History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Nageshwara Temple - Begur  >  History
  • Historical background / ಐತಿಹಾಸಿಕ ಹಿನ್ನೆಲೆ

    From inscriptions, it is known that Begur was once called Veppur, and Kelele (in Western Ganga King Durvinita's Mollahalli grant inscription of 580-625 C.E.). Two shrines within the temple complex, the Nageshvara and Naganatheshvarasvami were commissioned during the rule of Western Ganga Dynasty Kings Ereyappa Nitimarga I (also called Ereganga Neetimarga, r. 843-870) and Ereyappa Nitimarga II (also called Ereganga Neetimarga II, r. 907-921). The remaining shrines are considered a later day legacy of the rule of the Chola Dynasty over the region. ದೇವಸ್ಥಾನಕ್ಕೆ ಸಂಬಂಧಿಸಿದ ಶಾಸನಗಳ ಪ್ರಕಾರ, ಬೇಗೂರನ್ನು ವೆಪ್ಪೂರು ಹಾಗು ಕೆಳೆಲೆ (ಪಶ್ಚಿಮ ಗಂಗಾ ರಾಜನಾದ ದುರ್ವಿನೀತನ, 580 - 625 ಕ್ರಿ ಶ ಯ, ಮೊಲ್ಲಹಳ್ಳಿ ಅನುದಾನ ಶಾಸನದಲ್ಲಿ) ಎಂದು ಕರೆಯಲಾಗುತ್ತಿತ್ತೆಂದು ತಿಳಿಯುತ್ತದೆ. ದೇವಸ್ಥಾನದ ಸಂಕೀರ್ಣದೊಳಗಿರುವ ಶ್ರೀ ನಾಗೇಶ್ವರ ಹಾಗು ಶ್ರೀ ನಾಗನಾಥೇಶ್ವರಸ್ವಾಮಿ ದೇವಾಲಯಗಳನ್ನು ಪಶ್ಚಿಮ ಗಂಗರ ರಾಜರಾದ ಮೊದಲನೇ ಎರೆಯಪ್ಪ ನೀತಿಮಾರ್ಗ ಮತ್ತು ಎರಡನೇ ಎರೆಯಪ್ಪ ನೀತಿಮಾರ್ಗರ ಆಡಳಿತದ ಕಾಲದಲ್ಲಿ ಕ್ರಮೇಣವಾಗಿ ನಿರ್ಮಿಸಲಾಗಿದೆ ಎಂದು ತಿಳಿದುಬರುತ್ತದೆ. ದೇವಸ್ಥಾನ ಸಂಕೀರ್ಣದಲ್ಲಿರುವ ಉಳಿದ ದೇವಾಲಯಗಳು ನಂತರ ಬಂದ ಚೋಳ ಸಾಮ್ರಾಜ್ಯದ ಕೊಡುಗೆಗಳಾಗಿವೆ.

