History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Historical Background / ಐತಿಹಾಸಿಕ ಹಿನ್ನೆಲೆ

    As per historical evidences, Gerusoppa in Saagara Taluk, Shimoga district was the main kshetra of Sri Jwalamalini. Gerusoppa was prominently visited by Jain piligrims. In ancient times, Sri Samantabhadraswamy had settled in Gerusoppa and was worshipping Sri Jwalamalini. He had set up a Mutt for the purpose. The goddess had to shift to some other place owing to the vagaries of nature and bad time. Once, during those days, Jwalamalini is believed to have come in the dream of Sri Samanthabhadra and said: “Time has come to me to move to some other place and therefore I can no longer stay here. Take me on a bullock cart to a different place and consecrate me there. You can continue your propagation of the culture and tradition. While carrying me in a bullock cart, you will come across a place where tigers and cows will be moving together, forgetting their inherent enmity. You should establish the temple for Jwalamalini there.” Accordingly, realising that the words of Goddess had special significance, Therefore, Sri Samantabhadra Swamy took the idol of the deity in a bullock cart and tried to find the place indicated by the goddess for her consecration. As he went near Sihmanagadde (N.R. Pura), the swamy felt as though his mirth was enhancing and he was more enthusiastic. He realised with his inner instinct that the place indicated by the Goddess had been reached. After walking a few steps in that place, he saw some cows grazing and amid those cows, a lion was also playing with the calves. Swamiji was thrilled and decided that it was the place where he was supposed to consecrate the goddess. He accomplished the task and renamed the place as Sihmanagadde. Later, he stayed and took up further propagation of the