History - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
Home  >  Temples  >  Shree Ramashrama - Girinagar  >  History</span
 • Historical Background / ಐತಿಹಾಸಿಕ ಹಿನ್ನೆಲೆ

  Sri Ramashrama at Girinagar, Bengaluru was the samadhi sthala of Sri Raghavendra Bharati Swamyji. The swamiji spent his last days at the Mutt. It was also the place where the present pontiff of the Mutt, Sri Raghaveshwara Bharati was ordained sannyasa and appointed as the Peethadhipati of the Mutt. In order to fulfill his Guru's wish and to expand the Mutt's activities, the Present Pontiff of the Mutt, Sri Raghaveshwara Bharati inaugurated the Mutt at Girinagar on 05.05.2002, Wednesday (i.e on Vyshaka Shuddha Tritiya of Chitrabhaanu Samvatsara). ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀ ರಾಮಾಶ್ರಮವು ಶ್ರೀ ರಾಘವೇಂದ್ರ ಭಾರತಿ ಸ್ವಾಮಿಗಳ ಸಮಾಧಿ ಸ್ಥಳವಾಗಿತ್ತು. ಸ್ವಾಮಿಗಳು ತಮ್ಮ ಕೊನೇಯ ದಿನಗಳನ್ನು ಅಲ್ಲಿಯೇ ಕಳೆದರು. ಈ ಶಾಖಾ ಮಠವು, ಈಗಿನ ಗುರುಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಸಂನ್ಯಾಸಗ್ರಹಣ, ಪೀಠಾರೋಹಣ ಮಹೋತ್ಸವಗಳು ನಡೆದ ಸ್ಥಳವೂ ಆಗಿದೆ. ತಮ್ಮ ಗುರುಗಳ ಆಶಯವನ್ನು ಪೂರ್ಣಗೊಳಿಸಲು ಹಾಗೂ ಶ್ರೀ ಮಠದ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಲು ಪ್ರಸ್ತುತ ಶಾಖಾಮಠವನ್ನು ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು, ದಿನಾಂಕ 05.05.2002, ಬುಧವಾರ ಅಂದರೆ ಚಿತ್ರಭಾನು ಸಂವತ್ಸರದ ವೈಶಾಖ ಶುದ್ಧ ತೃತೀಯಾದಂದು ಉದ್ಘಾಟಿಸಿದರು.

