History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Historical background / ಐತಿಹಾಸಿಕ ಹಿನ್ನಲೆ

    In his boyhood, Lord Mahadeshwara was spiritually guided by the then pontiff of Suttur and Kunthur Mutts. The young saint is supposed to have come from Srishaila to this part of the state. The hills of Male Mahadeshwara is covered with a dense forest and surrounded by seventy-seven peaks in seven circles. It was not a safe place for human habitat. It was about six centuries ago that Lord Mahadeshwara went into the forest area to save the saints, who were performing penance and were subsequently taken captive by an evil king known as Shravana, who possessed black magic power. Apart from this, there were some tribal communities living there in small groups without the semblance of human civilization. Sri Mahadeshwara destroyed the black magic power of Shravana and released the saints, who were in his prison. The place where these saints had been kept captive is also considered to a holy place called Thavasere and the place wher e Shravana lived is called Shravana Boli. Later, Sri Mahadeshwara gave the Linga Deeksha to the people living in the seven hills namely, Anumale, Jenumale, Kanumale, Pachchemale, Pavalamale, Ponnachimale and Kongumale. Those looking after the religious and cultural affairs of the people of this area came to be identified as “ShivArchakas” of Sri Mahadeshwara temple. Earlier, the temple was under the control and management of Sri Salur Mutt established by Lord Mahadeshwara. Later, it was handed over to Madras Government in 1953. After the formation of the State of Karnataka, the administration of the temples is done by the trust committee, appointed by the Karnataka Government under the Muzrai Department. Sri Mahadeshwara is said to have transformed the lives of the people belonging to Beda and Soliga communities. He used to resolve the problems of Beda and Soluga communities through his yogic powers. He converted the people by Lingadharana as Veerashaiva philosophy and he made it mandatory that the people belonging to Bedagampana alone should perform puja and others to conduct ceremonies and religious activities. ಶ್ರೀ ಮಹದೇಶ್ವರನ ಬಾಲ್ಯದ ಗುರುಗಳು ಸುತ್ತೂರು ಹಾಗೂ ಕುಂತೂರು ಮಠದ ಅಧಿಪತಿಗಳಾಗಿದ್ದರು. ಶ್ರೀ ಮಲೆಮಹದೇಶ್ವರ ಬೆಟ್ಟವು ನಿಬಿಡವಾದ ಅರಣ್ಯದಿಂದ ಸುತ್ತುವರಿದಿದೆ. ಈ ಬೆಟ್ಟವು ೭೭ ಇತರ ಬೆಟ್ಟಗಳಿಂದ ಆವರಿಸಲ್ಪಟ್ಟಿದೆ. ಹಿಂದೆ ಈ ಸ್ಥಳವು ಮನುಷ್ಯರಿಗೆ ಜೀವಿಸಲು ಪ್ರಶಸ್ತವಾಗಿರಲಿಲ್ಲ. ಸುಮಾರು ಆರು ಶತಕಗಳಷ್ಟು ಹಿಂದಷ್ಟೇ , ಇಲ್ಲಿ ಅವಕರಿಸಿದ ಶ್ರೀ ಮಲೆಮಹದೇಶ್ವರನು ಇಲ್ಲಿ ತಪಸ್ಸನ್ನು ಆಚರಿಸುತ್ತಿದ್ದ ಋಷಿ ಮುನಿಗಳನ್ನು . ಶ್ರವಣಾಸುರನೆಂಬ ಒಬ್ಬ ಕ್ರೂರ ರಕ್ಕಸನ ಉಪಟಳದಿಂದ ರಕ್ಷಿಸುವ ಮಹತ್ಕಾರ್ಯವನ್ನು ಕೈಗೊಂಡನು. ಶ್ರವಣಾಸುರನು ವಾಸಿಸುತ್ತಿದ್ದ ಸ್ಥಳವನ್ನು ಶ್ರವಣಬೊಳಿ ಎಂದು ಗುರುತಿಸಲಾಗಿದೆ. ತಾಪಸಿಗಳನ್ನು ಶ್ರವಣಾಸುರನು ಬಂಧಿಸಿಟ್ಟಿದ್ದ ಸ್ಥಳವನ್ನು ತವಸೆರೆ ಎಂದು ಕರೆಯಲಾಗುತ್ತಿತ್ತು. ಮುಂದೆ, ಶ್ರೀ ಮಲೆ ಮಹದೇಶ್ವರನು ಗುಡ್ಡಗಾಡಿನಲ್ಲಿ ವಾಸಿಸುತ್ತಿದ್ದ ಜನಗಳಿಗೆ ಲಿಂಗ ದೀಕ್ಷೆಯನ್ನು ನೀಡಿ, ಅವರನ್ನು ವೀರಶೈವ ಮತಾನುಯಾಯಿಗಳಾಗಿ ಪರಿವರ್ತಿಸಿದನೆಂದು ತಿಳಿದುಬರುತ್ತದೆ. ಲಿಂಗದೀಕ್ಷೆಯನ್ನು ಪಡೆದ ಕುಟುಂಬಗಳ ಸದ್ಯಸರೇ ಇಂದಿಗೂ ಶ್ರೀ ಮಲೆಮಹದೇಶ್ವರ ಬೆಟ್ಟದಲ್ಲಿ ಶಿವಾರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದೆ ಶ್ರೀ ಸುತ್ತೂರು ಮಠದ ಆಡಳಿತಕ್ಕೊಳಪಟ್ಟಿದ್ದ ಶ್ರೀ ಮಲೆ ಮಹದೇಶ್ವರ ದೇವಸ್ಥಾನವು ೧೯೫೩ರಲ್ಲಿ ಅಂದಿನ ಮದ್ರಾಸ್ ಸರ್ಕಾರಕ್ಕೆ ವರ್ಗಾಯಿಸಲ್ಪಟ್ಟಿತು. ಕರ್ನಾಟಕ ರಾಜ್ಯದ ಸ್ಥಾಪನೆಯಾದ ನಂತರ ಕರ್ನಾಟಕ ಸರ್ಕಾರವು ನೇಮಿಸುವ ಸಮಿತಿಯು ಶ್ರೀ ಮಲೆ ಮಹದೇಶ್ವರ ದೇವಾಲಯದ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಶ್ರೀ ಮಲೆ ಮಹದೇಶ್ವರನು ಅನುಮಲೆ, ಜೀನುಮಲೆ, ಕಣುಮಲೆ, ಪಚ್ಚೆಮಲೆ, ಪವಳಮಲೆ, ಪೊನ್ನಾಚಿಮಲೆ ಮತ್ತು ಕೊಂಗು ಮಲೆಗಳೆಂಬ ಏಳು ಬೆಟ್ಟಗಳಲ್ಲಿ ವಾಸಿಸುತ್ತಿದ್ದ ಬೇಡ ಹಾಗೂ ಸೋಳಿಗ ಜನಾಂಗದವರ ಜೀವನ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿದನು. ಲಿಂಗದೀಕ್ಷೆಯನ್ನು ಪಡೆದಿರುವ ಇತರರು ದೇವಾಲಯದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸಬೇಕೆಂದು ಶ್ರೀ ಮಲೆ ಮಹದೇಶ್ವರನು ನಿರ್ದೇಶಿಸಿರುವನೆಂದು ತಿಳಿದುಬರುತ್ತದೆ.

