Nearby Places - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
Home  >  Temples  >  Sri Krishna Mutt - Udupi  >  Near by Places</span
 • Ananteshwara Temple / ಅನಂತೇಶ್ವರ ದೇವಸ್ಥಾನ

  Sri Anantheswara temple in Udupi is said to be over 1500 years old. Sri Madwacharya and Sri Vadiraja have glorified this place by stating that both Lord Hari, in the form of Ananta, and Lord Hara in the form of linga are present in this temple. Legend has it that Acharya Madhwa’s father served here as priest. Sri Madhwacharya used to give discourses to his disciples in this temple and the seat which adored him is still preserved. The temple is located near Sri Krishna Mutt. ಶ್ರೀ ಅನಂತೇಶ್ವರ ದೇವಾಲಯವು 1500 ವರ್ಷಗಳಷ್ಟು ಹಳೆಯದೆಂದು ಹೇಳಲಾಗುತ್ತದೆ. ಶ್ರೀ ಮಧ್ವಾಚಾರ್ಯರು ಮತ್ತು ಶ್ರೀ ವಾದಿರಾಜರಿಬ್ಬರೂ, ಈ ಸ್ಥಳದಲ್ಲಿ ಹರಿಯು ಅನಂತನ ರೂಪದಲ್ಲಿ ಮತ್ತು ಹರನು ಲಿಂಗದಲ್ಲಿ ಇದ್ದಾರೆಂದು ಕೊಂಡಾಡಿದ್ದಾರೆ. ಆಚಾರ್ಯ ಮಧ್ವರ ತಂದೆಯು ಈ ದೇವಸ್ಥಾನದಲ್ಲಿ ಅರ್ಚಕರಾಗಿದ್ದರೆಂಬ ಐತಿಹ್ಯವಿದೆ. ಶ್ರೀ ಮಧ್ವಾಚಾರ್ಯರು, ಈ ದೇವಸ್ಥಾನದಲ್ಲೇ, ತಮ್ಮ ಶಿಷ್ಯರಿಗೆ ಪಾಠ ಹೇಳುತ್ತಿದ್ದರು ಎಂದು ತಿಳಿದುಬರುತ್ತದೆ. ಶ್ರೀ ಆಚಾರ್ಯರ ಆಸನವನ್ನು ಇಂದಿಗೂ ಇಲ್ಲಿ ಕಾಣಬಹುದಾಗಿದೆ. ದೇವಸ್ಥಾನವು ಶ್ರೀ ಕೃಷ್ಣ ಮಠದ ಸಮೀಪದಲ್ಲೇ ಇದೆ.

 • Neelavara / ನೀಲಾವರ

  Govardhanagiri Trust is in Neelavaram, a village, at about 18 km from Udupi. It is a unit of Sri Pejavara Adhokshaja Mutt, headed by Sri Visvesha Tirtha Swamiji and Sri Vishwaprasanna Tirtha Swamiji. It manages a huge goshala (cow-shelter) in which over 1000 cows are protected and nurtured. Neelavaram is also famous for Mahishamardini Temple and Gadduge Sri Durgaparameshwari temple. ನೀಲಾವರದಲ್ಲಿ ಗೋವರ್ಧನಗಿರಿ ಟ್ರಸ್ಟ್ ಇದೆ. ಇದು ಉಡುಪಿಯಿಂದ 18 ಕಿ.ಮೀ. ದೂರದಲ್ಲಿದ್ದು, ಪೇಜಾವರ ಮಠದ ಅಂಗ ಸಂಸ್ಥೆಯಾಗಿದೆ. ಇಲ್ಲಿ, ಒಂದು ದೊಡ್ಡ ಗೋಶಾಲೆಯಿದ್ದು, ಇಲ್ಲಿ ಸುಮಾರು 1,000 ಗೋವುಗಳನ್ನು ರಕ್ಷಿಸಿ, ಪೋಷಿಸಲಾಗುತ್ತಿದೆ. ನೀಲಾವರದಲ್ಲಿ ಶ್ರೀ ಮಹಿಷಮರ್ಧಿನಿ ಹಾಗೂ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಗಳಿವೆ.

