Nearby Places - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temples  >  Paryaya Sri Pejawara Adhokshaja Matha  >  Near by Places</span
 • Palimaru Mutt / ಪಲಿಮಾರು ಮಠ

  The headquarters of this Mutt is in Palimaru, a little village 35 km from the temple town of Udupi. It is just 10 km. off the NH 17 highway. It is one of the eight Mutts established by Sri Madhwacharya. The presiding deity of this Mutt is Sri Rama and the maiden pontiff was Sri Hrishikesha Tirtha. The Mutt has a branch in Car Street, Udupi. ಈ ಮಠದ ಮೂಲ ಸಂಸ್ಥಾನವು, ಉಡುಪಿಯಿಂದ 35 ಕಿ ಮೀ ದೂರವಿರುವ, ಪಲಿಮಾರು ಎಂಬ ಚಿಕ್ಕ ಹಳ್ಳಿಯಲ್ಲಿದೆ. ಈ ಹಳ್ಳಿಯು, ರಾಷ್ಟ್ರೀಯ ಹೆದ್ದಾರಿ 17ರಿಂದ 10 ಕಿ ಮೀ ದೂರದಲ್ಲಿದೆ. ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಅಷ್ಟ ಮಠಗಳಲ್ಲಿ ಪಲಿಮಾರು ಮಠವೂ ಒಂದಾಗಿದೆ. ಈ ಮಠದ ಮೂಲ ಯತಿಗಳು ಶ್ರೀ ಹೃಷಿಕೇಶ ತೀರ್ಥರಾಗಿದ್ದು, ಮಠದ ಪಟ್ಟದ ದೇವರು ಶ್ರೀ ರಾಮ. ಉಡುಪಿಯ ರಥ ಬೀದಿಯಲ್ಲಿ ಈ ಮಠದ ಒಂದು ಶಾಖೆಯಿದೆ.

 • Adamaru Mutt / ಅದಮಾರು ಮಠ

  The headquarters of Sri Adamaru Matha is in Adamar, 21 Km from Udupi. The maiden pontiff of this Matha was Sri Narasimha Thirtha. Being one of the eight Mutts established by Sri Madhwacharya, the presiding deity of this Mutt is Sri Chaturbhuja Kaliya Mardhana Krishna. The Mutt has a branch in Car Street, Udupi. ಅದಮಾರು ಮಠದ ಮೂಲ ಸಂಸ್ಥಾನವು, ಉಡುಪಿಯಿಂದ 21 ಕಿ ಮೀ ದೂರದಲ್ಲಿರುವ ಅದಮಾರಿನಲ್ಲಿದೆ. ಈ ಮಠದ ಮೂಲ ಯತಿಗಳು ಶ್ರೀ ನರಸಿಂಹ ತೀರ್ಥರು. ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿತವಾದ ಅಷ್ಟಮಠಗಳಲ್ಲಿ ಒಂದಾಗಿರುವ ಅದಮಾರು ಮಠದ ಪಟ್ಟದ ದೇವರು ಶ್ರೀ ಚತುರ್ಭುಜ ಕಾಳೀಯಮರ್ದನ ಕೃಷ್ಣ. ಉಡುಪಿಯ ರಥ ಬೀದಿಯಲ್ಲಿ ಈ ಮಠದ ಒಂದು ಶಾಖೆಯಿದೆ.

 • Krishnapur Mutt / ಕೃಷ್ಣಾಪುರ ಮಠ

  The headquarters of Sri Krishnapura Matha is in Krishnapura near Surathkal, 45 km from Udupi. It is one of the eight Mathas established by Sri Madhwacharya. The maiden pontiff of this Matha was Sri Janardhana Thirtha. The presiding deity of this Mutt is Sri Dvibhuja Kaliya Mardhana Krishna. The Mutt has a branch in Car Street, Udupi. ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿತವಾದ ಅಷ್ಟಮಠಗಳಲ್ಲಿ ಒಂದಾಗಿರುವ ಈ ಮಠದ ಮೂಲ ಸಂಸ್ಥಾನವು, ಉಡುಪಿಯಿಂದ 45 ಕಿ ಮೀ ದೂರದಲ್ಲಿರುವ, ಕೃಷ್ಣಾಪುರದಲ್ಲಿದೆ. ಈ ಮಠದ ಮೂಲ ಯತಿಗಳು ಶ್ರೀ ಜನಾರ್ಧನತೀರ್ಥರು ಮತ್ತು ಇಲ್ಲಿನ ಪಟ್ಟದ ದೇವರು ಶ್ರೀ ದ್ವಿಭುಜ ಕಾಳೀಯ ಮರ್ದನ ಕೃಷ್ಣ. ಉಡುಪಿಯ ರಥ ಬೀದಿಯಲ್ಲಿ ಈ ಮಠದ ಒಂದು ಶಾಖೆಯಿದೆ.