 • Guru Parampare / ಗುರು ಪರಂಪರೆ

  1. Sri Shankaracharya 2. Sri Sureshwaraya 3. Sri Vidyanandacharya 4. Sri Chidbodha Bharati 5. Sri Nityananda Bharati 6. Sri Nityabodha Ghanendra Bharati 7. Sri Sacchidananda Bharati 8. Sri Chidghanendra Bharati 9. Sri Seetaramachandra 10. Sri Chidbodha Bharati 11. Sri Raghaveshwara Bharati I 12. Sri Ramachandra Bharati I 13. Sri Abhinava Raghaveshwara Bharati 14. Sri Ramayogindra Bharati 15. Sri Nrusimha Bharati 16. Sri Anantendra Bharati 17. Sri Ramabhadra Bharati II 18. Sri Raghaveshwara Bharati II 19. Sri Vidya Dhanendra Bharati 20. Sri Raghunatha Bharati 21. Sri Ramachandra Bharati II 22. Sri Raghoottama Bharati I 23. Sri Parameshwara Bharati 24. Sri Raghaveshwara Bharati III 25. Sri Raghoottama Bharati II 26. Sri Raghaveshwara Bharati IV 27. Sri Raghoottama Bharati III 28. Sri Raghaveshwara Bharati V 29. Sri Raghoottama Bharati IV 30. Sri Raghaveshwara Bharati VI 31. Sri Ramachandra Bharati IV 32. Sri Raghavendra Bharati 33. Sri Raghaveshwara Bharati VII 34. Sri Ramachandra Bharati V 35. Sri Raghavendra Bharati II 36. Sri Raghaveshwara Bharati VIII 1. ಶ್ರೀಮಜ್ಜಗದ್ಗುರು ಆದಿ ಶಂಕರಾಚಾರ್ಯ 2. ಶ್ರೀ ಸುರೇಶ್ವರಾಚಾರ್ಯ 3. ಶ್ರೀ ವಿದ್ಯಾನಂದಾಚಾರ್ಯ 4. ಶ್ರೀ ಚಿದೋಭೋಧ ಭಾರತೀ 5. ಶ್ರೀ ನಿತ್ಯಾನಂದ ಭಾರತೀ 6. ಶ್ರೀ ನಿತ್ಯಬೋಧಾನಂದ ಭಾರತೀ 7. ಶ್ರೀ ಸಚ್ಚಿದಾನಂದ ಭಾರತೀ 8. ಶ್ರೀ ಚಿದಾನಂದ ಭಾರತೀ 9. ಶ್ರೀ ಸೀತಾರಾಮಚಂದ್ರ ಭಾರತೀ 10. ಶ್ರೀ ಚಿದ್ಬೋಧ ಭಾರತೀ 11. ಶ್ರೀ ರಾಘವೇಶ್ವರ ಭಾರತೀ 1 12. ಶ್ರೀ ರಾಮಚಂದ್ರ ಭಾರತೀ 1 13. ಶ್ರೀ ಅಭಿನವ ರಾಘವೇಶ್ವರ ಭಾರತೀ 14. ಶ್ರೀ ರಾಮಯೊಗೀಂದ್ರ ಭಾರತೀ 15. ಶ್ರೀ ನರಸಿಂಹ ಭಾರತೀ 16. ಶ್ರೀ ನೇತ್ರಾನಂದ ಭಾರತೀ 17. ಶ್ರೀ ರಾಮಚಂದ್ರ ಭಾರತೀ 2 18. ಶ್ರೀ ರಾಘವೇಶ್ವರ ಭಾರತೀ 2 19. ಶ್ರೀ ವಿದ್ಯಾಧರೇಂದ್ರ ಭಾರತೀ 20. ಶ್ರೀ ರಘುನಾಥ ಭಾರತೀ 21. ಶ್ರೀ ರಾಮಚಂದ್ರ ಭಾರತೀ 2 22. ಶ್ರೀ ರಘೂತ್ತಮ ಭಾರತೀ 1 23. ಶ್ರೀ ಪರಮೇಶ್ವರ ಭಾರತೀ 24. ಶ್ರೀ ರಾಘವೇಶ್ವರ ಭಾರತೀ 3 25. ಶ್ರೀ ರಘೂತ್ತಮ ಭಾರತೀ 2 26. ಶ್ರೀ ರಾಘವೇಶ್ವರ ಭಾರತೀ 4 27. ಶ್ರೀ ರಘೂತ್ತಮ ಭಾರತೀ 3 28. ಶ್ರೀ ರಾಘವೇಶ್ವರ ಭಾರತೀ 5 29. ಶ್ರೀ ರಘೂತ್ತಮ ಭಾರತೀ 4 30. ಶ್ರೀ ರಾಘವೇಶ್ವರ ಭಾರತೀ 6 31. ಶ್ರೀ ರಾಮಚಂದ್ರ ಭಾರತೀ 4 32. ಶ್ರೀ ರಾಘವೇಂದ್ರ ಭಾರತೀ 33. ಶ್ರೀ ರಾಘವೇಶ್ವರ ಭಾರತೀ 7 34. ಶ್ರೀ ರಾಮಚಂದ್ರ ಭಾರತೀ 5 35. ಶ್ರೀ ರಾಘವೇಂದ್ರ ಭಾರತೀ 2 36. ಶ್ರೀ ರಾಘವೇಶ್ವರ ಭಾರತೀ 8

