Nearby Places - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temples  >  Sri Mahaganapati Temple - Malleshwaram  >  Near by Places</span
  • Sri Venugopalakrishnaswamy Temple /ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಸ್ಥಾನ

    Sri Venugopala Krishnaswamy Temple is located in Malleswaram between the 10th and 11th Cross. The presiding deity at this temple was consecrated on August 22, 1902 by residents of Malleswaram including Sri Setlur Venkataranga Iyengar, Sri Rao Bahadur Narasimhachar, Prof. M.T. Narayana Iyengar, Sri H.S. Krishna Iyengar, Sri Kalki Narasimhachar and Sri S.K. Venkataranga Iyengar. ಮೈಸೂರು ಜಿಲ್ಲೆಯ ಸಮೀಪವಿರುವ ಕೂಡಲೂರು ಗ್ರಾಮದಲ್ಲಿ ಇರುವ ಶಿಥಿಲವಾದ ದೇವಾಲಯದಿಂದ ತಂದಿರುವ ಮೂರ್ತಿಯೇ ಶ್ರೀವೇಣುಗೋಪಾಲ ಕೃಷ್ಣ ಸ್ವಾಮಿಯಾಗಿರುತ್ತದೆ. ಈ ಮೂರ್ತಿಯನ್ನು ಮೈಸೂರಿನ ಅರಮನೆಗೆ ತಂದು ನಾಲ್ವಡಿ ಶ್ರೀ ಕೃಷ್ಣ ರಾಜ ಒಡೆಯರ್‍ರವರು ಶಾಲಿವಾಹನ ಶಕೆ 1824 ಕ್ರ.ಶ 1902 ಆಗಸ್ಟ್‍ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನ ಈಗಿನ ಸ್ಥಾನದಲ್ಲಿ ಆ ಶ್ರೀ.ಪಿ.ಎನ್.ಪೂರ್ಣಯ್ಯರವರ ನೇತೃತ್ವದಲ್ಲಿ ಈ ದೇವಾಲಯವನ್ನು ನಿರ್ಮಿಸಿ ಪ್ರತಿಷ್ಟಾಪಿಸಿರುತ್ತಾರೆ.

  • Sri Raghavendra Anjaneya Temple / ಶ್ರೀ ರಾಘವೇಂದ್ರ ಆಂಜನೇಯ ದೇವಸ್ಥಾನ

    Sri Raghavendra Anjaneya Temple is situated on 8th Cross, Malleshwaram. This temple was built in 1909. Pontiff Sri Sudheendra Tirtha Swamy, pontiff of Sri Puttige Mutt, which is one of the Udupi Ashta Mutts, consecrated the idol of Sri Anjaneya. Sri Vidyamanya Tirtharu of Sri Bhandarakere Mutt and Sri Visvesha Tirtharu of Sri Pejavar Mutt had graced the occasion. ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಸನ್ನಿಧಿಯು 1909 ರಲ್ಲಿ ಆಗಿನ ಪುತ್ತಿಗೆ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸುಧೀಂದ್ರ ತೀರ್ಥ ಶ್ರೀಪಾದಂಗಳವರಿಂದ ಪುನ: ಪ್ರತಿಷ್ಟಾಪಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿ ಶಿಲಾ ಫಲಕವೇ ಇದಕ್ಕೆ ಸಾಕ್ಷಿಯಾಗಿರುತ್ತದೆ. ಈ ಹಿಂದೆ ಈ ಸನ್ನಿಧಿಯು ಯಾವ ಪೂಜಾದಿಗಳು, ಸಂಸ್ಕಾರಗಳಿಲ್ಲದ ಕಾರಣ ಶ್ರೀ ಸ್ವಾಮಿಗಳ ಪ್ರೇರಣೆ ಮೇರೆಗೆ ಆ ಸನ್ನಿಧೀಗೆ ಗರ್ಭ ಗೃಹವನ್ನು ನಿರ್ಮಿಸಿ, ಸಂಸ್ಕಾರದೊಂದಿಗೆ ಪುನ: ಭಕ್ತರ ಸೇವೆಗೆ ಅವಕಾಶವನ್ನು ನೀಡಿರುತ್ತಾರೆ. ಈ ಸನ್ನಿಧಿಯ ವಿಶಾಲವಾದ ಪ್ರದೇಶದಲ್ಲಿ 1945 ನೇ ಇಸವಿಯಲ್ಲಿ ಶ್ರೀ ಸುಬ್ಬರಾವ್ ಅಣ್ಣಾಜಿರಾವ್ ಇವರು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳವರ ಸೇವೆ ಮಾಡಿ ತನ್ನ ತೊಂದರೆಯನ್ನು ನಿವಾರಿಸಿಕೊಟ್ಟಿರುವ ಬಗ್ಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದ ಕಾರಣ ಮಂತ್ರಾಲಯದಿಂದ ಶ್ರೀ ರಾಯರ ಮೃತ್ತಿಕೆಯನ್ನು ಕಾಲ್ನಡಿಗೆುಂದ ಬೆಂಗಳೂರು ನಗರಕ್ಕೆ ತಂದು ಈ ಪ್ರದೇಶದಲ್ಲಿ ಅಂದು ತಂತ್ರಸಾರಾಗಮ ರೀತ್ಯಾ ಪ್ರತಿಷ್ಟೆ ಮಾಡಿರುತ್ತಾರೆ. ಅ ದಿನದಿಂದ ಈ ಸನ್ನಿಧಿಗೆ ಶ್ರೀ ರಾಘವೇಂದ್ರ ಆಂಜನೇಯ ಸ್ವಾಮಿ ದೇವಸ್ಥಾನವೆಂದು ಕರೆಯಲಾಗುತ್ತದೆ.

You don't have permission to register

Enquiry

ENQUIRY