History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Puranic Background/ ಪೌರಾಣಿಕ ಹಿನ್ನೆಲೆ:

    ಶ್ರೀ ಮಾಂಡವ್ಯಋಷಿಗಳಿಂದ ಸ್ಥಾಪನೆಯಾಗಿರುವ ಶ್ರೀರಂಗನಾಥನ ಕ್ಷೇತ್ರವಾದ ಈ ದೇವಾಲಯವನ್ನು ಮಾಂಡವ್ಯ ಕ್ಷೇತ್ರವೆಂದೂ ಕರೆಯಲಾಗುತ್ತದೆ. ಈ ದೇವಾಲಯ ಸಮುಚ್ಚಯಕ್ಕೆ ಹಿಂದೆ ಪಶ್ಚಿಮ ವೆಂಕಟಾಚಲಪತಿ ದೇವಾಲಯವೆಂದು ಹೆಸರಿತ್ತೆಂದು ದಾಖಲೆಗಳಿಂದ ತಿಳಿದುಬರುತ್ತದೆ. ಇಲ್ಲಿರುವ ಮೂಲವಿಗ್ರಹವು ತಿರುಮಲ ತಿರುಪತಿ ದೇವಸ್ಥಾನದ ಮೂಲವಿಗ್ರಹವನ್ನು ಹೋಲುತ್ತದೆಂದು ಹೇಳುತ್ತಾರೆ. ಆದರೆ, ಇಲ್ಲಿರುವ ಶ್ರೀ ರಂಗನಾಥಸ್ವಾಮಿಯು ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. ಈ ರಂಗನಾಥಸ್ವಾಮಿಯು “ಬೆಳೆಯುವ ರಂಗನಾಥ” ಎಂದೇ ಹೆಚ್ಚು ಪ್ರಚಾರದಲ್ಲಿದೆ. Sri Mandavya Rishi is said to have installed the image of Sri Ranganatha Swamy in the present Magadi region. Hence this region is also called Mandavya Kshetra. The temple complex is said to have been called Paschima Venkatachalapathi Temple in the past. The image is said to resemble Sri Venkateshwara Swamy of Thirumala Thirupati Devasthanam. However, the temple is more popular due to the presence of Lord Ranganatha Swamy which is said to grow in size every year. This image has acquired the name BeLeyuva Ranganatha “ಬೆಳೆಯುವ ರಂಗನಾಥ” (One who is growing).

  • Main Deity/ಮೂಲ ವಿಗ್ರಹ:

    ಗರ್ಭಗೃಹದಲ್ಲಿರುವ ಶ್ರೀ ವೆಂಕಟಾಚಲಪತಿಯ ಮೂಲವಿಗ್ರಹವು ಚತುರ್ಬಾಹುಗಳಿಂದ ಕೂಡಿದ್ದು ನಿಂತ ಭಂಗಿಯಲ್ಲಿ ಸ್ಥಾಪನೆಯಾಗಿದೆ. ಒಂದು ಹಸ್ತದಲ್ಲಿ ವರದಮುದ್ರೆ, ಶಂಖ, ಚಕ್ರ, ಗದಾಪಾಣಿಯು ಸುಂದರವಾಗಿದ್ದು, ಭಗವಂತನು ವರದಮುದ್ರೆಯಿಂದ ಭಕ್ತನ ಎಲ್ಲ ಪ್ರಾರ್ಥನೆಯನ್ನೂ ನೆರವೇರಿಸುವನು ಎಂಬ ನಂಬಿಕೆ ಬಲವಾಗಿದೆ, ಇಲ್ಲಿ ಸ್ಥಾಪಿತವಾಗಿರುವ ಇತರ ದೈವಗಳೆಂದರೆ ರಾಮ, ಸೀತೆ, ಹನುಮಂತ ಮತ್ತು ಶ್ರೀ ವೇಣುಗೋಪಾಲಸ್ವಾಮಿ. ಪುಟ್ಟ ರಂಗನಾಥ ಅಥವಾ ಬೆಳೆಯುವ ರಂಗನಾಥನ ದೇಗುಲವು ಗರ್ಭಗೃಹದ ಹಿಂಭಾಗದಲ್ಲಿದೆ. ಕೆಂಪೆಗೌಡರಕಾಲದಲ್ಲಿ ಶ್ರೀ ಸೋಮೇಶ್ವರ ದೇವಾಲಯವನ್ನು ಕಟ್ಟಲಾಯಿತೆಂದು ತಿಳಿದುಬರುತ್ತದೆ. The presiding deity Lord Venkatachalapati with four hands is in the standing posture has been consecrated in the Sanctum Sanctorum. One hand is displaying Varada Mudra that the Lord uses to answer the prayers of devotees and fulfil their wishes. Shankha, Chakra and Gada adorn the other three hands. Small temples dedicated to Lord Rama, Sita and Hanuman along with Venugopala Swamy are also here. Shrine of Putta Ranganatha Swamy, also called Beleyuva Ranaganatha is behind the main shrine and the reason for the name of the temple complex. Kempe Gowda II is said to have added the temple of Sri Someshwara during his reign in 16th Century CE.

