History - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
  • Special poojas of the temple / ದೇವಸ್ಥಾನದ ವಿಶೇಷ ಪೂಜೆಗಳು

    Localites often visit Sri Anantheshwara temple to seek his blessing to resolve their problems. Devotees offer Tender Coconut Abhisheka for good monsoon. Chitrannna, is offered to God to stop Heavy downpour of Rain. Rudrabhisheka, Ekadhasha Rudrabhisheka and Shatha Rudrabhisheka are some of the sevas offered in common by devotees to overcome the hardships in their Life. Raashi Puja is performed as Special Pooja from the temple priest. Every Monday Deepaaradhane is held in the Kartika Masa. Every year devotees do Dora Bandhan {sacred thread of Lord tied on their Hand}, on the auspicious day of Anantha Chaturdasi. Special Pooja’s and Utsava’s are held for Nine Days during Ramanavami Festival. ಸ್ಥಳೀಯರು ತಮ್ಮ ಊರಿಗೆ ಏನೇ ತೊಂದರೆಯಾದರೂ ಅನಂತೇಶ್ವರನ ಮೊರೆ ಬೀಳುವ ಪ್ರತೀತಿ ಇದೆ. • ಮಳೆ ಬಾರದಿದ್ದರೆ ಪರ್ಯಾಯ ಸ್ವಾಮಿಗಳ ನೇತೃತ್ವದಲ್ಲಿ ದೇವರಿಗೆ ಎಳನೀರಿನ ಅಭಿಷೇಕ ನಡೆಸುವರು. • ಅತಿವೃಷ್ಟಿಯಾದಲ್ಲಿ ದೇವರಿಗೆ ಚಿತ್ರಾನ್ನ ಸಮರ್ಪಿಸಿ ಮಳೆ ನಿಲ್ಲಿಸೆಂದು ಬಿನ್ನೈಸುವರು. • ಭಕ್ತಾದಿಗಳು ತಮಗೆ ಏನೇ ಕಷ್ಟ ಬಂದರು ರುದ್ರಾಭಿಷೇಕ, ಏಕಾದಶರುದ್ರಾಭಿಷೇಕ ಮತ್ತು ಶತರುದ್ರಾಭಿಷೇಕ ಸೇವೆಯನ್ನು ಮಾಡಿಸುವರು, ತಮ್ಮಲ್ಲಿನ ಯಾವುದೇ ಶುಭ ಕಾರ್ಯಗಳ ಸಂದರ್ಭದಲ್ಲಿ ಈ ಹರಕೆ ಮಾಡಿಕೊಳ್ಳುವ ವಾಡಿಕೆ ಬಂದಿದೆ. • ಕಾರ್ತಿಕಮಾಸದ ಪ್ರತಿ ಸೋಮವಾರದಂದು ವಿಶೇಷ ದೀಪಾರಾಧನೆಯು ರಾತ್ರಿ ಪೂಜಾಸಮಯದಲ್ಲಿ ನಡೆಯುತ್ತದೆ. • ರಾಶಿ ಪೂಜೆಯೆನ್ನುವುದು ಶ್ರೀ ದೇವರ ಸನ್ನಿಧಿಯಲ್ಲಿ ನಡೆಯುವ ವಿಶೇಷ ಹಾಗು ವಿಶಿಷ್ಟ ಪೂಜೆ. . • ಪ್ರತಿವರ್ಷ ಅನಂತಚತುರ್ದಶಿ ದಿನದಂದು ವ್ರತಸ್ಥರಾದ ಹಲವು ಭಕ್ತರು ಈ ಸನ್ನಿಧಿಯಲ್ಲಿ ದೋರ ಬಂಧನವನ್ನು ಮಾಡಿಕೊಳ್ಳುವರು . • ರಾಮನವಮಿಯ ಸಂದರ್ಭದಲ್ಲಿ ಒಂಭತ್ತು ದಿನಗಳು ವಿಶೇಷ ಪೂಜಾ ಮತ್ತು ಉತ್ಸವಗಳು ನಡೆಯುತ್ತದೆ.