 • Sri Chandramouleshwara Temple / ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ

  Sri Chandramouleshwara temple is adjacent to Sri Anantheshwara temple. This ancient temple is dedicated to lord Shiva and is visited by every pontiff of the Ashta Mutts, before ascending the Paryaya Peetha. ಶ್ರೀ ಅನಂತೇಶ್ವರ ದೇವಸ್ಥಾನದ ಪಕ್ಕದಲ್ಲೇ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನವಿದೆ. ಈ ಪ್ರಾಚೀನ ಶಿವ ದೇವಾಲಯವನ್ನು ಎಲ್ಲ ಪರ್ಯಾಯವೇರುವ ಪೀಠಾಧಿಪತಿಗಳು, ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಸಂದರ್ಶಿಸಿ, ದರ್ಶನ ಪಡೆಯುತ್ತಾರೆ.

 • Malpe and St. Mary’s island / ಮಲ್ಪೆ ಮತ್ತು ಸಂತ ಮೇರಿ ನಡುಗಡ್ಡೆ

  It is believed that Vasco da Gama had come to St. Mary's Islands during his global voyage and named one of the four islands as O Padrão de Santa Maria, in memory of Mother Mary. Malpe is at about 6 km from Udupi. These islands can be reached through boats. ಒಂದು ದಂತಕಥೆಯ ಪ್ರಕಾರ, ವಾಸ್ಕೋ ಡಿ ಗಾಮಾ ಸಮುದ್ರಯಾನ ಮಾಡುವಾಗ ಸೇಂಟ್ ಮೇರಿ ದ್ವೀಪದಲ್ಲಿ ಇಳಿದು, ಈ ದ್ವೀಪಸಮೂಹದ ಒಂದು ದ್ವೀಪಕ್ಕೆ ಓ ಪದ್ರಾವೋ ಡಿ ಸಂತ ಮರಿಯಾ, ಎಂದು ನಾಮವಿತ್ತನು. ಈ ದ್ವೀಪಸಮೂಹದಲ್ಲಿ ನಾಲ್ಕು ನಡುಗಡ್ಡೆಗಳಿವೆ. ಮಲ್ಪೆಯ ಸಮುದ್ರ ತಡಿಯಿಂದ ಅರಬ್ಬೀ ಸಮುದ್ರದಲ್ಲಿ ದ್ವೀಪಗಳಿಗೆ ಸಾಗಿಹೋಗಲು ದೋಣಿಗಳ ವ್ಯವಸ್ಥೆಯಿದೆ. ಮಲ್ಪೆಯು ಉಡುಪಿಯಿಂದ ಸುಮಾರು 6 ಕಿ.ಮೀ. ದೂರದಲ್ಲಿದೆ.

 • Palimaru Mutt / ಪಲಿಮಾರು ಮಠ

  The headquarters of this Mutt is in Palimaru, a little village 35 km from the temple town of Udupi. It is just 10 km. off the NH 17 highway. It is one of the eight Mutts established by Sri Madhwacharya. The presiding deity of this Mutt is Sri Rama and the maiden pontiff was Sri Hrishikesha Tirtha. The Mutt has a branch in Car street, Udupi. ಈ ಮಠದ ಮೂಲ ಸಂಸ್ಥಾನವು, ಉಡುಪಿಯಿಂದ 35 ಕಿ ಮೀ ದೂರವಿರುವ, ಪಲಿಮಾರು ಎಂಬ ಚಿಕ್ಕ ಹಳ್ಳಿಯಲ್ಲಿದೆ. ಈ ಹಳ್ಳಿಯು, ರಾಷ್ಟ್ರೀಯ ಹೆದ್ದಾರಿ 17ರಿಂದ 10 ಕಿ ಮೀ ದೂರದಲ್ಲಿದೆ. ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಅಷ್ಟ ಮಠಗಳಲ್ಲಿ ಪಲಿಮಾರು ಮಠವೂ ಒಂದಾಗಿದೆ. ಈ ಮಠದ ಮೂಲ ಯತಿಗಳು ಶ್ರೀ ಹೃಷಿಕೇಶ ತೀರ್ಥರಾಗಿದ್ದು, ಶ್ರೀ ಮಠದ ಪಟ್ಟದ ದೇವರು ಶ್ರೀ ರಾಮ. ಉಡುಪಿಯ ರಥ ಬೀದಿಯಲ್ಲಿ ಈ ಮಠದ ಒಂದು ಶಾಖೆಯಿದೆ.