  • Historical Back Ground/ಐತಿಹಾಸಿಕ ಹಿನ್ನೆಲೆ:

    ಮಾಗಡಿ ಪ್ರದೇಶದ ಚರಿತ್ರೆಯು ಚೋಳರ ಕಾಲಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಮಾಗಡಿ ಪ್ರದೇಶವನ್ನು ಸ್ಥಾಪಿಸಿ ಅಭಿವೃದ್ಧಿಗೆ ತಂದವರು ಚೋಳರೆಂದು ಇತಿಹಾಸದ ಪುಟಗಳಿಂದ ತಿಳಿದುಬರುತ್ತದೆ. ವಿಜಯನಗರಸಾಮ್ರಾಜ್ಯದಡಿಯಲ್ಲಿ ಮಾಗಡಿ ಪ್ರದೇಶವು ಹೆಚ್ಚು ಬೆಳವಣಿಗೆ ಕಂಡಿತೆಂದು ಹೇಳಲಾಗುತ್ತದೆ. ಯಲಹಂಕನಾಡಪ್ರಭು ಶ್ರೀ ಕೆಂಪೇಗೌಡರು ಸಹ ಈ ದೇವಾಲಯ ಮತ್ತು ಮಾಗಡಿಯ ಅಭಿವೃದ್ಧಿಯ ರೂವಾರಿ ಎಂದು ಹೇಳಲಾಗುತ್ತದೆ. ಈ ದೇವಾಲಯದ ಗರುಡಗಂಭದಲ್ಲಿರುವ ವಿಜಯನಗರದ ಕಾಲದ ಶಾಸನವು ಶ್ರೀ ಕೃಷ್ಣದೇವರಾಯನ ಆಳ್ವಿಕೆಯಲ್ಲಿ ಕಲ್ಯಾಣಿ, ಗೋಪುರಗಳನ್ನು ಕಟ್ಟಿ ದೇವಾಲಯವನ್ನು ಅಭಿವೃದ್ಧಿಮಾಡಲಾಯಿತೆಂದು ಸಾರುತ್ತವೆ. ಮುಂದೆ ಮೈಸೂರಿನ ಒಡೆಯರು ಹಾಗು ಟಿಪ್ಪು ಸುಲ್ತಾನ್ ದೇವಾಲಯಕ್ಕೆ ದೇಣಿಗೆ ನೀಡಿ ಬೆಳೆಸಿದರೆಂದು ತಿಳಿದುಬರುತ್ತದೆ. The history of Magadi town takes us back to the time of Cholas. Magadi is said to have been founded by Cholas. The township is said to have undergone significant developments under the reign of Vijayanagar Empire. Impetus to development came through Kempe Gowda of Yalahankanadu. Inscriptions found on the base of the Garudastambha in front of the temple, mentions that, Gopurams were developed by Krishnadevaraya the emperor of Vijayanagara Empire in 1524 CE. The temple complex saw contributions from Wodeyar dynasty of Mysuru Samsthana and Tipu Sultan.

  • Temple Architecture/ದೇವಾಲಯ ವಿನ್ಯಾಸ:

    ದೇವಾಲಯದ ನಿರ್ಮಿತಿಯು ದ್ರಾವಿಡಶೈಲಿಯಲ್ಲಿದೆ. ದೇವಾಲಯವು ಸುಂದರವಾದ ಕೆತ್ತನೆಯುಳ್ಳ ಕಂಬಗಳಿಂದ ಅಲಂಕೃತವಾಗಿದೆ. ದೇವಸ್ಥಾನದ ಗೋಪುರಗಳು, ಕಲ್ಯಾಣಿ ಹಾಗು ಗರುಡಗಂಭಗಳು ವಿಜಯನಗರದರಸ ಕೊಡುಗೆಯೆಂದು ಹೇಳಲಾಗುತ್ತದೆ. ಟಿಪ್ಪು ಸುಲ್ತಾನ್ ಮತ್ತು ಶ್ರೀ ಜಯಚಾಮರಾಜೇಂದ್ರ ಒಡೆಯರ್ಗಳ ಕಾಲದಲ್ಲಿ ಮತ್ತಷ್ಟು ಅಭಿವೃದ್ಧಿಕಾರ್ಯಗಳನ್ನು ಕೈಗೊಳ್ಳಲಾಗಿದೆ.ಬೆಳೆಯುವ ರಂಗನಾಥನ ಭಂಗಿಯು ಸ್ವಲ್ಪ ಭಿನ್ನವಾಗಿ ಕೆತ್ತನೆಯಾಗಿದೆ. ರಂಗನಾಥಸ್ವಾಮಿಯು ಒಂದು ಕಾಲನ್ನು ಮಡಚಿಕೊಂಡು ಮಲಗಿರುವಂತೆ ಕೆತ್ತಲಾಗಿದೆ. ಕೆಂಪೆಗೌಡರಕಾಲದಲ್ಲಿ ಒಂದು ಸೈನಿಕಗೋಪುರವನ್ನು ಹೆಚ್ಚಿನ ರಕ್ಷಣೆಗಾಗಿ ಕಟ್ಟಲಾಯಿತೆಂದು ತಿಳಿದುಬರುತ್ತದೆ. ಈ ಗೋಪುರವನ್ನು ಈಗಲೂ ನೋಡಬಹುದಾಗಿದೆ. Temple architecture follows Dravidian Style. The temple is adorned with many ornate pillars with sculptural work. The towers, Kalyani and Garuda Stambha are said to be the developments carried out during the reign of Sri Krishnadeva Raya. Further renovations were carried out by Tipu Sultan and Sri Jayachamarajendra Wodeyar. The posture of Ranganatha Swamy is slightly different from that of images anywhere else. He is shown with one leg folded here. Kempe Gowda is said to have added a watch tower to guard the temple against the attacks. A separate sanctum exists for Goddess Lakshmi.

You don't have permission to register