  • Historical Background / ಪೌರಾಣಿಕ ಹಿನ್ನೆಲೆ

    It is said that in Sanskrit original name of Udupi is ‘Rajatpeetapura’ or ‘Roupyapeetapura’. According to the history, Lord Sri Parashurama learnt the art of Archery from Sri Maharudradeva. After mastering the art, Lord Parashurama asked the Sri Maharudradeva , as to what Guru Dakshina was to be given to him. Sri Maharudradeva, who was close to Lord Sri Parashurama, asked to stay with him in this place for the devotees to worship them together. In the past Trethayuga, the King Ramabhoja was conducting the land survey to perform Ashwamedha Yaga, During the survey the snake, which was hidden in the land got hurt and died. The King was disturbed due to the untoward incident. Parashurama, who came to see the king, convinced that it was not a serpent, but an Asura (in form of Snake). Following Parashurama’s advice, the king got the Rajathapeeta done, which had the Statue’s of Serpent in its four corners and then conducted Yajna in the Yajna Peeta. Later Sri Parashuramadeva himself appeared in the form of Ananthasana on the Rajathapeeta and since then, the place was known as “Rajatpeetapura”. While the other version of the anecdote says that once upon a time a Brahmin was worshipping Lord Narayana to seek his blessing to bear a child. God, who was pleased with his prayers and devotion appeared in the Brahmin’s dream and suggested him to travel to Roupyapeeta . The Brahmin was also advised to perform Ksheerabhisheka (Abhisheka performed with milk) to Nagapeeta , which was in the form of yagnakunda. The God informed Brahmin that he would appear in the form of Linga and fulfill all his wishes. Over a period of time, lord Parashurama, according to the promise made to Sri Maharudradeva consecrated in the form of Linga at