 • Sri Ramachandrapura Mutt / ಶ್ರೀ ರಾಮಚಂದ್ರಾಪುರ ಮಠ

  Sri Adi Shankaracharya, who was on an entourage, happened to visit the coastal village of Gokarna. After offering worship to Lord Mahabaleshwara, he went to the nearby Shatashringa hills, where he is said to have been astonished by seeing wild animals being friendly with livestock like cows. Later, he met sage Varadamuni. Sage Varadamuni handed over the idols of Srirama, Lakshmana, Seetha and Sri Chandramauleshwara in the form of Linga to Sri Shankaracharya. It was during this sojourn that Sri Shankaracharya set up Sri Raghoottama Mutt at a place called Ashoke in Gokarna. He identified Sri Vidyananda, who was a disciple of his own disciple Sri Sureshwaracharya, as the first pontiff of this Mutt. Sri Raghaveshwara Bharati, the present pontiff of Sri Ramachandrapura Mutt, is the 36th seer in that lineage. ಒಮ್ಮೆ ಆದಿ ಶಂಕರಾಚಾರ್ಯರು ಸಂಚಾರದಲ್ಲಿದ್ದಾಗ, ಪಶ್ಚಿಮ ಸಮುದ್ರತೀರದಲ್ಲಿರುವ ಗೋಕರ್ಣವನ್ನು ತಲುಪಿ, ಅಲ್ಲಿನ ಸ್ಥಳೀಯ ದೇವತೆಯಾದ ಮಹಾಬಲೇಶ್ವರನನ್ನು ಪೂಜಿಸಿದರು. ನಂತರ, ಶ್ರೀ ವರದೇಶನನ್ನು ಪೂಜಿಸಲು ತಮ್ಮ ಶಿಷ್ಯರೊಂದಿಗೆ ಶತಶೃಂಗಕ್ಕೆ ತೆರಳಿದರು. ಶತಶೃಂಗದಲ್ಲಿ ವನ್ಯ ಮೃಗಗಳಾದ ಹುಲಿ, ಹಾವುಗಳು, ಸಾಧು ಪ್ರಾಣಿಗಳಾದ ಹಸು, ಜಿಂಕೆಗಳೊಂದಿಗೆ ಸಖ್ಯದಿಂದಿದ್ದವು. ಅಲ್ಲಿನ ಅಶೋಕ ವನದಲ್ಲಿ ಒಂದು ಹೆಣ್ಣು ಹುಲಿಯು ಅನಾಥವಾಗಿದ್ದ ಜಿಂಕೆಯೊಂದಕ್ಕೆ ತಾಯಿಯ ಮಮತೆಯನ್ನು ತೋರಿಸುತ್ತಿದ್ದುದ್ದನ್ನು ನೋಡಿ ಶ್ರೀ ಶಂಕರಾಚಾರ್ಯರು ವಿಸ್ಮಿತರಾದರು. ಅಲ್ಲಿದ್ದ ವರದ ಮುನಿಗಳು ತಮ್ಮ ಗುರುಗಳಾದ ಅಗಸ್ತ್ಯ ಮುನಿಗಳು ಕೊಟ್ಟಿದ್ದ ಪವಿತ್ರವಾದ ರಾಮ, ಲಕ್ಷ್ಮಣ, ಸೀತೆ ಮತ್ತು ಚಂದ್ರಮೌಳೇಶ್ವರ ಲಿಂಗಗಳನ್ನು ಶಂಕರಾಚಾರ್ಯರಿಗೆ ಕೊಟ್ಟರು. ಆಗ ಶಂಕರಾಚಾರ್ಯರು ಆ ಪವಿತ್ರ ವಿಗ್ರಹಗಳ ಪೂಜೆಗಾಗಿ ಅಲ್ಲಿ ರಘೂತ್ತಮ ಮಠವನ್ನು ಗೋಕರ್ಣದಲ್ಲಿರುವ ಅಶೋಕೆ ಎಂಬ ಸ್ಥಳದಲ್ಲಿ ಸ್ಥಾಪಿಸಿದರು. ಶಂಕರಾಚಾರ್ಯರು ತಮ್ಮ ಶಿಷ್ಯರಾದ ಸುರೇಶ್ವರಾಚಾರ್ಯರಿಂದ ದೀಕ್ಷೆ ಪಡೆದಿದ್ದ ವಿದ್ಯಾನಂದರನ್ನು ಅಲ್ಲಿನ ಪ್ರಥಮ ಪೀಠಾಧಿಪತಿಯಾಗಿ ನೇಮಿಸಿದರು. ಹೀಗೆ ಶ್ರೀ ರಾಮಚಂದ್ರಾಪುರ ಮಠ ಎಂದು ಹೆಸರಾಗಿರುವ ರಘೂತ್ತಮ ಮಠದ ಅವಿಚ್ಛಿನ್ನ ಪರಂಪರೆಯು ಆರಂಭವಾಯಿತು.

