Nearby Places - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
Home  >  Temples  >  Sri Raghavendra Swamy Mutt-Jayanagar  >  Near by Places</span
 • Sri Tirumalagiri Lakshmi Venkateshwara Devasthanam / ಶ್ರೀ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಂ

  Sri Tirumalagiri Lakshmi Venkateshwara temple is at 2 km from Sri Raghavendra Swamy Mutt. Here, a 13 feet high idol of Lord Venkateshwara has been consecrated. Idols of Sri Mahalakshmi Devi, Sri Yoga Narasimha Swamy, Sri Ranganatha Swamy, Sri Anjaneya Swamy and Sri Ganapati have also been consecrated in the premises of the temple. ಶ್ರೀ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನವು ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ 2 ಕಿ ಮೀ ದೂರದಲ್ಲಿದೆ. ಇಲ್ಲಿ, 13 ಅಡಿ ಎತ್ತರವಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಇದಲ್ಲದೆ, ಶ್ರೀ ಮಹಾಲಕ್ಷ್ಮಿ ದೇವಿ, ಶ್ರೀ ಯೋಗ ನರಸಿಂಹ ಸ್ವಾಮಿ, ಶ್ರೀ ರಂಗನಾಥ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ವಿನಾಯಕ ಸ್ವಾಮಿಗಳ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ.

 • Poornaprajna Vidyapeetha / ಪೂರ್ಣಪ್ರಜ್ಞ ವಿದ್ಯಾಪೀಠ

  Sri Poornaprajna Vidyapeetha is off the Kathriguppe Main Road in Bengaluru and is at 4.5 km from Sri Raghavendra Swamy Mut. The Srikrishna Temple on the premises of Sri Vidyapeetha has been a centre of attraction. On the right side of the presiding deity Sri Krishna, are the idols of Acharya Sri Madhwa and Sri Vadiraja of Sode Mutt. On the left of Sri Krishna is the picturesque Brindavan of Sri Raghavendraswamy. Outside the main temple and to the right side, as one faces the presiding deity, is a Ganesh Temple. ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠವು ಬೆಂಗಳೂರಿನ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿದ್ದು, ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ 4.5 ಕಿ ಮೀ ದೂರದಲ್ಲಿದೆ. ಶ್ರೀ ವಿದ್ಯಾಪೀಠದ ಅಂಗಳದಲ್ಲಿರುವ ಶ್ರೀಕೃಷ್ಣನ ದೇವಸ್ಥಾನವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಮುಖ್ಯದೇವರಾದ ಶ್ರೀಕೃಷ್ಣನ ಸುಂದರ ವಿಗ್ರಹದ ಬಲಪಕ್ಕದಲ್ಲಿ ಶ್ರೀ ಮಧ್ವಾಚಾರ್ಯರ ಹಾಗೂ ಸೋದೆ ಮಠದ ಶ್ರೀ ವಾದಿರಾಜರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀಕೃಷ್ಣನ ವಿಗ್ರಹದ ಎಡಭಾಗದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಸುಂದರ ಬೃಂದಾವನವನ್ನು ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನದ ಹೊರಗಡೆ, ಮುಂಬಾಗಿಲಿನ ಬಲಪಕ್ಕದಲ್ಲಿ ಶ್ರೀ ವಿನಾಯಕನ ದೇಗುಲವಿದೆ.

