Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • ಕೋಟಿಲಿಂಗೇಶ್ವರ ದೇವಸ್ಥಾನ / Kotilingeshwara Temple

    ಕೊದಿಲಿಂಗಮ್ ದೇವಸ್ಥಾನ ರಸ್ತೆ, ಘಟ್ಟಕಾಮಡೇನಹಳ್ಳಿ, ಕರ್ನಾಟಕ ೫೬೩೧೨೧ ಕೋಟಿಲಿಂಗೇಶ್ವರ ದೇವಾಲಯವು ಬೆಂಗಳೂರು ಸಮೀಪದ ಕೋಲಾರ ಜಿಲ್ಲೆಯ ಕಮ್ಮಸಂದ್ರ ಹಳ್ಳಿಯಲಿದೆ. ಈ ದೇವಾಲಯವು ಕೋಲಾರ ಗೋಲ್ಡ್ ಫೀಲ್ಡ್ಸ್ ನಿಂದ ಸುಮಾರು ೬ ಕಿ ಮೀ ದೂರದಲ್ಲಿದೆ. ಇದನ್ನು ಕೆಜಿಫ್ ಎಂದು ಕರೆಯಲಾಗುತ್ತದೆ ಹಾಗೂ ಬಂಗಾಪೇಟೆಯಿಂದ ೧೩ ಕಿ. ಮೀ ದೂರದಲ್ಲಿದೆ. ಕೋಟಿಲಿಂಗೇಶ್ವರ ದೇವಾಲಯವು ಕಮ್ಮಸಂದ್ರ ಹಳ್ಳಿಯಲ್ಲಿ ನೆಲೆಗೊಂಡಿದೆ, ಇಲ್ಲಿನ ಆರಾಧ್ಯ ದೈವ ಪ್ರಸಿದ್ಧವಾದ ಕೋಟಿಲಿಂಗೇಶ್ವರ. ಈ ದೇವಾಲಯವು ೧೯೭೨ ರಲ್ಲಿ ಶ್ರೀ ಶ್ರೀ ಶ್ರೀ ಸ್ವಾಮಿ ಸಾಂಬಾ ಶಿವ ಮೂರ್ತಿ ನಿರ್ಮಿಸಿದರು. ಈ ದೇವಾಲಯದಲ್ಲಿ ಏಷ್ಯಾದಲ್ಲೇ ಅತೀ ಎತ್ತರದ ದೊಡ್ಡ ಲಿಂಗ ೧೦೮ ಅಡಿ (೩೩ ಮೀ) ಹೊಂದಿದೆ. ಇದರ ಮುಂದೆ, ೩೫ ಅಡಿ (೧೧ ಮೀ) ಎತ್ತರದ ಬೃಹತ್ ನಂದಿ ಇದೆ. ಕೋಟಿಲಿಂಗೇಶ್ವರ ದೇವಾಲಯದ ಸುತಮುತ್ತಲೂ ವಿವಿಧ ದೇವತೆಗಳ ೧೧ ಸಣ್ಣ ಗುಡಿಗಳಿವೆ. ಮೊದಲಿಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ, ವೆಂಕಟರಮಣ ಸ್ವಾಮಿ, ಅನ್ನಪೂರ್ಣೇಶ್ವರಿ, ಪಾಂಡುರಂಗ ಸ್ವಾಮಿ, ಪಂಚಮುಖಿ ಗಣಪತಿ, ಶ್ರೀರಾಮ, ಲಕ್ಷ್ಮಣ ಮತ್ತು ಸೀತೆ, ಆಂಜನೇಯ ದೇವಸ್ಥಾನ, ಕನ್ನಿಕಾ ಪರಮೇಶ್ವರಿ ದೇವಾಲಯಗಳಿವೆ. ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಒಂದು ಶಿವಲಿಂಗವಿದೆ ಇದನ್ನು ‘ಶಿವ ಪಂಚಾಯತಿ’ ಎಂದು ಕರೆಯಲಾಗುತ್ತದೆ. ಪ್ರತಿ ಮಧ್ಯಾಹ್ನ ಅನ್ನದಾನ (ಉಚಿತ ಆಹಾರ) ಎಲ್ಲಾ ಭಕ್ತರಿಗೂ ಒದಗಿಸಲಾಗಿದೆ. Kodilingam Temple Road, Ghattakamadenahalli, Karnataka 563121 The Lord Kotilingeshwara Temple is situated in Kammasandra Village in Kolar district, Karnataka State, India. The temple is about 6 km from Kolar Gold Fields also known as KGF. Kotilingeshwara temple is situated in Kammasandra village, is famous for the idol Lord Kotilingeshwara. This temple was constructed by Shri Shri Shri Swamy Sambha Shiva Murthy in 1972. The temple is having the largest Linga in Asia which is about 108 feet (33 m) tall. In front of this, there is a huge Nandi which is 35 feet (11 m) tall. There are 11 small temples of various deities constructed within the surroundings of the Lord Kotilingeshwara temple. The first temple to be constructed is the Lord Brahma, Lord Vishnu and Lord Maheshwara, and then main deity temple Lord Kotilingeshwara. The Other temples are Lord Venkataramani Swamy temple, Annapoorneshwari temple, Lord Panduranga Swamy Temple, Panchamukha Ganapathy temple, Lord Rama, Lakshmana and Sita temple, Lord Anjaneya temple, Kannika Parameshwari temple, a ShivaLinga called Shiva Panchayathi is installed. Every afternoon, Annadhanam (free food) is provided to all the devotees.