Rajatapeetapura Shrine and continued to bless the devotees. ರಜತಪೀಠಪುರ ಅಥವಾ ರೌಪ್ಯಪೀಠಪುರ ಎಂಬುವುದು ಉಡುಪಿ ನಗರದ ಮೂಲ ಸಂಸ್ಕೃತದ ಹೆಸರಾಗಿದೆ. ರಜತಪೀಠಪುರವೆಂದರೆ ಬೆಳ್ಳಿಯ ಪೀಠ ಇರುವ ಊರು ಎಂದು ಅರ್ಥವಾಗುತ್ತದೆ. ಉಡುಪಿ ಕ್ಷೇತ್ರಕ್ಕೆ ಈ ಹೆಸರು ಬರುವ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ಬಾಲಕರಿರುವಾಗ ಪರಶುರಾಮದೇವರು ಮಹಾರುದ್ರ ದೇವರಲ್ಲಿ ಶಸ್ತ್ರಾಭ್ಯಾಸ ಮಾಡಿದ್ದರೆಂಬ ಐತಿಹ್ಯವಿದೆ. ಅಭ್ಯಾಸವು ಮುಗಿದ ನಂತರ ಪರಶುರಾಮದೇವರು ಗುರುದಕ್ಷಿಣೆಯಾಗಿ ಏನನ್ನು ಕೊಡಲಿ ಎಂದು ರುದ್ರ ದೇವರನ್ನು ಕೇಳಿದಾಗ, ಮಹಾರುದ್ರದೇವರು ಪರಶುರಾಮ ತನ್ನಲ್ಲಿ ಸನ್ನಿಹಿತರಾಗಿದ್ದು, ಒಂದೇ ಕ್ಷೇತ್ರದಲ್ಲಿ ತಾವಿಬ್ಬರು ಒಟ್ಟಿಗೆ ನೆಲೆ ನಿಂತು ಭಕ್ತರ ಅಭೀಷ್ಟವನ್ನು ಪೂರೈಸುತ್ತಿರಬೇಕೆಂದು ಕೇಳಿಕೊಂಡರು ಎಂದು ಹೇಳಲಾಗುತ್ತದೆ. ಹಿಂದೆ ತ್ರೇತಾಯುಗದಲ್ಲಿ ರಾಮಭೋಜನೆಂಬ ಕ್ಷತ್ರಿಯರಾಜನು ಅಶ್ವಮೇಧಯಾಗಕ್ಕಾಗಿ ಭೂ ಶೋಧನೆಯನ್ನು ಮಾಡಿಸುತ್ತಿದ್ದಾಗ ಒಂದು ಘಟಸರ್ಪವು ನೇಗಿಲಿಗೆ ಸಿಕ್ಕಿ ಮೃತವಾಯಿತಂತೆ, ಆಗ ರಾಜನು ತನಗೆ ಸರ್ಪಹತ್ಯಾದೋಷ ಒದಗಿತೆಂದು ಚಿಂತಿಸುತ್ತಿರಲು ಪರಶುರಾಮ ದೇವರು ಬಂದು ಅದು ಸರ್ಪವಲ್ಲ, ಸರ್ಪರೂಪದಿಂದ ಇದ್ದ ಅಸುರನು, ಆದ್ದರಿಂದ ನಿನಗೆ ಸರ್ಪಹತ್ಯಾದೋಷ ಬಂದಿಲ್ಲವೆಂದು ರಾಜನಿಗೆ ತಿಳಿಸಿದರೂ, ಸಮಾಧಾನ ಹೊಂದದ ರಾಜನು ಪರಶುರಾಮ ದೇವರ ಸಲಹೆಯಂತೆ ಬೆಳ್ಳಿಯಪೀಠವನ್ನು ಮಾಡಿಸಿ ಅದರ ನಾಲ್ಕು ಮೂಲೆಯಲ್ಲಿ ಒಂದೊಂದು ಸರ್ಪ ಪ್ರತಿಮೆಯನ್ನು ಸ್ಥಾಪಿಸಿ, ಪೂಜಿಸಿ, ನಂತರ ಯಜ್ಞ ಪೀಠದಲ್ಲಿ ಯಜ್ಞವನ್ನು ಸಾಂಗವಾಗಿ ನೆರವೇರಿಸಿದನು. ಮುಂದೆ ಆ ಪೀಠದಲ್ಲಿ ಪರಶುರಾಮದೇವರು ಸ್ವತಃ ತಾವೇ ಅನಂತಾಸನ ರೂಪದಲ್ಲಿ ಆವಿರ್ಭವಿಸುವುದಾಗಿಯೂ ಈ ಕ್ಷೇತ್ರವು ಅಂದಿನಿಂದ ರಜತಪೀಠಪುರವೆಂದು ಪ್ರಸಿದ್ದಿಯಾಗಲೆಂದು ಆಶೀರ್ವದಿಸಿದರು. ಮುಂದೆ ಕಾಲಕ್ರಮೇಣ ಒಬ್ಬ ವಿಪ್ರಶೇಷ್ಠನು ತನಗೆ ಸಂತಾನ ಪ್ರಾಪ್ತಿಯಾಗಲೆಂದು ಶ್ರೀ ನಾರಾಯಣನ ಸೇವೆ ಮಾಡುತ್ತಿದ್ದಾಗ, ದೇವರು ರಾತ್ರಿ ಸ್ವಪ್ನದಲ್ಲಿ ಬಂದು ಇಲ್ಲಿಂದ ಎರಡು ಕ್ರೋಶ(ನಾಲ್ಕುಮೈಲು) ದೂರವಿರುವ ರೌಪ್ಯಪೀಠಕ್ಷೇತ್ರಕ್ಕೆ ಹೋಗಿ ಅಲ್ಲಿ ಯಜ್ಞಕುಂಡವಾಗಿದ್ದ ನಾಗಪೀಠದಲ್ಲಿ ಕ್ಷೀರಾಭಿಷೇಕ ಮಾಡು ಎಂದು ಆದೇಶಿಸಿದರು. ನಾನು ಈ ಹಿಂದೆ ರುದ್ರದೇವರು ನನ್ನನ್ನು ಕೇಳಿಕೊಂಡಂತೆ, ಅಲ್ಲಿ ಲಿಂಗಾಕಾರದಿಂದ ಪ್ರಕಟನಾಗಿ ನಿನ್ನ ಅಭೀಷ್ಟವನ್ನು ಕರುಣಿಸುವೆನು ಎಂದು ಆಶಿರ್ವದಿಸಿದರು ಎಂಬ ಪ್ರತೀತಿ ಇದೆ. ಮುಂದೆ ಪರಶುರಾಮ ದೇವರು ಶಿವನ ಲಿಂಗಾಕಾರದಿಂದ ಈ ರಜತಪೀಠ ಪುರದಲ್ಲಿ ಆವಿರ್ಭವಿಸಿ ಆ ಬ್ರಾಹ್ಮಣನ ಮತ್ತು ಅಪಾರ ಭಕ್ತರನ್ನು ಆಶಿರ್ವದಿಸುತ್ತಾ ಇಂದಿಗೂ ಈ ದೇವಾಲಯದಲ್ಲಿ ವಿರಾಜಮಾನರಾಗಿದ್ದಾರೆ.