 • Sri Raghaveshwara Bharati Swamyji / ಶ್ರೀ ರಾಘವೇಶ್ವರ ಭಾರತೀ ಸ್ವಾಮಿಜಿ

  Jagadguru Sri Shankaracharya Srimadraghaveshwara Bharati Swamiji is the present pontiff of Sri Ramachandrapura Mutt, Hosanagara, in Shivamogga district of Karnataka, India. He is the 36th pontiff of Sri Ramachandrapur Mutt, the only unbroken lineage of Adi Shankaracharya. He was ordained into sainthood by Sri Raghavendra Bharati, the previous pontiff, in April 1994. Birth and childhood: Sri Bharati, in his early days, before being initiated into sainthood, was called as Hareesha Sharma. He was born in Chaduravalli, a village in Sagar taluk, Karnataka. Education: He had his formal education up to VIII standard and later studied Vedanta, Yoga, Astrology and Sanskrit at Gokarna and later in Mysore. Peethadhipati: On 28 April 1999, Sri Bharati became the pontiff of Sri Ramachandrapur Mutt. ಸ್ವಾಮೀಜಿ ಅವರ ಪೂರ್ವಾಶ್ರಮ ನಾಮ ಹರೀಶ ಶರ್ಮಾ ಎಂದು. ಇವರು ಕರ್ನಾಟಕದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಚದರವಳ್ಳಿ ಎಂಬ ಹಳ್ಳಿಯಲ್ಲಿ ಒರ್ವ ಹವ್ಯಕ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮಿ ಮತ್ತು ತಂದೆ ಶೀನಿವಾಸ ಭಟ್ಟರು. ಇವರು ಪ್ರೌಢಶಾಲೆಯವರೆಗೆ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆದರು. ಗೋಕರ್ಣ ಮತ್ತು ವಾರಣಾಸಿಯಲ್ಲಿ ವೈದಿಕ ಶಿಕ್ಷಣವನ್ನು ಪಡೆದು ತಮ್ಮ 18ನೇ ವಯಸ್ಸಿನಲ್ಲಿ ಬ್ರಹ್ಮೈಕ್ಯ ಶ್ರೀ ಶ್ರೀ ರಾಘವೇಂದ್ರ ಭಾರತೀ ಸ್ವಾಮಿಗಳಿಂದ ಸಂನ್ಯಾಸ ಸ್ವೀಕರಿಸಿ, ಮೈಸೂರಿನಲ್ಲಿ ತಮ್ಮ ವೈದಿಕ ಶಿಕ್ಷಣವನ್ನು ಮುಂದುವರೆಸಿದರು. ಸಂನ್ಯಾಸ ಮತ್ತು ಪೀಠಾರೋಹಣ: ಶ್ರೀ ಶ್ರೀ ರಾಘವೇಂದ್ರ ಭಾರತೀ ಸ್ವಾಮಿಗಳು ದಿನಾಂಕ ನವೆಂಬರ್ 26, 1998ರಂದು ಬ್ರಹ್ಮೈಕ್ಯರಾದ ನಂತರ, ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು 1999ರ ಏಪ್ರಿಲ್ನಲ್ಲಿ ( 28, ಬುಧವಾರ), ತಮ್ಮ 23ನೇ ವಯಸ್ಸಿನಲ್ಲಿ, ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿಯಾಗಿ ಅಭಿಷಿಕ್ತರಾದರು. ಇವರು ಶ್ರೀರಾಮಚಂದ್ರಾಪುರ ಮಠದ ಪರಂಪರೆಯಲ್ಲಿ 36ನೇ ಯತಿಗಳು.

You don't have permission to register

Enquiry

[contact-form-7 404 "Not Found"]