ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ - ಚಾಮರಾಜನಗರ / Sri Biligiri Ranganathaswamy Temple - Chamarajanagar - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ – ಚಾಮರಾಜನಗರ / Sri Biligiri Ranganathaswamy Temple – Chamarajanagar

About Temple

ಚಾಮರಾಜನಗರ ಜಿಲ್ಲೆ, ಯಳಂದೂರು ತಾಲ್ಲೂಕು ಬಿಳಿಗಿರಿರಂಗನ ಬೆಟ್ಟವನ್ನು ಬಿಳಿಗಿರಿಬೆಟ್ಟ, ಬಿಳಿಕಲ್‍ಬೆಟ್ಟ, ಶ್ವೇತಾದ್ರಿ ಎಂದು ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಗಂಗರ ಕಾಲದಲ್ಲಿ ಗಜಾರಣ್ಯವೆಂದು ಕರೆಯುತ್ತಿದ್ದರು. ಈ ಬೆಟ್ಟದ ಮೇಲೆ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನವು ಸಮುದ್ರ ಮಟ್ಟಕ್ಕಿಂತ 5091 ಅಡಿ ಎತ್ತರವಿದ್ದು ಯಳಂದೂರಿನಿಂದ ಪೂರ್ವದಿಕ್ಕಿಗೆ 24 ಕಿ.ಮೀ ಹಾಗೂ ಚಾಮರಾಜನಗರದಿಂದ ಈಶಾನ್ಯ ದಿಕ್ಕಿಗೆ 48 ಕಿ.ಮೀ ದೂರದಲ್ಲಿರುವ ಪರ್ವತ ಶ್ರೇಣಿಗಳಲ್ಲಿ ಇರುತ್ತದೆ. ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವರ ವಿಗ್ರಹವು 5.5 ಅಡಿ ಎತ್ತರವಿದ್ದು ಈ ಮೂರ್ತಿಯನ್ನು ವಶಿಷ್ಠಮಹಾಮುನಿಗಳು ಸ್ಥಾಪಿಸಿದರು ಎಂಬುದಾಗಿ ಹೇಳುತ್ತಾರೆ. ಅಲ್ಲದೆ ವಿಷ್ಣುವರ್ಧನರಾಯನು ದೇವಾಲಯವನ್ನು ಜೀರ್ಣೋದ್ದಾರ ಮಾಡಿದನೆಂದು ಪ್ರತೀತಿ ಇದೆ.

Biligiri Rangana Betta literally means Bilikal Betta in Kannada Language and Swetadri in Sanskrit houses the famous historical ancient temple of Biligiri Ranganathaswamy. The hill temple is at about 5091 feet above sea level and surrounded by a thick forest. The temple is at the distance of 24 Kms from Yalandur the Taluk head quarters town and about 48 Kms from Chamarajanagar District in Karnataka State.

You don't have permission to register