Sri Raghavendra Swamy Mutt-Jayanagar - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

Sri Raghavendra Swamy Mutt-Jayanagar

About Temple

Sri Raghavendra Swamy Mutt – Jayanagar V Block in Bangalore | NSRS Mutt – Jayanagar

Sri Raghavendra Swamy Mutt at Jayanagar V Block in Bangalore (NSRS Mutt – Jayanagar) has been a pilgrim centre for several devotees that is a part of Nanajanagudu Sri Raghavendra Swamy Mutt institutions and has been established with the holy soil brought from the Original Brundavan of Sri Raghavendra Swamy at Mantralaya and consecrated there. Needless to mention, the devotees are bestowed with similar blessings and realisation of sane desires at the NSRS Mutt- Jayanagar as they do from the Mantralaya Mutt.

ಬೆಂಗಳೂರಿನ ಜಯನಗರದ ಐದನೇ ಬ್ಲಾಕಿನಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಮೃತ್ತಿಕಾ ಬೃಂದಾವನವು ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದ ಅಂಗ ಸಂಸ್ಥೆಯಾಗಿದೆ. ಜಯನಗರದ ಐದನೇ ಬ್ಲಾಕಿನಲ್ಲಿರುವ ಶ್ರೀಮಠವು ಬೆಂಗಳೂರಿನ ಗುರುಭಕ್ತರ ಇಷ್ಟಾರ್ಥಪ್ರದವಾದ ಒಂದು ಪವಿತ್ರ ಪುಣ್ಯಕ್ಷೇತ್ರವಾಗಿದೆ. ಈ ಮಠದಲ್ಲಿರುವ ಶ್ರೀ ಗುರುರಾಜರ ಮೃತ್ತಿಕಾ ಬೃಂದಾವನವು ಶ್ರೀ ರಾಘವೇಂದ್ರ ಸ್ವಾಮಿಗಳವರ ವಿಶೇಷ ಸನ್ನಿಧಾನವನ್ನು ಹೊಂದಿದೆ. ಶ್ರೀ ಗುರು ಸಾರ್ವಭೌಮರು ಮಂತ್ರಾಲಯ ಕ್ಷೇತ್ರದಲ್ಲಿ ತಮ್ಮನ್ನು ನಂಬಿ ಬಂದ ಭಕ್ತ ಸಮೂಹವನ್ನು ತಮ್ಮ ಕರುಣಾಕಟಾಕ್ಷ ವೀಕ್ಷಣೆಯಿಂದ ಯಾವ ರೀತಿಯಾಗಿ ಪೊರೆಯುತ್ತಿರುವರೋ ಅದೇ ರೀತಿ ಜಯನಗರದ ಮಠದಲ್ಲಿಯೂ ತಮ್ಮ ಭಕ್ತರುಗಳನ್ನು ಹರಸುತ್ತಾ, ಪೊರೆಯುತ್ತಾ ಭಕ್ತರ ಮನೋಭೀಷ್ಟಗಳನ್ನು ನೆರವೇರಿಸುತ್ತಿದ್ದಾರೆ.

Sri Sri Subudhendra Tirtharu / ಶ್ರೀ ಶ್ರೀ ಸುಬುಧೇಂದ್ರತೀರ್ಥರು

Raja Pavamanacharya, the original name of His Holiness Sri Subudhendra Tirtha, was born on April 19, 1971 or on the Krishnapaksha Navami tithi of Vasantha Rutu, Chaitramasa in Sri Virodhi nama samvatsara, at Kurnool in Andhrapradesh. Raja S. Giri Acharya is his father and Manjula Bai his mother. After the initial education in Sanskrit, spiritual and cultural texts, he learnt Stotras, Kavya and other subjects under His Holiness Sri Sujayeendra Tirtha Swamiji of Sri Raghavendra Swamy Mutt, Mantralaya.

Pavamanacharya was initiated into sainthood on May 25, 2013, when he was also renamed, in accordance with the governing principles of Sri Mutt, as Sri Subhudendra Tirtha. Immediately after attaining the sainthood, Sri Subhudendra Tirtha held his maiden Vidwat Sabha knowledge-sharing session, at Sri Raghavendra Swamy Mutt – Jayanagar, Bangalore.

ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು, ಪೀಠಾಧಿಪತಿಗಳು, ಶ್ರೀರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ. ದಿನಾಂಕ 19 ಏಪ್ರಿಲ್, 1971ರಂದು, ಅಂದರೆ ಶ್ರೀ ವಿರೋಧಿನಾಮ ಸಂವತ್ಸರದ ವಸಂತಋತು, ಚೈತ್ರಮಾಸದ ನವಮಿಯಂದು, ಆಂಧ್ರ ಪ್ರದೇಶದ ಕರ್ನೂಲಿನಲ್ಲಿ ನೆಲೆಸಿದ್ದ ಶ್ರೀ ರಾಜಾ ಎಸ್. ಗಿರಿ ಆಚಾರ್ಯ ಮತ್ತು ಶ್ರೀಮತಿ ಮಂಜುಳ ಬಾಯಿ ದಂಪತಿಗಳಿಗೆ ಜನಿಸಿದ ಶ್ರೀಗಳ ಪೂರ್ವಾಶ್ರಮದ ಮೂಲನಾಮಧೇಯ ರಾಜಾ ಪವಮಾನಾಚಾರ್ಯರು.