  • Puranic background / ಪೌರಾಣಿಕ ಹಿನ್ನಲೆ

    The temple of Sri Mahadeshwara is located in a range of hills known as Madayyanagiri or Mahadeshwara Hills. Sri Male Mahadeshwara Kshetra is at 3,000 ft. above sea-level and it is surrounded by 77 hills, including the hillocks identified as Anumale, Pachchemale and Ponnachimale, which are considered as sacred. Kaveri River flows in close proximity, rendering the place to be serene, sublime and enthralling. The area of the present temple surroundings is 155.57 acres (0.6296 km). In addition, the temple has lands at Talabetta, Haleyuru and Indiganatha villages. Amidst dense forests, the temple is not only a renowned pilgrim centre but also a splendored tourist spot. ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನವು ಮಾದಯ್ಯನಗಿರಿ ಅಥವಾ ಮಹದೇಶ್ವರ ಎಂಬ ಬೆಟ್ಟದ ಮೇಲಿದೆ. ಸಮುದ್ರ ಮಟ್ಟಕ್ಕಿಂತ ಸುಮಾರು 3000 ಅಡಿಗಳಷ್ಟು ಮೇಲಿರುವ ಶ್ರೀ ಮಹದೇಶ್ವರ ದೇವಸ್ಥಾನವು 77 ಬೆಟ್ಟಗಳ ಸಾಲಿನಲ್ಲಿರುವುದೊಂದು ವಿಶೇಷ ಸಂಗತಿ. ಅನುಮಲೆ, ಪಚ್ಚೆಮಲೆ, ಪೊನ್ನಾಚಿಮಲೆ ಎಂಬುವು ಈ 77 ಬೆಟ್ಟಗಳಲ್ಲಿ ಹೆಚ್ಚು ಪ್ರಸಿದ್ಧವಾಗಿವೆ. ಈ ಬೆಟ್ಟದ ಸಾಲಿನ ಸನಿಹದಲ್ಲಿ ಹರಿಯುತ್ತಿರುವ ಕಾವೇರಿ ನದಿಯು ಈ ಸ್ಥಳಕ್ಕೆ ವಿಶೇಷ ಮೆರುಗನ್ನು ನೀಡಿದೆ. ಪ್ರಸ್ತುತ ಶ್ರೀ ಮಲೆಮಹದೇಶ್ವರ ದೇವಸ್ಥಾನದ ಸುತ್ತಲಿರುವ ಪ್ರದೇಶದ ವಿಸ್ತೀರ್ಣ 155.57 ಎಕರೆ ( 0.626 ಕಿ. ಮೀ ) ಯಷ್ಟಿದೆ. ಅಲ್ಲದೆ ಹತ್ತಿರದಲ್ಲಿರುವ ಕಾಳಬೆಟ್ಟ , ಹಳೆಯೂರು ಮತ್ತು ಇಂದಿಗನಾಥ ಗ್ರಾಮಗಳಲ್ಲಿ ಈ ದೇವಾಲಯದ ಸ್ವಾಮ್ಯದಲ್ಲಿರುವ ಭೂಮಿಗಳಿವೆ ಎಂದು ಹೇಳಲಾಗುತ್ತದೆ. ನಿತ್ಯ ಹರಿದ್ವರ್ಣದ ದಟ್ಟಕಾಡಿನ ಪ್ರದೇಶಗಳಿಂದ ಕೂಡಿರುವ ಶ್ರೀ ಮಲೆಮಹದೇಶ್ವರ ದೇವಾಲಯವು ಶಿವಭಕ್ತರಲ್ಲದೇ , ನಿಸರ್ಗಪ್ರಿಯ ಪ್ರವಾಸಿಗಳನ್ನು ಆಕರ್ಷಿಸುತ್ತದೆ.

You don't have permission to register