 • Sri Raghavendra Swamy Mutt / ಶ್ರೀ ರಾಘವೇಂದ್ರ ಸ್ವಾಮಿ ಮಠ

  Sri Raghavendra Swamy Mutt is situated in Car Street of Udupi. This Mutt is under the aegis of Nanjanagud Sri Raghavendra Swamy Mula maha Samsthanam. The consecration of the Brindavan here took place on the auspicious sixth day of Krishna Paksha(Dark Fortnight), Pushya Masa of Krodhana Nama Samvatsara (January 5th of 1926). Consecration of the Brindavan was carried out by Sri Susheelendra Tirtha, in the presence of seers of Ashta Mutts. All the sevas and events that take place in Mantralayam are followed here. ಉಡುಪಿಯ ರಥಬೀದಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವಿದ್ದು, ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಲಾಗಿದೆ. ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿರುವ ಶ್ರೀರಾಘವೇಂದ್ರರ ಮೂಲಮೃತ್ತಿಕಾ ಬೃಂದಾವನವನ್ನು ಕ್ರೋಧನ ನಾಮ ಸಂವತ್ಸರದ ಹೇಮಂತಋತು, ಪುಷ್ಯಮಾಸ, ಕೃಷ್ಣಪಕ್ಷದ ಷಷ್ಠಿಯಂದು(1926 ಜನವರಿ 5), ಉಡುಪಿಯ ಅಷ್ಟಮಠಗಳ ಮಠಾಧಿಪತಿಗಳ ದಿವ್ಯಸಾನ್ನಿಧ್ಯದಲ್ಲಿ, ಶ್ರೀ ಸುಶೀಲೇಂದ್ರತೀರ್ಥರು ನೆರವೇರಿಸಿದರು. ನಂಜನಗೂಡು ಮೂಲಸಂಸ್ಥಾನದ ಎಲ್ಲಾ ಪೂಜಾ ಹಾಗೂ ಸೇವಾಕಾರ್ಯಗಳನ್ನು ಉಡುಪಿಯ ಶ್ರೀಮಠದಲ್ಲಿ, ಶಾಸ್ತ್ರೋಕ್ತರೀತಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.

 • Pajaka / ಪಾಜಕ

  Pajaka is a tiny village located at about 12 km from Udupi. It is the native place of Sri Madhwacharya, the proponent founder of Tatva Vada (Dvaita) school of thought. Pajaka has the ancient house of Sri Madhwacharya and an idol of him, consecrated by Sri Vadiraja, can be found here. A dedicated temple of Sri Ananta, the family deity of Sri Madhwacharya, is also existing on the premises of the house. Various evidences of Sri Acharya’s childhood pastimes can be found in and around the house, even today. In addition, there is a Durga temple near Pajaka. The temple is at the top of a small hill called Vimana Giri. The Durga idol here is said to have been consecrated by Sri Parashurama. ಪಾಜಕವು, ಉಡುಪಿಯಿಂದ 12 ಕಿ ಮೀ ದೂರದಲ್ಲಿರುವ ಪುಟ್ಟ ಹಳ್ಳಿಯಾಗಿದೆ. ಇದು, ತತ್ವವಾದ (ದ್ವೈತ) ಮತದ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಜನ್ಮಸ್ಥಳವಾಗಿದೆ. ಪಾಜಕದಲ್ಲಿ ಶ್ರೀ ಮಧ್ವಾಚಾರ್ಯರ ಪ್ರಾಚೀನ ಮನೆಯಿದ್ದು, ಶ್ರೀ ವಾದಿರಾಜರು ಇಲ್ಲಿ ಶ್ರೀ ಮಧ್ವಾಚಾರ್ಯರ ಒಂದು ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ. ಈ ಮನೆಯಲ್ಲಿ, ಶ್ರೀ ಮಧ್ವಾಚಾರ್ಯರ ಮನೆ ದೇವರಾಗಿದ್ದ ಶ್ರೀ ಅನಂತನ ಒಂದು ದೇವಾಲಯವೂ ಇದೆ. ಶ್ರೀ ಮಧ್ವಾಚಾರ್ಯರ ಬಾಲ ಲೀಲೆಗಳ ಕುರುಹುಗಳನ್ನು ಈಗಲೂ ಇಲ್ಲಿ ಕಾಣಬಹುದಾಗಿದೆ. ಇದರೊಂದಿಗೆ, ಇಲ್ಲೇ ಹತ್ತಿರದಲ್ಲಿರುವ, ವಿಮಾನ ಗಿರಿಯೆಂಬ ಸಣ್ಣ ಬೆಟ್ಟದ ಮೇಲೆ, ಶ್ರೀ ಪರಶುರಾಮರಿಂದ ಸ್ಥಾಪಿಸಲ್ಪಟ್ಟ ಶ್ರೀ ದುರ್ಗಾದೇವಿಯ ಸನ್ನಿಧಾನವೂ ಇದೆ.

You don't have permission to register

Enquiry

ENQUIRY