 • Adamaru Mutt / ಅದಮಾರು ಮಠ

  The headquarters of Sri Adamaru Mutt is at Adamar, about 21 km from Udupi. The maiden pontiff of this Mutt was Sri Narasihma Tirtharu. Being one of the eight Mutts established by Sri Madhwacharya, the presiding deity of this Mutt is Sri Chaturbhuja Kaliya Mardhana Krishna. The Mutt has a branch in Car street, Udupi. ಅದಮಾರು ಮಠದ ಮೂಲ ಸಂಸ್ಥಾನವು, ಉಡುಪಿಯಿಂದ 21 ಕಿ ಮೀ ದೂರದಲ್ಲಿರುವ ಅದಮಾರಿನಲ್ಲಿದೆ. ಈ ಮಠದ ಮೂಲ ಯತಿಗಳು ಶ್ರೀ ನರಸಿಂಹ ತೀರ್ಥರು. ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿತವಾದ ಅಷ್ಟ ಮಠಗಳಲ್ಲಿ ಒಂದಾಗಿರುವ ಅದಮಾರು ಮಠದ ಪಟ್ಟದ ದೇವರು ಶ್ರೀ ಚತುರ್ಭುಜ ಕಾಳಿಯ ಮರ್ದನ ಕೃಷ್ಣ. ಉಡುಪಿಯ ರಥ ಬೀದಿಯಲ್ಲಿ ಈ ಮಠದ ಒಂದು ಶಾಖೆಯಿದೆ.

 • Krishnapur Mutt / ಕೃಷ್ಣಾಪುರ ಮಠ

  The headquarters of Sri Krishnapura Murtt is in Krishnapura, near Suratkal, 45 km from Udupi. It is one of the eight Mutts established by Sri Madhwacharya. The maiden pontiff of this Mutt was Sri Janardhana Tirtharu. The presiding deity of this Mutt is Sri Dwibhuja Kaliya Mardhana Krishna. The Mutt has a branch in Car street, Udupi. ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿತವಾದ ಅಷ್ಟ ಮಠಗಳಲ್ಲಿ ಒಂದಾಗಿರುವ ಈ ಮಠದ ಮೂಲ ಸಂಸ್ಥಾನವು, ಉಡುಪಿಯಿಂದ 45 ಕಿ ಮೀ ದೂರದಲ್ಲಿರುವ ಕೃಷ್ಣಾಪುರದಲ್ಲಿದೆ. ಈ ಮಠದ ಮೂಲ ಯತಿಗಳು ಶ್ರೀ ಜನಾರ್ಧನ ತೀರ್ಥರು ಮತ್ತು ಇಲ್ಲಿನ ಪಟ್ಟದ ದೇವರು ಶ್ರೀ ದ್ವಿಭುಜ ಕಾಳಿಯ ಮರ್ದನ ಕೃಷ್ಣ. ಉಡುಪಿಯ ರಥ ಬೀದಿಯಲ್ಲಿ ಈ ಮಠದ ಒಂದು ಶಾಖೆಯಿದೆ.

 • Puttige Mutt / ಪುತ್ತಿಗೆ ಮಠ

  The headquarters of Sri Puttige Mutt is in Puttige, 18 km from Udupi. The maiden pontiff of this Mutt was Sri Upendra Tirtharu. Being one of the eight Mutts established by Sri Madhwacharya, the presiding deity of this Mutt is Sri Vittala. The Mutt has a branch in Car street, Udupi. ಪುತ್ತಿಗೆ ಮಠದ ಮೂಲ ಸಂಸ್ಥಾನವು, ಉಡುಪಿಯಿಂದ 18 ಕಿ ಮೀ ದೂರದಲ್ಲಿರುವ ಪುತ್ತಿಗೆಯಲ್ಲಿದೆ. ಈ ಮಠದ ಮೂಲ ಯತಿಗಳು ಶ್ರೀ ಉಪೇಂದ್ರ ತೀರ್ಥರು. ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಅಷ್ಟ ಮಠಗಳಲ್ಲೊಂದಾದ ಶ್ರೀ ಪುತ್ತಿಗೆ ಮಠದ ಪಟ್ಟದ ದೇವರು ಶ್ರೀ ವಿಠ್ಠಲ. ಉಡುಪಿಯ ರಥ ಬೀದಿಯಲ್ಲಿ ಈ ಮಠದ ಒಂದು ಶಾಖೆಯಿದೆ.