  • Special Feature of the temple / ದೇವಸ್ಥಾನದ ವಿಶೇಷತೆಗಳು

    On the Occasion of Sri Anatheshwara Utsava, the Car Chariot of Sri Krishna Temple is used for this Utsava, which draws attention of Devotees across the State. Lord Sri Anantheshwara and Lord Sri Chandramouleshwara idols were taken in a single Chariot and Pooja rituals are performed to both the deities together. Sri Madhwa Navami Utsava is celebrated under the leadership of Sri Paryaya Swamiji with Pomp and Gaiety. Upcoming Paryaya Swamiji of Sri Krishna Temple will visit “Sri Anantheshwara Temple” first and then will take the possession of “Sarvajna Peeta”. ಪ್ರಮುಖ ವಿಶೇಷವೆಂದರೆ ಶ್ರೀ ಅನಂತೇಶ್ವರ ಸ್ವಾಮಿಯ ವಾರ್ಷಿಕ ಉತ್ಸವ ದಿನದಂದು ಶ್ರೀ ಕೃಷ್ಣನ ಬ್ರಹ್ಮರಥವನ್ನು ಸಿದ್ಧಪಡಿಸಿ ಸ್ವಾಮಿಯ ಉತ್ಸವ ಸಂಚಾರಕ್ಕಾಗಿ ನೀಡುವ ಪ್ರಕ್ರಿಯೆ ನಡೆಯುತ್ತಾ ಬಂದಿರುವುದು. ಶ್ರೀಮದನಂತೇಶ್ವರನಿಗೂ ಮತ್ತು ಚಂದ್ರಮೌಳೇಶ್ವರನಿಗೂ ಜೊತೆ ಜೊತೆಯಾಗಿ ಪೂಜೆ ಮತ್ತು ಉತ್ಸವಗಳು ನಡೆಯುವುದು ಮತ್ತು ಒಂದೇ ರಥದಲ್ಲಿ ಎರಡು ದೇವಸ್ಥಾನದ ಉತ್ಸವ ಮೂರ್ತಿಗಳು ರಥಾರೂಢರಾಗುವುದು ಭಕ್ತಾದಿಗಳಿಗೆ ವಿಶೇಷ ಸಂಭ್ರಮಕ್ಕೆ ಕಾರಣೀಭೂತವಾಗಿದೆ. ಪ್ರತಿವರ್ಷ ಮಧ್ವನವಮಿ ಉತ್ಸವ (ಮಾಘ ಶುದ್ಧ ನವಮಿ) ಪರ್ಯಾಯ ಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಅನಂತೇಶ್ವರನ ಸನ್ನಿಧಿಯಲ್ಲಿ ಬಹು ವಿಜೃಂಭಣೆಯಿಂದ ಜರಗುತ್ತದೆ. ಪ್ರತೀ ಎರಡು ವರ್ಷಗಳಿಗೊಮ್ಮೆ ಭಾವೀ ಪರ್ಯಾಯ ಪೀಠಾಧಿಪತಿಗಳು ಮೊದಲು ಶ್ರೀ ಅನಂತೇಶ್ವರನ ಮತ್ತು ಅವನ ದೇಗುಲದಲ್ಲಿರುವ ಶ್ರೀಮಧ್ವಾಚಾರ್ಯರ ದರ್ಶನ ಪಡೆದು ತದನಂತರ ಸರ್ವಜ್ಞ ಪೀಠಾರೋಹಣ ಮಾಡುವ ವಾಡಿಕೆ ಇಂದಿಗೂ ಇದೆ.

You don't have permission to register

Enquiry

[contact-form-7 404 "Not Found"]