Top
Image Alt

ಶ್ರೀ ಚಾಮುಂಡೇಶ್ವರಿ ದೇವಸ್ಥಾನ – ಮೈಸೂರು / Sri Chamundeshwari Temple – Mysuru

About Temple

Chamundi hills, one of the popular iconic spiritual centres of Karnataka, is popular for Sri Chamnundeshwari temple, who is one of the forms of Goddess Parvati. Located at about 23 km from Mysuru city, Sri Chamundeshwari temple is the family deity (Kuladevathe) of Mysore Wodeyars’ dynasty. During the Navaratri festivities in the Ashwayuja, lakhs of people visit the temple every day. The temple opens at 6 a.m. and closes at 9 p.m. during this period. On Ashtami, Navami and Chaturdashi days of Chandramana Ashwayuja month in Sharadrutu, Sri Chandi Homa is performed in the temple. Durgashtami is celebrated as Kalaratri or dark night. Apart from Dharmadarshana, entry for Nityadarshana is allowed against a prescribed fee here. Ladu prasadam is given to devotees as the blessings of the goddess. On all Fridays, the temple will be open till 9 p.m. while on other days there will be an interval in the afternoon.

According to mythology and history, Mysuru was originally known as Mahishapura. A demon king called Mahisha was ruling this region. As per ‘Durga Saptashati’, Mahishasura had secured special boons from Lord Brahma and indulged in troubling and tormenting the people, gods and goddesses. To put an end to his troubles, Parvathi manifested herself as Sri Chamundeshwari and killed Mahishasura on the Kalaratri day, which is now known as Durgashtami.

In the Chamundi Hills, there is another popular temple dedicated to Lord Mahabaleshwara, which is said to have been built much before the period of Vishnuvardhana of Hoysala dynasty. There is an inscription here mentioning the fact that Hoysala Vishnuvrdhana had given a Datti to this temple in 1128 A.D. The thousand steps for climbing the Chamunid hills was built in 1659 A.D. during the regime of Dodda Devaraja Wodeyar.
There is a temple dedicated to Lord Lakshmninarayana here. In another temple, Lord Mahabaleshwara has been consecrated in the form of Shivalinga. The Nandi statue, which is 16 ft. high and 25 ft. long, is one of the major attractions of this holy place.

The temple is administered by Muzrai Department of Government of Karnataka.

ಮೈಸೂರು ಜಿಲ್ಲೆಯಲ್ಲಿರುವ ಚಾಮುಂಡಿಬೆಟ್ಟವು ನಮ್ಮ ರಾಜ್ಯದ ಸುಪ್ರಸಿದ್ಧ ಯಾತ್ರಾ ಹಾಗೂ ಪ್ರವಾಸೀ ತಾಣಗಳಲ್ಲೊಂದಾಗಿದ್ದು ಜಗನ್ಮಾತೆ ಪಾರ್ವತೀದೇವಿಯ ಅವತಾರ ಸ್ವರೂಪಳಾದ ಶ್ರೀ ಚಾಮುಂಡಾಂಬೆಯ ಸನ್ನಿಧಾನವಿರುವ ಪವಿತ್ರ ಸ್ಥಳವಾಗಿದೆ. ಶ್ರೀ ಚಾಮುಂಡೇಶ್ವರಿ ದೇವಾಲಯವಿರುವ ಚಾಮುಂಡಿ ಬೆಟ್ಟವು ಮೈಸೂರು ನಗರದಿಂದ ಸುಮಾರು 23 ಕಿ.ಮೀ. ದೂರದಲ್ಲಿದೆ.

ವರ್ಷಂಪ್ರತಿ ಅಶ್ವಯುಜ ಮಾಸ ಶುಕ್ಲ ಪ್ರತಿಪದೆಯಿಂದ ಆರಂಭಗೊಳ್ಳುವ ನವರಾತ್ರಿ ಮಹೋತ್ಸವ ದಿನಗಳಲ್ಲಿ ವಿಶೇಷ ಪೂಜೆ-ಹೋಮಾದಿಗಳನ್ನು ನಡೆಸಲಾಗುವುದರಿಂದ ಪ್ರತಿನಿತ್ಯವೂ ಲಕ್ಷಾಂತರ ಜನರು ಚಾಮುಂಡಿಬೆಟ್ಟವನ್ನು ಸಂದರ್ಶಿಸಲು ಆಗಮಿಸುತ್ತಾರೆ. ಚಾಂದ್ರಮಾನ ಶರದೃತು ಅಶ್ವಯುಜ ಶುಕ್ಲ ಅಷ್ಟಮಿ, ನವಮಿ ಹಾಗೂ ಚತುರ್ದಶಿ ದಿನಗಳಂದು ಶ್ರೀ ಚಾಮುಂಡಿ ದೇವಾಲಯವನ್ನು ಪ್ರಾತಃಕಾಲ ಆರು ಗಂಟೆಗೇ ತೆರೆಯಲಾಗುತ್ತದೆ. ಈ ಎಲ್ಲಾ ದಿನಗಳಲ್ಲಿ ಶ್ರೀ ಚಂಡಿಹೋಮವನ್ನು ನೆರವೇರಿಸಲಾಗುತ್ತದೆ. ಶ್ರೀ ಚಾಮುಂಡೇಶ್ವರಿಯು ಮೈಸೂರು ಅರಸರ ಕುಲದೇವತೆಯಾಗಿದ್ದಾಳೆ. ಪ್ರತಿ ಶುಕ್ರವಾರದಂದು ದಿನಪೂರ್ತಿ ದರ್ಶನಕ್ಕೆ ಅವಕಾಶವಿದ್ದು, ಉಳಿದ ದಿನಗಳಲ್ಲಿ ಮಧ್ಯಾಹ್ನ ಬಿಡುವಿರುತ್ತದೆ. ಅಷ್ಟಮಿ, ನವಮಿ, ಚತುರ್ದಶಿಗಳಂದು ಚಂಡಿಕಾ ಹೋಮ ಜರಗುತ್ತದೆ. ನವರಾತ್ರಿಯಲ್ಲಿ ಪ್ರತಿ ದಿನ ವಿಶೇಷ ಪೂಜೆಗಳು ನಡೆಯುತ್ತವೆ. ದುರ್ಗಾಷ್ಟಮಿಯನ್ನು ಕಾಳರಾತ್ರಿಯೆಂದು ವಿಶೇಷವಾಗಿ ಆಚರಿಸಲಾಗುತ್ತದೆ. ಧರ್ಮದರ್ಶನವಲ್ಲದೆ ಶುಲ್ಕಸಹಿತ ನೇರ ಪ್ರವೇಶದ ವ್ಯವಸ್ಥೆಯಿದೆ. ಲಾಡುವನ್ನು ಪ್ರಸಾದವಾಗಿ ನೀಡುವುದು ಇಲ್ಲಿನ ವಿಶೇಷ.

