರೆಯಾಗಿದೆ. ಈ ಎರಡು ದೇವಾಲಯಗಳ ಮಧ್ಯದಲ್ಲಿ ಎರಡು ಮಂಟಪಗಳು ಇವೆ. ಈ ಮಂಟಪಗಳು ಎರಡೂ ದೇವಾಲಯಗಳನ್ನು ಒಂದು ಗೂಡಿಸುತ್ತದೆ. ಈ ಎರಡು ದೇವಾಲಯಗಳು ಮೊದಲಿಗೆ ಗರ್ಭಗುಡಿ, ಶುಕನಾಸಿ, ನವರಂಗ ಹಾಗೂ ಮುಖಮಂಟಪಗಳಿಂದ ಕೂಡಿದ್ದು, ಇವು ಚೋಳಶೈಲಿಯಲ್ಲಿ ನಿರ್ಮಾಣವಾಗಿದೆ. ಪೂರ್ವ ಮತ್ತು ಪಶ್ಚಿಮವಾಗಿ ಎರಡು ಕಡೆ ಮಹಾದ್ವಾರಗಳಿದ್ದು ಸುಮಾರು 20 ಅಡಿ ಎತ್ತರ ಇರುತ್ತದೆ. ಇದು ಸಹ ಚೋಳರ ಶೈಲಿಯನ್ನು ನಿರೂಪಿಸುತ್ತದೆ ಎನ್ನುತ್ತಾರೆ. ದೇವಸ್ಥಾನದ ಮುಖ ಮಂಟಪದಲ್ಲಿ ಉಮಾಮಹೇಶ್ವರ ಸಹಿತ ಅಷ್ಟದಿಕ್ಪಾಲಕರನ್ನು ಮುಖ ಮಂಟಪದ ಛಾವಣಿಯ ಕೆಳಗೆ ಕೆತ್ತನೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಹಾಗೆ ನವಗ್ರಹ ಸ್ಥಾಪನೆ ಮಾಡಲಾಗಿದೆ. ದೇವಾಲಯಕ್ಕೆ ದಕ್ಷಿಣ ದಿಕ್ಕಿನಲ್ಲಿ ಅವಳಿ ರಾಜಗೋಪುರವಿದೆ. ಈ ಎರಡೂ ದೇವಾಲಯಗಳ ಗರ್ಭಗುಡಿಯ ಮೇಲಿನ ಗೋಪುರಗಳನ್ನು ಇಟ್ಟಿಗೆ ಹಾಗೂ ಗಾರೆಯಿಂದ ಕಟ್ಟಿದ್ದಾರೆ. ಪ್ರಾಕಾರವನ್ನು ಚೋಳರು ಆಗಿನ ಕಾಲದಲ್ಲಿ ವಾತಾನುಕೂಲಿತವಾಗಿ ಕಟ್ಟಿದ್ದಾರೆ. ಪ್ರಾಕಾರದ ಗೋಡೆಯು ಎರಡು ಭಾಗಗಳಿಂದ ಕೂಡಿದ್ದು ಮಧ್ಯ ಮೂರು ಅಡಿಗಳ ಅಂತರವಿದೆ. ಇದರಿಂದ ಎಲ್ಲ ಕಾಲಗಳಲ್ಲಿ ಹವಾನಿಯಂತ್ರಣವಾಗಿ ಸಹಕಾರಿಯಾಗಿದೆ. ಚೋಳರ ಕಾಲದಲ್ಲಿ ಗಾರೆಯಿಂದ ಮಾಡಿಸಿದ್ದು ಪ್ರಾಕಾರವು ಈವರೆಗೂ ಹಾಗೆಯೇ ಇದೆ. ದೇವಸ್ಥಾನದ ಹಿಂಭಾಗದಲ್ಲಿ ಕಲ್ಯಾಣಿ ಇದ್ದು ಈ ಕಲ್ಯಾಣಿಯನ್ನು 10 ಅಡಿ ಆಳಕ್ಕೆ ಬಂಡೆಯನ್ನು ಕೊರೆದು ಮೇಲೆ ಕಟ್ಟಡವನ್ನು ನಿರ್ಮಿಸಿದ್ದಾರೆ. ಕಲ್ಯಾಣಿಯ ನೀರನ್ನು ಹಿಂದೆ ದೇವಸ್ಥಾನಕ್ಕೆ ಉಪಯೋಗಿಸುತ್ತಿದ್ದರು. ಈ ಕಲ್ಯಾಣಿಯ ಪಕ್ಕ ಭಕ್ತಾದಿಗಳಿಗೆ ಮುಡಿ ತೆಗೆಸಲು ಮಂಟಪವಿದೆ.

  • Puranic background / ಪೌರಾಣಿಕ ಹಿನ್ನಲೆ

    It is believed that a sage named Kushmanda Rishi had done penance here. Hence, it was also referred as Kushmandagiri. Other popular names are Anandagiri, Nandagiri and Nandidurg so on. As times went by the name got shortened to Nandibetta in Kannada. Sri Yoganandeeshwara Swamy is believed to have been consecrated by Sages Kushmanda and Shravanaka. ಶ್ರೀ ಯೋಗನಂದೀಶ್ವರಸ್ವಾಮಿಯನ್ನು ಅವಳಿ ಋಷಿಗಳಾದ ಕೂಷ್ಮಾಂಡ ಹಾಗೂ ಶವಣಕರಿಂದ ಪ್ರತಿಷ್ಠಾಪಿಸಲ್ಪಟ್ಟಿತು ಎಂದು ಪ್ರತೀತಿಯಿದೆ. ಈ ದೇವಾಲಯವು ನಂದಿಬೆಟ್ಟದ ಮೇಲ್ಭಾಗದಲ್ಲಿದೆ. ಈ ದೇವಾಲಯವನ್ನು ಯಾವುದೇ ಅಡಿಪಾಯವಿಲ್ಲದೆ ಬಂಡೆಯ ಮೇಲೆ ಕಟ್ಟಿದ್ದಾರೆ. ಯೋಗನಂದೀಶ್ವರನ ದರ್ಶನಕ್ಕೆ ಬರುವ ಭಕ್ತಾದಿಗಳೆಲ್ಲರೂ ಪಾರ್ವತಿಯ ದರ್ಶನ ಪಡೆದರೆ ಮಾತ್ರ ಈಶ್ವರನ ಪೂಜಾಫಲವನ್ನೂ ಹಾಗೂ ಮುಕ್ತಿಯನ್ನೂ ಹೊಂದಬಹುದೆಂದು ನಂಬುಗೆಯಿದೆ. ಆದ್ದರಿಂದ ಇಲ್ಲಿನ ಪಾರ್ವತಿಗೆ ಮುಕ್ತಾಂಬಾ ಎಂದು ಕರೆಯುತ್ತಾರೆ.

You don't have permission to register