 • Pejavara Mutt / ಪೇಜಾವರ ಮಠ

  The headquarters of this Mutt is in Pejavara, 52 km from Udupi. Being one of the eight Mutts established by Sri Madhwacharya, the maiden pontiff of this Mutt was Sri Adhokshaja Tirtharu. The presiding deity of the Mutt is Sri Vittala. The Mutt has a branch in Car street, Udupi. ಪೇಜಾವರ ಮಠದ ಮೂಲ ಸಂಸ್ಥಾನವು, ಉಡುಪಿಯಿಂದ 52 ಕಿ ಮೀ ದೂರದಲ್ಲಿರುವ ಪೇಜಾವರದಲ್ಲಿದೆ. ಈ ಮಠದ ಮೂಲ ಯತಿಗಳು ಶ್ರೀ ಅಧೋಕ್ಷಜ ತೀರ್ಥರು. ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿತವಾದ ಅಷ್ಟ ಮಠಗಳಲ್ಲೊಂದಾಗಿರುವ ಈ ಮಠದ ಪಟ್ಟದ ದೇವರು ಶ್ರೀ ವಿಠ್ಠಲ. ಉಡುಪಿಯ ರಥ ಬೀದಿಯಲ್ಲಿ ಈ ಮಠದ ಒಂದು ಶಾಖೆಯಿದೆ.

 • Udupi Raghavendra Swamy Mutt / ಉಡುಪಿ ಶ್ರೀ ರಾಘವೇಂದ್ರ ಸ್ವಾಮಿ ಮಠ

  Sri Raghavendra Swamy Mutt is in Car Street, Udupi. This Mutt is under the aegis of Nanjanagud Sri Raghavendra Swamy Mula Maha Samsthanam. The consecration of the Brindavan with the Moola Mrittika of Sri Raghavendra Swamy was don on the auspicious sixth day of Krishna Paksha, Pushya Masa of Krodhana nama Samvatsaram (January 5, 1926). Consecration of the Brindavan was carried out by Sri Susheelendra Tirtharu, in the gracious presence of the seers of Ashta Mutts. All the sevas and events that take place at Mantralayam are followed here. ಉಡುಪಿಯ ರಥ ಬೀದಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವಿದ್ದು, ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಲಾಗಿದೆ. ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿರುವ ಶ್ರೀರಾಘವೇಂದ್ರರ ಮೂಲಮೃತ್ತಿಕಾ ಬೃಂದಾವನವನ್ನು ಕ್ರೋಧನ ನಾಮ ಸಂವತ್ಸರದ ಹೇಮಂತಋತು, ಪುಷ್ಯಮಾಸ, ಕೃಷ್ಣಪಕ್ಷದ ಷಷ್ಠಿಯಂದು (1926 ಜನವರಿ 5), ಉಡುಪಿಯ ಅಷ್ಟಮಠಗಳ ಮಠಾಧಿಪತಿಗಳ ದಿವ್ಯಸಾನ್ನಿಧ್ಯದಲ್ಲಿ, ಶ್ರೀ ಸುಶೀಲೇಂದ್ರತೀರ್ಥರು ನೆರವೇರಿಸಿದರು. ನಂಜನಗೂಡು ಮೂಲಸಂಸ್ಥಾನದ ಎಲ್ಲಾ ಪೂಜಾ ಹಾಗೂ ಸೇವಾಕಾರ್ಯಗಳನ್ನು ಉಡುಪಿಯ ಶ್ರೀಮಠದಲ್ಲಿ, ಶಾಸ್ತ್ರೋಕ್ತರೀತಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.

 • Karkala / ಕಾರ್ಕಳ

  Karkala is located at the foothill of Western Ghats. It is famous for Sri Ananta Padmanabha Swamy temple, Sri Lakshmi Venkateshwara Swamy temple and the 41.5-ft. high monolithic granite statue of Bahubali (Gommateshwara). It is at around 38 km from Udupi. ಕಾರ್ಕಳವು ಪಶ್ಚಿಮ ಘಟ್ಟದ ಬುಡದಲ್ಲಿದ್ದು, ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ, ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಹಾಗೂ 41.5 ಅಡಿ ಎತ್ತರದ, ಅಗ್ನಿ ಶಿಲೆಯ, ಬಾಹುಬಲಿಯ (ಗೊಮ್ಮಟೇಶ್ವರನ) ಏಕಶಿಲಾ ಮೂರ್ತಿಗೆ ಪ್ರಸಿದ್ಧವಾಗಿದೆ. ಕಾರ್ಕಳವು ಉಡುಪಿಯಿಂದ 38 ಕಿ.ಮೀ. ದೂರದಲ್ಲಿದೆ.

