Devarayanadurga is a hill station near Tumkur in the state of Karnataka in India. The rocky hills are surrounded by forest and the hilltops are dotted with several temples including the Yoganarasimha and the Bhoganarasimha temples and an altitude of 3940 feet. It is also famous for Namada Chilume, a natural spring considered sacred and is also considered the origin of the Jayamangali and Shimsha rivers. Another famous temple in the area is the Mahalakshmi Temple at Goravanahalli.
ದೇವರಾಯನದುರ್ಗವು ತುಮಕೂರಿನ ಬಳಿಯಿರುವ ಒಂದು ಬೆಟ್ಟವಾಗಿದೆ. ಈ ಬೆಟ್ಟವು ಸುತ್ತಲೂ ಕಾಡಿನಿಂದ ಆವೃತವಾಗಿದ್ದು, ಬೆಟ್ಟದ ಮೇಲೆ ಹಲವು ದೇವಸ್ಥಾನಗಳನ್ನು ಕಾಣಬಹುದಾಗಿದೆ. ಈ ಬೆಟ್ಟವು ಸುಮಾರು 3940 ಅಡಿ ಎತ್ತರವಿದ್ದು, ಶ್ರೀ ಯೋಗ ಮತ್ತು ಭೋಗ ನರಸಿಂಹ ಸ್ವಾಮಿ ದೇಗುಲಗಳಿಂದಾಗಿ ಪ್ರಸಿದ್ದಿ ಪಡೆದಿದೆ. ಈ ಬೆಟ್ಟವು ಪವಿತ್ರ ನೈಸರ್ಗಿಕ ಚಿಲುಮೆಯಾದ ನಾಮದ ಚಿಲುಮೆಯಿಂದಾಗಿಯೂ ಪ್ರಸಿದ್ದಿ ಪಡೆದಿದೆ. ಈ ಚಿಲುಮೆಯು ಜಯಮಂಗಲಿ ಮತ್ತು ಷಿಂಷಾ ನದಿಗಳ ಉದ್ಭವ ಸ್ಥಾನ ಎಂದು ಹೇಳಲಾಗುತ್ತದೆ. ಗೊರವನಹಳ್ಳಿಯ ಶ್ರೀ ಮಹಾಲಕ್ಷಿ ದೇವಸ್ಥಾನವು ಇಲ್ಲಿನ ಮತ್ತೊಂದು ಪ್ರಮುಖ ದೇವಾಲಯವಾಗಿದೆ.
Goravanhalli Lakshmi temple / ಗೊರವನಹಳ್ಳಿ ಲಕ್ಷ್ಮಿದೇವಿ ದೇವಸ್ಥಾನ
Goravanahalli Mahalakshmi temple is a famous religious place for tourists and is in the Koratagere taluk of Tumkur district. This temple attracts a very large number of pilgrims and lies at 8 Kms from Tumkur. The idol of Shri Mahalakshmi here, is considered as self-originated.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿರುವ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನವು ಒಂದು ಪ್ರಮುಖ ಯಾತ್ರಾ ಸ್ಥಳವಾಗಿದೆ. ಇದು ತುಮಕೂರಿನಿಂದ 8 ಕಿ ಮೀ ದೂರದಲ್ಲಿದ್ದು, ದೊಡ್ಡ ಸಂಖ್ಯೆಯ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಇಲ್ಲಿರುವ ಶ್ರೀ ಮಹಾ ಲಕ್ಷ್ಮಿಯ ಮೂರ್ತಿಯು ಸ್ವಯಂ ಉದ್ಭವವೆಂದು ನಂಬಲಾಗಿದೆ.
Siddaganga Kshetra / ಸಿದ್ದಗಂಗಾ ಕ್ಷೇತ್ರ
Sri Siddaganga Kshetra is at 6 km from Tumakuru city. As the Mutt here provides free food, education and boarding, the place is become famous as the “place of three types of Dasoha”. The said facilities are given to around 10, 000 students daily. The mutt’s swamiji, Dr. Shri Shivakumara Swamy, has been accorded the prestigious honor of Karnataka Ratna (Diamond of Karnataka).
ಶ್ರೀ ಸಿದ್ಧಗಂಗಾ ಕ್ಷೇತ್ರವು ತುಮಕೂರು ನಗರದಿಂದ ಸುಮಾರು ಆರು ಕಿ.ಮೀ ದೂರದಲ್ಲಿದೆ. ಊಟ, ವಿದ್ಯೆ ಮತ್ತು ವಸತಿಯ ಉಚಿತ ವ್ಯವಸ್ಥೆ ಇದ್ದು, ಇದೇ ಕಾರಣದಿಂದ ತ್ರಿವಿಧ ದಾಸೋಹದ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ. ಸುಮಾರು ಹತ್ತು ಸಾವಿರ ಮಕ್ಕಳಿಗೆ ತ್ರಿವಿಧ ದಾಸೋಹ ಕಾರ್ಯ ನಡೆಯುತ್ತಿದೆ. ಕರ್ನಾಟಕ ರತ್ನ ಪ್ರಶಸ್ತಿಯನ್ನು, ಇಲ್ಲಿಯ ಪೀಠಾಧಿಪತಿಗಳಾಗಿರುವ, ಡಾ|ಶ್ರೀ ಶಿವಕುಮಾರ ಸ್ವಾಮಿಗಳವರಿಗೆ ನೀಡಲಾಗಿದೆ.