Temple Notices - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
Home  >  Temples  >  Sri Ramachandrapura Matha - Shivamogga  >  Notices and Updates</span
  • ಹಾಲುಹಬ್ಬ – 06-08-2017

    ಗೋವಿನ ಪಾದದ ಧೂಳಿನ ಮುಂದೆ ಅಧಿಕಾರ ಯಾವ ಲೆಕ್ಕವಲ್ಲ. ಲಾಭ ಬರುವ ಒಂದೇ ಒಂದು ಕೆಲಸವನ್ನು ಮಠ ಎಲ್ಲೂ ಮಾಡುತ್ತಿಲ್ಲ. ದೇಶೀ ಗೋಮಾತೆ ಕೃಪೆ ಸಮಾಜಕ್ಕೆ ನಿತ್ಯ ಇರಬೇಕು. ಗೋರಕ್ಷಣೆ ಎಂಬುದು ಉಸಿರು, ಸರ್ವಸ್ವ ಇದಕ್ಕಾಗಿ ಎಂಥ ಹೋರಾಟಕ್ಕಾದರೂ ಸಿದ್ದ. ಗೋ ಹತ್ಯೆ ಹಿಂದೆ ಇರುವ ಲಾಭಿಯಲ್ಲಿ ಭಾಗಿಯಾಗಿರುವವರು ಎಂಥಹಾ ಕೆಟ್ಟಕೆಲಸಕ್ಕೂ ಸಿದ್ದರಿದ್ದಾರೆ. ಇದಕ್ಕೆಲ್ಲದಕ್ಕೂ ಸಿದ್ದವಿದ್ದಾಗ ಮಾತ್ರ ಗೋ ರಕ್ಷಣೆಯ ಹೋರಾಟದಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು. ಜತ್ತಿನ ಎಲ್ಲರಿಗೆ ಎಲ್ಲರಿಗಿಂತ ಹೆಚ್ಚು ಉಪಕಾರ ಮಾಡಿದ ಗೋ ಮಾತೆಗೆ ಎಲ್ಲರಿಗಿಂತ ಹೆಚ್ಚಿನ ತೊಂದರೆಯಾಗುತ್ತಿದೆ. ಹಾಲಿನ ಹೆಸರಿನಲ್ಲಿ ಶತಕೋಟಿ ಭಾರತೀಯರು ಹಾಲಾಹಲ ಸೇವನೆ ಮಾಡುತ್ತಿರುವುದು ದುರದೃಷ್ಟಕರ. ತಾಯಿ - ಧರ್ಮ - ದೇಶಕ್ಕಾಗಿ ಸಂತರೂ ಯುದ್ಧ ಭೂಮಿಯಲ್ಲಿ ಇಳಿಯಬಹುದಾಗಿದೆ. ತಾಯಿಯ ತಾಯಿಯನ್ನು ಉಳಿಸುವ ನಿಟ್ಟಿನಲ್ಲಿ ಸನ್ಯಾಸಿಗಳೂ ಶಸ್ತ್ರಕೈಗೆತ್ತಿಕೊಳ್ಳವ ಅನಿವಾರ್ಯತೆ ಎದುರಾಗಿದೆ. ಗೋವಿನ ಮೇಲಿನ ಕ್ರೌರ್ಯ ರಾವಣನ ರಾಜ್ಯದಲ್ಲೂ ನಡೆಯುತ್ತಿರಲಿಲ್ಲ. ಸಮಾಜಿಕ ಜಾಲತಾಣ ಸಮಯ ಕಳೆಯುವ ಸಾಧನವಾಗದೆ, ಅಕ್ಷರ ಸಮರದ ತಾಣವಾಗಿ ಬರಬೇಕಾಗಿದೆ ಎಂದು ತಿಳಿಸಿದರು.

You don't have permission to register

Enquiry

[contact-form-7 404 "Not Found"]