 • Ambalapadi / ಅಂಬಲಪಾಡಿ

  Ambalapadi is about three km from Udupi Sri Krishna Mutt. This place is famous for the ancient Sri Janardhana temple and Sri Mahakali temple. Apart from the Janardana Pushkarani, there is a Hanuman temple, where idols of the three incarnations of Sri Vayu namely Hanuma, Bheema and Madhwa have been consecrated. A Brindavan of Sri Raghavendra Swamy has also been consecrated on the same premises of Sri Janardhana temple. It is said that although Lord Krishna is facing the west and Lord Janardhana the east, the two deities are facing each other in a straight line. ಉಡುಪಿ ಶ್ರೀ ಕೃಷ್ಣ ದೇವಸ್ಥಾನದಿಂದ 3 ಕಿ.ಮೀ. ದೂರದಲ್ಲಿರುವ ಅಂಬಲಪಾಡಿಯು, ಪ್ರಾಚೀನ ಜನಾರ್ಧನ ದೇವಸ್ಥಾನದಿಂದಾಗಿ ಪ್ರಸಿದ್ದಿ ಪಡೆದಿದೆ. ಇಲ್ಲಿ, ಮಹಾಕಾಳಿ ದೇವಸ್ಥಾನ, ಜನಾರ್ದನ ಪುಷ್ಕರಣಿ ಹಾಗು ಮುಖ್ಯಪ್ರಾಣ ದೇವರ ಮೂರೂ ಅವತಾರಗಳಿರುವ ಪ್ರತಿಮೆಯ ದೇವಸ್ಥಾನಗಳನ್ನು ಕಾಣಬಹುದು. ಈ ದೇವಸ್ಥಾನದ ಆವರಣದಲ್ಲೇ, ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನವನ್ನೂ ಪ್ರತಿಷ್ಠಾಪಿಸಲಾಗಿದೆ. ಶ್ರೀ ಕೃಷ್ಣನು ಪಶ್ಚಿಮಾಭಿಮುಖವಾಗಿದ್ದರೆ, ಶ್ರೀ ಜನಾರ್ದನನು ಪೂರ್ವಾಭಿಮುಖವಾಗಿದ್ದಾನೆ. ಈ ಎರಡೂ ದೇವಸ್ಥಾನಗಳು ಸರಳ ರೇಖೆಯಲ್ಲಿದ್ದು, ಎರಡು ದೇವತಾ ಪ್ರತಿಮೆಗಳೂ ಪರಸ್ಪರ ಅಭಿಮುಖವಾಗಿದೆ.

 • Kumbhashi / ಕುಂಭಾಶಿ

  Kumbhashi, popularly known as Anegudde, is a holy place located at about 31 km from Udupi. It is famous for a Ganapati temple. The 12-ft. high Ganapati idol is believed to be growing every year. Kumbhashi is also famous for Hari Hara temple. ಉಡುಪಿಯಿಂದ 31 ಕಿ ಮೀ ದೂರದಲ್ಲಿರುವ ಕುಂಭಾಶಿಯು, ಆನೆಗುಡ್ಡೆ ಎಂದು ಪ್ರಸಿದ್ದಿಯಾಗಿದೆ. ಇಲ್ಲಿ 12 ಅಡಿ ಎತ್ತರವಿರುವ ಬೃಹತ್ ಸ್ವಯಂಭೂ ಗಣಪತಿಯ ದೇವಸ್ಥಾನವಿದೆ. ಈ ಗಣಪತಿಯು ಪ್ರತಿ ವರ್ಷವೂ ಬೆಳೆಯುತ್ತಿದೆಯೆಂಬ ನಂಬಿಕೆಯಿದೆ. ಕುಂಭಾಶಿಯು ಹರಿ ಹರ ದೇವಾಲಯದಿಂದಾಗಿಯೂ ಪ್ರಸಿದ್ದಿ ಪಡೆದಿದೆ.