  • ಬಂಗಾರು ತಿರುಪತಿ / Bangaru Tirupati

    ಗುಟ್ಟಹಳ್ಳಿ ಕರ್ನಾಟಕ ೫೬೩೧೧೬ ಬಂಗಾರು ತಿರುಪತಿ ಕೋಲಾರ ಜಿಲ್ಲೆಯ ಗುಟ್ಟಹಳ್ಳಿಯಲ್ಲಿದೆ. ಇದು ಸುಮಾರು ೨೯ ಕಿ.ಮೀ ದೂರದಲ್ಲಿದೆ. ಈ ದೇವಾಲಯವು ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಾಲಯ, ತಿರುಪತಿ ಶೈಲಿಯಲ್ಲಿದೆ. ದೇವಾಲಯವನ್ನು ಭೃಗು ಮಹರ್ಷಿ ಅವಧಿಯಲ್ಲಿ ಕಟ್ಟಲಾಗಿದೆ. ವಿಷ್ಣು ಮತ್ತು ಪದ್ಮಾವತಿ ದೇವಿ ದೇವಸ್ಥಾನ ಸಣ್ಣ ಬೆಟ್ಟಗಳ ಮೇಲೆ ಇದೆ. ದೇವಸ್ಥಾನದ ಕಿಟಕಿಯಿಂದ ವಿಷ್ಣು ಮೂರ್ತಿಯನ್ನು ವೀಕ್ಷಿಸಬಹುದು. ಬಂಗಾರು ತಿರುಪತಿ, ಕೋಟಿಲಿಂಗೇಶ್ವರ ದೇವಸ್ಥಾನದಿಂದ ಸುಮಾರು ೯ ಕಿ.ಮೀ. ದೂರದಲ್ಲಿದೆ. Guttahalli, Karnataka 563116 Bangaru Tirupati resembles the famous Sri Venkateshwara Temple of Tirupathi in Andhra Pradesh. The Vishnu temple and the Padmavati temple is situated on small hills, you have to climb some steps for the darshan. You need to view th Vishnu idol through the window not via the door. The view from the top of the temples is awesome as you can view the greenery surrounding the temples.

  • ಅಂತರಗಂಗೆ ದೇವಸ್ಥಾನ / Antar Gange Temple,

    ಅಂತರಗಂಗೆ ದೇವಾಲಯ, ವಿಭೂತಿಪುರ, ಕೋಲಾರ, ಕರ್ನಾಟಕ 563101 ಅಂತರಗಂಗೆ ಎಂಬ ಪದದ ಅರ್ಥ ಭೂಮಿಯೊಳಗಿಂದ ಉದಯಿಸಿದ ಗಂಗೆ ಎಂದು. ಇದನ್ನು ದಕ್ಷಿಣ ಕಾಶಿ ಎಂದೂ ಕರೆಯುತ್ತಾರೆ. ಏಕೆಂದರೆ ಇಲ್ಲಿ ಕಾಶಿ ವಿಶ್ವೇಶ್ವರ ಸ್ವಾಮಿಯ ದೇವಾಲಯವಿದೆ. ದೇವಾಲಯದ ಸುತ್ತಲೂ ನೈಸರ್ಗಿಕ ಗುಹೆಗಳು ಹಾಗೂ ವಿವಿಧ ಶಿಖರಗಳನ್ನು ಕಾಣಬಹುದು. ಅಂತರಗಂಗೆಯಲ್ಲಿ ಪರಶುರಾಮ ಹಾಗೂ ಜಮದಗ್ನಿಯ ಕಥೆಗಳು ಹೆಣೆದುಕೊಂಡಿವೆ. ಕಾರ್ತವೀರ್ಯಾರ್ಜುನನು ಪರಶುರಾಮನಿಂದ ಕೊಲಲ್ಪಟ್ಟಿದ್ದು, ಜಮದಗ್ನಿಯನ್ನು ಕಾರ್ತವೀರ್ಯಾರ್ಜುನನ ಮಕ್ಕಳು ಕೊಂಡಿದ್ದು ಹಾಗೂ ರೇಣುಕೆ ಶಿಲೆಯಾಗಿ ನಿಂತಿರುವ ಹಿನ್ನೆಲೆ ಈ ಶಿಲೆಗಳಿಗಿದೆ.ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ಒಂದು ಕೆರೆಯಿಂದ ಇನ್ನೊಂದು ಕೆರೆಗೆ ಬಸವನ ಮುಖವನ್ನು ಹೋಲುವ ಶಿಖರದ ಮೂಲಕ ಹರಿವ ಝರಿಯಿಂದ ನೀರು ಬರುತ್ತದೆ. ಈ ಝರಿಯ ಮೂಲಸ್ಥಳ ಯಾವುದೆಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಆದ್ದರಿಂದ ಅಂತರಗಂಗೆ ಎನ್ನುತ್ತಾರೆ. Antargange TempleVibhuthipura, Kolar, Karnataka 563101 The Antharagange hill is associated with Lord Parasurama and Jamadagni. The killing of Kartaviryaarjuna by Parasurama followed by Jamadagni’s murder by sons of Kartaviryaarjuna and the self-immolation of Renuka was on this hill. The Kasi Vishweshwara Temple has a pond which receives water from the perennial spring Antaragange which comes from the mouth of a Basava.The source of water or where it originates is still unknown.

You don't have permission to register