Temple Seva - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temples  >  NSRS Mutt - Ranipet  >  Kartika Deepotsava </span
Top

Vishesha panchamrutabhisheka / ವಿಶೇಷ ಪಂಚಾಮೃತಾಭಿಷೇಕ

(ಬಲಿಪಾಡ್ಯಮಿ 31.10.2016) "ಹಾಲು “ಸ್ನಾನಂ ಪಂಚಾಮೃತೈರ್ದೇವ ಗೃಹಾಣ ಪುರುಷೋತ್ತಮ” – “ಹೇ ಪುರುಷೋತ್ತಮನೇ, ಸಹಜವಾಗಿಯೇ ಮಧುರವಾದಂತಹ, ನಿನ್ನ ಪ್ರೀತಿಯ ವಸ್ತುವಾದ ಕಾಮಧೇನುವಿನಿಂದ ಪ್ರಕೃತಿಸಿದ್ಧವಾಗಿ ಸಿಗುವಂತಹ, ಅಮೃತಸದೃಶವಾದ ಹಾಲಿನಿಂದ ನಿನಗೆ ಸ್ನಾನ ಮಾಡಿಸುವೆ” ಎಂದು ಪ್ರಾರ್ಥಿಸಿ. “ಕ್ಷೀರೇ ಗೋವಿಂದಾಯ ನಮಃ ಗೋವಿಂದಮಾವಾಹಯಾಮಿ” ಎಂದು ಗೋವಿಂದನನ್ನು ಆವಾಹಿಸಿ, ಹಾಲಿನಿಂದ ಅಭಿಷೇಕ ಮಾಡಬೇಕು. " "ಮೊಸರು “ಚಂದ್ರಮಂಡಲಸಂಕಾಶಂ” _ ಭಗವಂತನಿಗೆ, ಚಂದ್ರಮಂಡಲದಂತೆ ಬೆಳ್ಳಗಿರುವ, ಎಲ್ಲ ದೇವತೆಗಳಿಗೂ ಪ್ರಿಯವಾದ, ಜೀರ್ಣಕಾರಕವಾದ ಮೊಸರಿನಿಂದ ಮಾಡುವ ಅಭಿಷೇಕವು ಸಕ ಇಷ್ಟಾರ್ಥಗಳನ್ನು ಇತ್ತು ಜೀವನವನ್ನು ಹಸನಾಗಿ ಮಾಡುವುದು. “ದಧ್ನಿ ವಾಮನಾಯ ನಮಃ” ವಾಮನಮಾವಾಹಯಾಮಿ ಎಂದು ವಾಮನದೇವರನ್ನು ಆವಾಹಿಸಿ ಮೊಸರಿನಿಂದ ಅಭಿಷೇಕ ಮಾಡಬೇಕು. " "ತುಪ್ಪ “ಆಜ್ಯಂ ಸುರಾಣಾಮಾಹಾರಃ”_ತುಪ್ಪವು ದೇವತೆಗಳ ಪ್ರಿಯವಾದ ಆಹಾರವೂ, ಯಜ್ಞ-ಯಾಗಾದಿಗಳಲ್ಲಿ ಪ್ರಧಾನವಾಗಿ ಉಪಯೋಗಿಸಲ್ಪಡುವುದೂ, ಅತ್ಯಂತ ಪವಿತ್ರವಾದದ್ದೂ ಆಗಿದೆ. ಇಂತಹ ತುಪ್ಪದಿಂದ ಭಗವಂತನಿಗೆ ಅಭಿಷೇಕವನ್ನು ಮಾಡಿದಾಗ ನಮ್ಮ ಜೀವನವೂ ಸುಖಮಯವಾಗುವುದರಲ್ಲಿ ಸಂಶಯವಿಲ್ಲ. “ಘೃತೇ ವಿಷ್ಣವೇ ನಮಃ” ವಿಷ್ಣುಮಾವಾಹಂಯಾಮಿ ಎಂದು ವಿಷ್ಣುವನ್ನು ತುಪ್ಪದಲ್ಲಿ ಆವಾಹಿಸಿ ಅಭಿಷೇಕ ಮಾಡಬೇಕು. " "ಜೇನುತುಪ್ಪ “ಸರ್ವೌಷಧಿಸಮುತ್ಪನ್ನಂ”__ಸಕಲ ಔಷಧೀಯ ಗುಣಗಳನ್ನು ಹೊಂದಿದ, ಅಮೃತಕ್ಕೆ ಸಮಾನವಾದ, ವಿಶೇಷವಾಗಿ ಆಂಜನೇಯ ಮೊದಲಾದ ದೇವತೆಗಳಿಗೆ ಅತಿ ಪ್ರಿಯವೂ ಆದ ಜೇನುತುಪ್ಪದಿಂದ ಅಭಿಷೇಕ ಮಾಡಿದ್ದಲ್ಲಿ ಸಕಲ ದುರಿತಗಳು ನಾಶವಾಗಿ ಸ್ವಾಸ್ಥ್ಯ ಸಿಗುವುದರಲ್ಲಿ ಸಂಶಯವಿಲ್ಲ. “ಮಧುನಿ ಮಧುಸೂದನಾಯ ನಮಃ” ಮಧುಸೂದನಮಾವಾಹಯಾಮಿ ಎಂದು ಜೇನಿನಲ್ಲಿ ಮಧುಸೂದನನನ್ನು ಆವಾಹಿಸಿ ಅಭಿಷೇಕ ಮಾಡಬೇಕು. " "ಸಕ್ಕರೆ ಇಕ್ಷುದಂಡಸಮುತ್ಪನ್ನಾ __ ಕಬ್ಬಿನಿಂದ ತಯಾರಿಸಲ್ಪಟ್ಟ ಶುದ್ಧವಾದ ಸಕ್ಕರೆಯು ಭಗವಂತನ ಅಭಿಷೇಕಕ್ಕೆ ಅತ್ಯಂತ ಪ್ರಶಸ್ತವು. ಇದು ಬಹಳ ಮಧುರ ಹಾಗೂ ಸಕಲ ಭಕ್ಷ್ಯಗಳಲ್ಲೂ ಸಲ್ಲುವಂತಹ ಪ್ರಧಾನ ವಸ್ತುವಾಗಿದೆ. ರಾಸಾಯನಿಕವಿಲ್ಲದ ಸಕ್ಕರೆಯಿಂದ ಭಗವಂತನಿಗೆ ಮಾಡುವ ಅಭಿಷೇಕವು ನಮ್ಮ ಜೀವನಯಾತ್ರೆಯನ್ನು ಸುಮಧುರವಾಗಿಸುವುದು. “ಶರ್ಕರಾಯಾಮ್ ಅಚ್ಯುತಾಯ ನಮಃ’ ಎಂದು ಸಕ್ಕರೆಯಲ್ಲಿ ಅಚ್ಯುತನನ್ನು ಆವಾಹಿಸಿ ಅಭಿಷೇಕ ಮಾಡಬೇಕು. "
a
Seva Price: 120
  

By clicking on the 'Book Now' button, you agree to our Terms & Conditions.

You don't have permission to register

Enquiry

[contact-form-7 404 "Not Found"]