cult. ಶ್ರೀ ಜ್ವಾಲಾಮಾಲಿನಿಯ ಮೂಲ ಕ್ಷೇತ್ರವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಗೇರುಸೊಪ್ಪೆ ಆಗಿತ್ತೆಂದು ಕೆಲವು ಚಾರಿತ್ರಿಕ ಮಾಹಿತಿಗಳಿಂದ ತಿಳಿದು ಬರುತ್ತದೆ. ಈ ಕ್ಷೇತ್ರವನ್ನು ಪ್ರಮುಖವಾಗಿ ಜೈನರು ಸಂದರ್ಶಿಸುತ್ತಿದ್ದರೆಂದು ತಿಳಿದುಬರುತ್ತದೆ. ಹಿಂದೆ ಗೇರುಸೊಪ್ಪೆಯಲ್ಲಿ ಶ್ರೀ ಸಮಂತಭದ್ರ ಸ್ವಾಮಿಗಳು, ಶ್ರೀ ಜ್ವಾಲಾಮಾಲಿನಿದೇವಿಯ ಆರಾಧಕರಾಗಿದ್ದು, ಮಠ ಸ್ಥಾಪನೆಯನ್ನು ಮಾಡಿದ್ದರು. ಇವರು ಜೈನಧರ್ಮಪ್ರಚಾರ ಮಾಡುತ್ತಾ ಇದ್ದರು. ಪ್ರಕೃತಿ ದೋಷದಿಂದ ಆ ಕ್ಷೇತ್ರದಲ್ಲಿ ಅಧಿವಾಸವಾಗಿದ್ದ ದೇವಿಯು ಅಲ್ಲಿಂದ ಬೇರೆಡೆಗೆ ಪ್ರಸ್ಥಾನವಾಗುವ ಸಮಯ ಪ್ರಾಪ್ತವಾಯಿತು. ಆಗ ಒಂದು ದಿವಸ, “ ಶ್ರೀ ಕ್ಷೇತ್ರವು ಕ್ಷೀಣದೆಸೆಯನ್ನು ಹೊಂದುವ ಕಾಲವು ಪ್ರಾಪ್ತವಾಗುವುದಿದೆ, ಆದುದರಿಂದ ನಾನು ಇಲ್ಲಿ ನಿಲ್ಲಲಾರೆ, ನನ್ನನ್ನು ಬೇರೆ ಕಡೆಗೆ ಕೊಂಡು ಹೋಗಿ ಸ್ಥಾಪಿಸಿ, ಅಲ್ಲಿಂದ ನೀವು ಧರ್ಮಪ್ರಚಾರವನ್ನು ಮಾಡುತ್ತಾ ಬರಬಹುದು. ಅದಕ್ಕಾಗಿ ನನ್ನನ್ನು ಎತ್ತಿನ ಬಂಡಿಯಲ್ಲಿ ಏರಿಸಿಕೊಂಡು ಹೋಗಬೇಕು. ಹೋಗುತ್ತಾ, ಹೋಗುತ್ತಾ, ಯಾವ ಸ್ಥಳದಲ್ಲಿ ಸಿಂಹ ಮತ್ತು ದನಗಳು ತಮ್ಮ ವೈರಭಾವವನ್ನು ಬಿಟ್ಟು ಅನ್ಯೋನ್ಯವಾಗಿ ಆಡುತ್ತಾ ಇರುತ್ತವೆಯೋ ಅಲ್ಲಿ ನನ್ನನ್ನು ಸ್ಥಾಪಿಸಬೇಕು” ಎಂದು ಶ್ರೀ ಸಮಂತಭದ್ರ ಸ್ವಾಮಿಗಳಿಗೆ ಸ್ವಪ್ನವಾಯಿತು. ಅಂತೆಯೆ ಆ ವಚನವು ವಿಶೇಷವೆಂದು ತಿಳಿದು, ಶ್ರೀ ಸಮಂತಭದ್ರ ಸ್ವಾಮಿಗಳು ಶ್ರೀ ಜ್ವಾಲಾಮಾಲಿನಿಯ ವಿಗ್ರಹವನ್ನು ಎತ್ತಿನ ಬಂಡಿಯಲ್ಲಿ ಏರಿಸಿಕೊಂಡು ಗೇರುಸೊಪ್ಪೆಯಿಂದ ಪ್ರಯಾಣ ಬೆಳೆಸಿದರು. ಅಲ್ಲಿಂದ ದೇವಿಯು ಕನಸಿನಲ್ಲಿ ತೋರಿದ ಸ್ಥಳವನ್ನು ಅನ್ವೇಷಣೆ ಮಾಡತ್ತಾ ಬರುವಲ್ಲಿ, ಈಗ ಶ್ರೀ ಜ್ವಾಲಾಮಾಲಿನಿದೇವಿಯ ಬಿಂಬವು ಸ್ಥಾಪನೆಯಾಗಿರುವ ಶ್ರೀ ಸಿಂಹನಗದ್ದೆ ಕ್ಷೇತ್ರದ (ಎನ್.ಆರ್.ಪುರ) ಸಮೀಪ ಬರುಬರುತ್ತಾ ಸ್ವಾಮಿಗಳ ಮನಸ್ಸಿಗೆ ಆಹ್ಲಾದ ಮತ್ತು ಉತ್ಸಾಹವು ತೋರಿದಂತೆ ಕಂಡುಬಂದಿತು. ಆಗ ತಮ್ಮ ಆತ್ಮ ಬಲದಿಂದ ಅಮ್ಮನವರು ಅಧಿವಾಸವಾಗುವ ಸ್ಥಳವು ಇದೇ ಇರಬಹುದೇನೋ ಎಂಬುದಾಗಿ ಆಲೋಚಿಸುತ್ತಾ ಸ್ವಲ್ಪ ದೂರ ನಡೆದ ಕೂಡಲೇ, ಒಂದು ಗದ್ದೆಯಲ್ಲಿ ದನಗಳು ಮೇಯುತ್ತಿದ್ದವು. ಆ ಗುಂಪಿನ ಮಧ್ಯೆ ಒಂದು ಸಿಂಹವು ಕರುಗಳೊಡನೆ ಆಟವಾಡುತ್ತಿತ್ತು. ಇದನ್ನು ಕಂಡ ಸ್ವಾಮಿಗಳು ಆನಂದ ಪುಲಕಿತರಾಗಿ, ದೇವಿಯ ವಚನವನ್ನು ಸ್ಮರಿಸಿ, ’ಈ ಕಲಿಕಾಲದಲ್ಲಿಯೂ ದೇವಿಯ ಅನುಗ್ರಹದಿಂದ ಇಂತಹ ಸನ್ನಿವೇಶವು ಉಂಟಾಗಿದೆ. ಇದರಲ್ಲಿ ಯಾವ ಸಂದೇಹವೂ ಇಲ್ಲ’ ಎಂದು ನಿಶ್ಚಯಿಸಿಕೊಂಡರು, ಅಮ್ಮನವರನ್ನು ದನಗಳು ಮೇಯುತ್ತಿದ್ದ ಈ ಗದ್ದೆಯಲ್ಲಿಯೇ ಶುಭಮಹೂರ್ತದಲ್ಲಿ ಸ್ಥಾಪಿಸಿ, ಈ ಸ್ಥಳಕ್ಕೆ ಸಿಂಹನಗದ್ದೆಯೆಂದು ಹೆಸರಿಟ್ಟಿರುವುದಾಗಿ ತಿಳಿದುಬರುತ್ತದೆ. ಅವರು ಅಲ್ಲಿಯೇ ನೆಲೆಸಿ ಧರ್ಮಪ್ರಚಾರವನ್ನು ಮಾಡುತ್ತಾ ಬಂದರು.

