Smt. Kamalamma and Sri. Ramappa possessed a Goshala at the current premises. By the instructions of Sri Guru Raghavendrayaru in their dream, the couple consecrated the mrithika Brundavana in the Goshala. The mrithika Brundavana of Guru Raghavendra Rayaru was consecrated on 8th Feb 1992 by Sri Vignana Nidhigalu of Sripadaraja Matha and Sri Sushumindra Theertharu of Raayara Matha. The couples after a decade donated the Matha to Sripadaraja Matha. Since 15 years, Sripadaraja Matha has been governing this religious institute.
ಶ್ರೀಮತಿ ಕಮಲಮ್ಮ ಮತ್ತು ಶ್ರೀಯುತ ರಾಮಪ್ಪ ದೇವಸ್ಥಾನ ಕಟ್ಟುವ ಮೊದಲು ಆ ಜಾಗದಲ್ಲಿ ಅವರೇ ಕಟ್ಟಿಸಿದ ಗೋಶಾಲೆ ಇತ್ತು. ಒಮ್ಮೆ ಶ್ರೀ ಗುರುಸಾರ್ವಭೌಮರು ದಂಪತಿಗಳ ಸ್ವಪ್ನದಲ್ಲಿ ಬಂದು ಈಗಿರುವ ಗೋಶಾಲೆಯಲ್ಲಿ ನನ್ನನ್ನು(ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನವನ್ನು) ಪ್ರತಿಷ್ಠಾಪಿಸು ಎಂದು ಆದೇಶ ನೀಡಿದರಂತೆ. ಸ್ವಪ್ನ ಬಿದ್ದಂತೆ ದಂಪತಿಗಳು ದಿನಾಂಕ 08.02.1992 ರಲ್ಲಿ ಶ್ರೀಪಾದರಾಜರ ಮಠದ ಯತಿಗಳಾದ ಶ್ರೀ ವಿಜ್ಞಾನನಿಧಿ ತೀರ್ಥರು ಮತ್ತು ಶ್ರೀ ರಾಘವೇಂದ್ರ ಸ್ವಾಮಿ ಮಠದ ಯತಿಗಳಾದ ಶ್ರೀ ಸುಶುಮಿಂದ್ರತೀರ್ಥ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಿದರು.
ನಿರಂತರವಾಗಿ ೧೦ವರ್ಷಗಳ ಕಾಲ ರಾಯರ ಸೇವೆಯನ್ನು ನಿಷ್ಠೆಯಿಂದ ಮಾಡಿ ಈ ಸನ್ನಿಧಾನವನ್ನು ಶ್ರೀ ಶ್ರೀಪಾದರಾಜರ ಮಠಕ್ಕೆ ದಾನವನ್ನಾಗಿ ನೀಡಿದರು. ತರುವಾಯ ಶ್ರೀಪಾದರಾಜರ ಮಠವು ೧೫ವರ್ಷಗಳ ಕಾಲ ಮಠದ ಆಡಳಿತವನ್ನು ನೋಡಿಕೊಳ್ಳುತ್ತ ಬಂದಿದೆ.