 • Shirooru Mutt / ಶಿರೂರು ಮಠ

  The headquarters of this Mutt is at Shirooru, 78 km from Udupi. It is one of the eight Mutts founded by Sri Madhwacharya. The maiden Pontiff of this Mutt was Sri Vamana Tirtharu. The presiding deity of the Mutt is Sri Vittala. The Mutt has a branch in Car street, Udupi. ಶಿರೂರು ಮಠದ ಮೂಲ ಸಂಸ್ಥಾನವು ಉಡುಪಿಯಿಂದ 78 ಕಿ ಮೀ ದೂರದಲ್ಲಿರುವ ಶಿರೂರಿನಲ್ಲಿದೆ. ಈ ಮಠವು ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಅಷ್ಟಮಠಗಳಲ್ಲೊಂದಾಗಿದೆ. ಈ ಮಠದ ಮೂಲ ಯತಿಗಳು ಶ್ರೀ ವಾಮನ ತೀರ್ಥರಾಗಿದ್ದು, ಇಲ್ಲಿಯ ಪಟ್ಟದ ದೇವರು ಶ್ರೀ ವಿಠ್ಠಲ. ಉಡುಪಿಯ ರಥ ಬೀದಿಯಲ್ಲಿ ಈ ಮಠದ ಒಂದು ಶಾಖೆಯಿದೆ.

 • Pajaka / ಪಾಜಕ

  Pajaka is a tiny village located at about 12 km from Udupi. It is the native place of Sri Madhwacharya, the proponent of Tatva Vada (Dvaita) school of thought. Pajaka has the ancient house of Sri Madhwacharya and an idol of him, consecrated by Sri Vadiraja can be found here. A dedicated temple of Sri Ananta, the family deity of Sri Madhwacharya, is existing on the premises of the house. Various evidences of Sri Acharya’s childhood pastimes can be found in and around the house, even today. In addition, there is a Durga temple near Pajaka. The temple is at the top of a hillock called Vimana Giri. The idol of Goddess Durga here is said to have been consecrated by Sri Parashurama, one of the incarnations of Lord Vishnu. ಪಾಜಕವು ಉಡುಪಿಯಿಂದ 12 ಕಿ.ಮೀ. ದೂರದಲ್ಲಿರುವ ಪುಟ್ಟ ಹಳ್ಳಿಯಾಗಿದೆ. ಇದು, ತತ್ವವಾದ (ದ್ವೈತ) ಮತದ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಜನ್ಮ ಸ್ಥಳವಾಗಿದೆ. ಪಾಜಕದಲ್ಲಿ ಶ್ರೀ ಮಧ್ವಾಚಾರ್ಯರ ಪ್ರಾಚೀನ ಮನೆಯಿದ್ದು, ಶ್ರೀ ವಾದಿರಾಜರು ಇಲ್ಲಿ ಶ್ರೀ ಮಧ್ವಾಚಾರ್ಯರ ಒಂದು ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ. ಈ ಮನೆಯಲ್ಲಿ, ಶ್ರೀ ಮಧ್ವಾಚಾರ್ಯರ ಮನೆ ದೇವರಾಗಿದ್ದ ಶ್ರೀ ಅನಂತನಿಗೆ ಮೀಸಲಾಗಿರುವ ಒಂದು ದೇವಾಲಯವೂ ಇದೆ. ಶ್ರೀ ಮಧ್ವಾಚಾರ್ಯರ ಬಾಲ ಲೀಲೆಗಳ ಕುರುಹುಗಳನ್ನು ಈಗಲೂ ಇಲ್ಲಿ ಕಾಣಬಹುದಾಗಿದೆ. ಇದರೊಂದಿಗೆ, ಇಲ್ಲೇ ಹತ್ತಿರದಲ್ಲಿರುವ, ವಿಮಾನ ಗಿರಿಯೆಂಬ ಸಣ್ಣ ಬೆಟ್ಟದ ಮೇಲೆ, ಶ್ರೀ ಪರಶುರಾಮರಿಂದ ಸ್ಥಾಪಿಸಲ್ಪಟ್ಟ ಶ್ರೀ ದುರ್ಗಾ ದೇವಿಯ ಸನ್ನಿಧಾನವೂ ಇದೆ.

You don't have permission to register

Enquiry

[contact-form-7 404 "Not Found"]