  • Temple Architecture / ದೇವಾಲಯದ ವಿನ್ಯಾಸ

    Sri Nageshwara temple / ಶ್ರೀ ನಾಗೇಶ್ವರ ದೇವಸ್ಥಾನ The Nageshvara temple has a simple square sanctum (garbhagriha), a vestibule (antarala) that connects the sanctum to a "great closed hall" (maha-mantapa or navaranga) which leads to an open hall (agra-mantapa). The entrance to the open hall is via balustraded steps in the south-west and north-west corners. The sanctum has a linga, the universal symbol of Lord Shiva with an image of Nandi (vehicle or vahana of Lord Shiva) placed on a "lotus platform" (padma-pitha) in the open hall. The ceiling in the closed hall (navaranga) has the characteristic Western Ganga artistic touch, the eight panel sculptures in a square grid (called the ashta-dik-palaka). The ceiling of the open hall also has the grid sculptures with a seated image of Shiva and Parvati in the centre. Other sculptures kept in the hall include Mahishasuramardini (a form of the goddess Durga), a unique two handed Ganesh, Kalabhairava (a form of Shiva) and an image of Gajalakshmi (a form of the goddess Lakshmi with elephants on either side). ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಸರಳವಾದ ಚೌಕಾಕಾರದ ಗರ್ಭಗೃಹವಿದ್ದು, ಈ ಗರ್ಭಗೃಹದಿಂದ, ಅಗ್ರಮಂಟಪಕ್ಕೆ ಕೂಡುವ ನವರಂಗ ಮಂಟಪಕ್ಕೆ, ಅಂತರಾಳವನ್ನು ಹೊಂದಿದೆ. ಈ ಅಗ್ರಮಂಟಪಕ್ಕೆ ಪ್ರವೇಶಿಸಲು ನೈಋತ್ಯ ಹಾಗೂ ವಾಯುವ್ಯ ಭಾಗಗಳಲ್ಲಿ ಮೆಟ್ಟಿಲುಗಳಿದ್ದು ಇದರ ಇಕ್ಕೆಲೆಗಳಲ್ಲಿ ಕಟ್ಟೆಗಳಿವೆ. ದೇವಾಲಯದ ಗರ್ಭಗೃಹದಲ್ಲಿ ಶಿವಲಿಂಗವಿದ್ದು, ಅಗ್ರಮಂಟಪದಲ್ಲಿ ಒಂದು ಪದ್ಮ ಪೀಠದ ಮೇಲೆ ಶಿವನ ವಾಹನನಾದ ನಂದಿಯ ಪ್ರತಿಮೆಯಿದೆ. ನವರಂಗ ಮಂಟಪದ ತಾರಸಿಯು ಪಶ್ಚಿಮಗಂಗರ ವಿಶಿಷ್ಟ ಕಲಾಕೃತಿಯಾದ ಅಷ್ಟದಿಕ್ಪಾಲಕರ ಚಿತ್ರಗಳಿವೆ. ಅಗ್ರ ಮಂಟಪದ ತಾರಸಿಯ ಮೇಲೂ ವಿವಿಧ ಚಿತ್ರಗಳಿದ್ದು, ಮಧ್ಯ ಭಾಗದಲ್ಲಿ, ಕುಳಿತಿರುವ ಶಿವ-ಪಾರ್ವತಿಯರ ಚಿತ್ರವಿದೆ. ಇಲ್ಲಿ, ಮಹಿಷಾಸುರಮರ್ದಿನಿ, ಎರಡು ಕೈಯುಳ್ಳ ಗಣೇಶ, ಕಾಲಭೈರವ ಹಾಗು ಗಜ ಲಕ್ಷ್ಮಿಯರ ಚಿತ್ರಗಳೂ ಇವೆ.

  • Sri Nageshwaraswamy temple / ಶ್ರೀ ನಾಗೇಶ್ವರಸ್ವಾಮಿ ದೇವಸ್ಥಾನ

    The Nageshvarasvami temple, also a Western Ganga construction, faces east, has a square plan for the sanctum, a vestibule, an open hall, a detached hall called mukha-mantapa. An image of Nandi is placed in the mukha-mantap making it serve the purpose of a Nandi-mantapa (Nandi hall). The base of the entrance (dvara) is flanked by niches with images of Ganga-Yamuna figures with attendant ladies. This appears to be a Chalukya-Rashtrakuta influence. ಪೂರ್ವಾಭಿಮುಖವಾಗಿರುವ ಶ್ರೀ ನಾಗೇಶ್ವರಸ್ವಾಮಿ ದೇವಾಲಯವು ಪಶ್ಚಿಮ ಗಂಗರ ನಿರ್ಮಾಣವಾಗಿದ್ದು, ಚೌಕಾಕಾರದ ಗರ್ಭ ಗೃಹ, ಅಂತರಾಳ, ಅಗ್ರ ಮಂಟಪ ಹಾಗೂ ಪ್ರತ್ಯೇಕವಾದ ಮುಖಮಂಟಪಗಳನ್ನು ಹೊಂದಿದೆ. ಈ ಮುಖಮಂಟಪದಲ್ಲಿ ನಂದಿಯ ಪ್ರತಿಮೆಯು ಇರುವುದರಿಂದ, ಇದನ್ನು ನಂದಿಮಂಟಪವೆಂದೂ ಕರೆಯುತ್ತಾರೆ. ದ್ವಾರದ ಅಡಿಯಲ್ಲಿ, ಚಾಲುಕ್ಯ ಹಾಗು ರಾಷ್ಟ್ರಕೂಟರ ಪ್ರಭಾವದ ದ್ಯೋತಕವಾದ, ಅನುಚಾರಿಣಿಯರ ಸಹಿತವಾದ ಗಂಗಾ ಮತ್ತು ಯಮುನೆಯರ ಚಿತ್ರಗಳಿವೆ.

You don't have permission to register