ಹಿಂದೆ ಮೈಸೂರು ಮಹಿಷಪುರವೆಂದು ಕರೆಯಲ್ಪುಡುತ್ತಿತ್ತೆಂದು ದುರ್ಗಾಸಪ್ತಶತಿಯಲ್ಲಿ ಉಲ್ಲೇಖವಿದೆ. ಕಾಲಕ್ರಮೇಣ ಈ ನಗರವು ಮೈಸೂರೆಂಬ ಹೆಸರನ್ನು ಪಡೆಯಿತು. ಬ್ರಹ್ಮನಿಂದ ವರ ಪಡೆದು ಮೆರೆಯುತ್ತಿದ್ದ ಮಹಿಷಾಸುರನನ್ನು ಕಾಳರಾತ್ರಿಯಂದು ಸಂಹರಿಸಿದ ನಂತರ ದೇವಿಯು ಇಲ್ಲಿ ನೆಲೆಸಿದಳು ಎಂದು ಪುರಾಣಗಳು ಹೇಳುತ್ತವೆ. ಇಲ್ಲಿರುವ ಮಹಾಬಲೇಶ್ವರ ದೇಗುಲವು ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲಕ್ಕಿಂತಲೂ ಪ್ರಾಚೀನವೆಂದು ತಿಳಿದುಬರುತ್ತದೆ. ಕ್ರಿ.ಶ. 1128ರಲ್ಲಿ ವಿಷ್ಣುವರ್ಧನನು ಇಲ್ಲಿ ದತ್ತಿ ನೀಡಿದ್ದನೆಂದು ಇಲ್ಲಿ ದೊರೆತಿರುವ ಶಾಸನವೊಂದರಿಂದ ತಿಳಿದುಬರುತ್ತದೆ. ದೊಡ್ಡ ದೇವರಾಜ ಒಡೆಯರರ (ಕ್ರಿ.ಶ. 1659) ಕಾಲದಲ್ಲಿ ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಲಾಯಿತು. ಈಗಲೂ ಭಕ್ತರು ತಮ್ಮ ಅಭೀಷ್ಟಗಳ ನಿವೇದನೆಗಾಗಿ ಸಾವಿರ ಮೆಟ್ಟಿಲು ಹತ್ತಿ ಬರುವ ಹರಕೆಯನ್ನು ತೊಡುತ್ತಾರೆ. ಭಕ್ತರು ಸರದಿ ಸಾಲಿನಲ್ಲಿ ನಿಂತು ಹೂವು, ಹಣ್ಣುಗಳನ್ನು ಅರ್ಪಿಸುತ್ತಾರೆ. ದೇಗುಲದ ಆವರಣದಲ್ಲಿ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇಗುಲವಿದೆ. ಮಹಾಬಲೇಶ್ವರ ದೇಗುಲದಲ್ಲಿ ಮಹಾದೇವನನ್ನು ಶಿವಲಿಂಗದಾಕಾರದಲ್ಲಿ ಪ್ರತಿಷ್ಟಾಪಿಸಲಾಗಿದೆ. ಇಲ್ಲಿರುವ ಮಹಿಷಾಸುರನ ಬೃಹತ್ ಪ್ರತಿಮೆ ಮೈಸೂರಿನ ಹೆಗ್ಗುರುತಾಗಿದೆ. ದೊಡ್ಡ ದೇವರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾದ ನಂದಿ ವಿಗ್ರಹ ಇಲ್ಲಿನ ವಿಶೇಷ ಆಕರ್ಷಣೆಯಾಗಿದೆ ಈ ವಿಗ್ರಹವು 25 ಅಡಿ ಉದ್ದ ಹಾಗು 16 ಅಡಿ ಎತ್ತರವಾಗಿದೆ.

ಈ ದೇವಸ್ಥಾನವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.

You don't have permission to register