ಆರಂಭಿಕ ಸಂಸ್ಕೃತ, ಆಧ್ಯಾತ್ಮಿಕ ಹಾಗೂ ಶಾಸ್ತ್ರ ಪಾಠಗಳಾದ ನಂತರ ಶ್ರೀ ಪವಮಾನಾಚಾರ್ಯರು ಶ್ರೀಮಠದ ಅಧಿಪತಿಗಳಾಗಿದ್ದ ಶ್ರೀ ಸುಜಯೀಂದ್ರತೀರ್ಥರಿಂದ ಸ್ತೋತ್ರ, ಕಾವ್ಯ ಮುಂತಾದ ಅನೇಕ ವಿಷಯಗಳಲ್ಲಿ ಪರಿಣತಿ ಪಡೆದರು.

ದಿನಾಂಕ 25 ಮೇ, 2013ರಂದು ಶ್ರೀ ರಾಜಾ ಪವಮಾನಾಚಾರ್ಯರ ಸನ್ಯಾಸಾಭಿಷೇಕವಾಯಿತು. ಶ್ರೀ ಸುಬುಧೇಂದ್ರತೀರ್ಥರು ಸನ್ಯಾಸಾಶ್ರಮ ಸ್ವೀಕರಿಸಿದ ನಂತರ ತಮ್ಮ ಪ್ರಪ್ರಥಮ ವಿಧ್ವತ್ ಸಭೆಯನ್ನು ಬೆಂಗಳೂರಿನ ಜಯನಗರದ ೫ನೇ ಬ್ಲಾಕ್ ನಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿಯೇ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ, ಶ್ರೀಮಠದ ಸಂಪ್ರದಾಯಗಳಿಗನುಸಾರವಾಗಿ ಶ್ರೀ ರಾಜಾ ಪವಮಾನಾಚಾರ್ಯರಿಗೆ, ಶ್ರೀ ಸುಬುಧೇಂದ್ರತೀರ್ಥ ಎಂಬುದಾಗಿ ಪುನರ್ನಾಮಕರಣ ಮಾಡಲಾಯಿತು.

ಅತ್ಯಂತ ಪ್ರಭಾವಿಗಳಾದ, ತೇಜ:ಪುಂಜರಾದ ಶ್ರೀ ಸುಬುಧೇಂದ್ರತೀರ್ಥರು ಅನೇಕ ಸಮಾಜಸೇವಾಕಾರ್ಯಗಳಲ್ಲಿ ಸದಾ ನಿರತರಾಗಿರುವರು ಮತ್ತು ದ್ವೈತಸಿದ್ಧಾಂತದ ಬಗ್ಗೆ ಅಭೂತಪೂರ್ವ ಜ್ಞಾನವನ್ನು ಸಂಪಾದಿಸಿದ್ದಾರೆ.

Distance from the Namma Metro station:

Sri Raghavendra Swamy Mutt – Jayanagar V Block is within ten minutes of walking distance from the nearest Namma Metro station of Rashtreeya Vidyalaya Road.

ಹತ್ತಿರದ ನಮ್ಮ ಮೆಟ್ರೋ ರೈಲು ನಿಲ್ದಾಣ:

ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠವು ರಾಷ್ಟ್ರೀಯ ವಿದ್ಯಾಲಯ ರಸ್ತೆ ಮೆಟ್ರೋ ನಿಲ್ದಾಣದಿಂದ ಸುಮಾರು ಒಂದು ಕಿ ಮೀ (1.1 km) ಅಂತರದಲ್ಲಿದೆ.

Phala Panchamruta Seve / ಫಲಪಂಚಾಮೃತ ಸೇವೆ

Book Phala Panchamrit Seva Online with PurePrayer in Sri Raghavendra Swamy Mutt at Jayanagar V Block (NSRS Mutt – Jayanagar) for the upcoming Aradhana being organized from 23 Aug, 2021 to 26 Aug, 2021.

Samoohika Rathotsava (Thursday) / ಸಾಮೂಹಿಕ ರಥೋತ್ಸವ (ಗುರುವಾರ)

Book  Samoohika Rathotsava Seva Online with PurePrayer performed every Thursday  in Sri Raghavendra Swamy Mutt – Jayanagar (NSRS Mutt – Jayanagar)..

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register