  • Development Works / ಅಭಿವೃದ್ಧಿ ಕಾರ್ಯಗಳು

    The present seer brought an ancient stone statue of Parshwanathaswamy adorned with 108 hooded snakes, which was lying in a dilapidated Basdi in the forests, got a new Basdi constructed by the side of Chandranatha Basdi in about 1978-79 and consecrated it at the new Basdi. In 1987, he got a sprawling conference hall called Vaishali Bhavan, adjacent to the Mutt, for the use of public. With the cooperation and assistance of devotees, he renovated another ancient and highly damaged Sri Shantinatha Basdi and completed Panchakalyana in 1983. As the old Shayotsarga Shyamavarna statue of Shantinatha Swamy was broken, the seer got a three-and-a-half ft. high white colored statue in Padmasana posture carved out and installed the same. In During the car festival of 1991, he installed a 64-ft Manastambha in front of the Basdi. Besides, in 1985 he got the ancient and dilapidated Chandranatha Swamy Basdi renovated with the help and cooperation of the devotees and installed a new three-ft.-high white statue of Chandranatha Swamy in Padmasana posture and completed the Panchakalyana. In 1988, he renovated the old Mutt again and installed the statue of Bahubali there. ಕಣಿವೆಯೆಂಬ ಕಾಡಿನಲ್ಲಿ, ಹಾಳುಬಿದ್ದ ಬಸದಿಯಿಂದ ತರಲಾದ ನೂರೆಂಟು ಫಣಿಗಳಿಂದ ಕೂಡಿದ ಪಾರ್ಶ್ವನಾಥಸ್ವಾಮಿಯ ಪ್ರಾಚೀನ ಶಿಲಾವಿಗ್ರಹವನ್ನು, 1978-79 ರಲ್ಲಿ ಚಂದ್ರನಾಥ ಬಸದಿಯ ಕಟ್ಟಡದ ಪಕ್ಕದಲ್ಲಿ ಹೊಸ ಬಸದಿಯನ್ನು ಕಟ್ಟಿ ಈಗಿನ ಶ್ರೀಗಳು ಪ್ರತಿಷ್ಠಾಪಿಸಿದರು. 1987ರಲ್ಲಿ, ಮಠದ ಪಕ್ಕದಲ್ಲಿ ವೈಶಾಲಿಭವನವೆಂಬ ವಿಶಾಲ ಸಭಾಭವನವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಕಟ್ಟಿಸಿದರು. ಅತಿ ಪುರಾತನವಾಗಿದ್ದು ಜೀರ್ಣವಾಗಿದ್ದ ಶ್ರೀಶಾಂತಿನಾಥ ಬಸದಿಯನ್ನು ಭಕ್ತರ ಸಹಕಾರದಿಂದ ಪುನನಿರ್ಮಾಣ ಮಾಡಿ, 1983ರ ಮಾರ್ಚಿಯಲ್ಲಿ ಪಂಚಕಲ್ಯಾಣವನ್ನು ನೆರವೇರಿಸಿದರು. ಹಿಂದಿನ ಶ್ಯಾಮವರ್ಣದ ಶಾಂತಿನಾಥಸ್ವಾಮಿಯ ಶಾಯೋತ್ಸರ್ಗವಿಗ್ರಹ ಭಿನ್ನವಾಗಿದ್ದ ಕಾರಣ ಹೊಸದಾಗಿ ಮೂರುವರೆ ಅಡಿ ಎತ್ತರವಿರುವ ಬಿಳಿಯವರ್ಣದ ಪದ್ಮಾಸನಮೂರ್ತಿಯನ್ನು ಸ್ಥಾಪಿಸಿದರು. 1991 ರ ರಥೋತ್ಸವದ ಸಂದರ್ಭದಲ್ಲಿ ಬಸದಿಯ ಮುಂದೆ 64 ಅಡಿ ಎತ್ತರ ಭವ್ಯ ಮಾನಸ್ತಂಭವನ್ನು ಪ್ರತಿಷ್ಠಾಪಿಸಿದರು. ಅಲ್ಲದೇ, ಪ್ರಾಚೀನವಾಗಿದ್ದು, ಜೀರ್ಣವಾಗಿದ್ದ ಚಂದ್ರನಾಥಸ್ವಾಮಿ ಬಸದಿಯನ್ನು ನೂತನವಾಗಿ ಭಕ್ತರ ಸಹಕಾರದಿಂದ ನಿರ್ಮಿಸಿ, ಶ್ವೇತವರ್ಣದ ಮೂರು ಅಡಿ ಎತ್ತರವಿರುವ ಚಂದ್ರನಾಥಸ್ವಾಮಿಯ ಪದ್ಮಾಸನ ಮೂರ್ತಿಯನ್ನು 1985 ರಲ್ಲಿ ಪ್ರತಿಷ್ಠಾಪನೆ ಮಾಡಿ, ಪಂಚಕಲ್ಯಾಣ ನೆರವೇರಿಸಿದರು.1988 ರಲ್ಲಿ ಹಳೆಯ ಮಠವನ್ನು ಪುನಃ ನಿರ್ಮಾಣ ಮಾಡಿ, ಅದರಲ್ಲಿ ಬಾಹುಬಲಿಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು.

You don't have permission to register