 • Sri Banashankari Amma Temple / ಶ್ರೀ ಬನಶಂಕರಿ ಅಮ್ಮ ದೇವಸ್ಥಾನ

  Sri Banashankari Amma Temple is off Kanakapura Road and is at a distance of 2.5 km from Sri Raghavendra Swamy Mutt. Bana in colloquial language means Vana or forest and Shankari means the wife of Shankara or Goddess Parvati. Needless to mention, Sri Banashankari Temple is dedicated to Goddess Parvati. Most significant feature of the temple is that the deity is worshiped during Rahukala, an inauspicious time for Hindus. Special puja is performed on Tuesday, Friday and Sundays. ಶ್ರೀ ಬನಶಂಕರಿ ಅಮ್ಮನವರ ದೇವಾಲಯವು ಕನಕಪುರ ರಸ್ತೆಯಲ್ಲಿದ್ದು ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ 2.5 ಕಿ ಮೀ ದೂರದಲ್ಲಿದೆ. ಆಡು ಭಾಷೆಯಲ್ಲಿ ಬನ ಎಂದರೆ ಕಾಡು ಎಂದು ಹಾಗೂ ಶಂಕರಿ ಎಂದರೆ ಶಂಕರನ ಮಡದಿ ಅಥವ ಪಾರ್ವತಿ ಎಂದು ಅರ್ಥ ಬರುತ್ತದೆ. ಹಾಗೆಯೇ, ಬನಶಂಕರಿ ದೇವಾಲಯದ ಆರಾಧ್ಯ ದೈವವೂ ಪಾರ್ವತಿ ದೇವಿಯೇ. ಈ ದೇವಾಲಯದ ಪ್ರಮುಖ ವೈಶಿಷ್ಟ್ಯವೆಂದರೆ, ದೇವಿಯ ಪೂಜೆಯನ್ನು, ಹಿಂದೂ ಸಂಪ್ರದಾಯದಲ್ಲಿ ಅಮಂಗಳ ಎಂದು ಪರಿಗಣಿಸುವ ರಾಹುಕಾಲದಲ್ಲಿ ಮಾಡಲಾಗುತ್ತದೆ. ಮಂಗಳವಾರ, ಶುಕ್ರವಾರ ಹಾಗೂ ಭಾನುವಾರಗಳಂದು ವಿಶೇಷ ಪೂಜೆಗಳು ನಡೆಯುತ್ತವೆ.

 • Ragigudda Sri Prasanna Anjaneya temple / ರಾಗಿಗುಡ್ಡ ಶ್ರೀ ಪ್ರಸನ್ನ ಆಂಜಿನೇಯ ದೇವಸ್ಥಾನ

  The Ragigudda Sri Anjaneya temple is at about 1.5 km from Sri Raghavendra Swamy Mutt. In the Ragigudda Sri Anjaneya temple, idols of Shivalinga, Rama, Sita, Lakshmana and Hanuman have been consecrated. There is a small temple dedicated to Lord Ganesha, Navagrahas and Rajarajeshwari at foothill. According to a legend, the hillock was formed from a heap of Millets, which means Ragi in colloquial language and hence the name Ragigudda. ರಾಗಿಗುಡ್ಡ ಆಂಜನೇಯ ದೇವಸ್ಥಾನವು ರಾಘವೇಂದ್ರ ಸ್ವಾಮಿ ಮಠ ದಿಂದ 1.5 ಕಿ ಮೀ ದೂರದಲ್ಲಿದೆ. ಇಲ್ಲಿ, ಶಿವಲಿಂಗ, ರಾಮ, ಸೀತ, ಲಕ್ಷ್ಮಣ ಮತ್ತು ಹನುಮಂತನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಗುಡ್ಡದ ಬುಡದಲ್ಲಿ ಗಣೇಶ, ನವಗ್ರಹಗಳು ಮತ್ತು ರಾಜರಾಜೇಶ್ವರಿಗೆ ಸಣ್ಣ ದೇವಾಲಯವನ್ನು ನಿರ್ಮಿಸಲಾಗಿದೆ. ಒಂದು ದಂತ ಕಥೆಯ ಪ್ರಕಾರ ಈ ಗುಡ್ಡವು ರಾಗಿಯ ರಾಶಿಯಿಂದ ನಿರ್ಮಾಣವಾಯಿತೆಂದು, ಅದಕ್ಕಾಗಿಯೇ ರಾಗಿಗುಡ್ಡ ಎಂದು ಹೆಸರು ಬಂದಿತೆಂದು ಹೇಳಲಾಗುತ್ತದೆ.

You don't have permission to register

Enquiry

[contact-form-7 404 "Not Found"]