Sri Krishna Mutt - Udupi - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Krishna Mutt – Udupi

About Temple

Jagadguru Sri Madhwacharya (1238-1317), the proponent of Tatwavada or Dwaita Siddhanta and the third incarnation of Lord Vayu, consecrated the idol of Kadagolu Krishna, which was created by Vishwakarma under the auspices of Lord Krishna during Dwapara Yuga, at Udupi, which is also called as Rajatapeethapura. The place where Sri Madhwacharya consecrated the idol of Lord Krishna is now a renowned pilgrim center called Udupi Sri Krishna Mutt. Udupi Sri Krishna Mutt is one of the most famous Hindu temples in the country. The Mutt, with Sri Chandramouleshwara and Sri Anantheshwara temples, is surrounded by Ashta Mutts and is in the north-eastern direction of Sri Anantheshwara temple. Udupi is about 56 km from Mangaluru and 403 km from Bengaluru. A special feature of this temple is that the idol of the presiding deity, Lord Krishna, is seen only through a square-shaped window called “Navagraha Kindi” and “Kanakana Kindi”. The Navagraha Kindi is a window with nine 4-inch-square holes, opposite the idol of Sri Krishna. It has been covered with silver sheets. This window is adorned with idols of Jaya and Vijaya on either side. The “Kanakana Kindi” is at the centre of the wall of Chandrashala and opposite the idol of Lord Krishna. Since Kanakadasa used to see the Lord only through this hole, it has been named after him as “Kanakana Kindi”.

ವಾಯುದೇವರ ಮೂರನೇ ಅವತಾರರಾದ ಹಾಗೂ ತತ್ವ ವಾದ ಅಥವಾ ದ್ವೈತ ಸಿದ್ಧಾಂತ ಪ್ರತಿಷ್ಟಾಪನಾಚಾರ್ಯರಾದ ಜಗದ್ಗುರು ಶ್ರೀ ಮಧ್ವಾಚಾರ್ಯರು (1238-1317) ದ್ವಾಪರಯುಗದಲ್ಲಿ ಶ್ರೀ ಕೃಷ್ಣನ ಆದೇಶದ ಮೇರೆಗೆ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ಕಡಗೋಲು ಕೃಷ್ಣನ ಮೂರ್ತಿಯನ್ನು ರಜತಪೀಠಪುರಿಯೆಂದು ಕರೆಯಲ್ಪಡುವ ಉಡುಪಿ ಕ್ಷೇತ್ರದಲ್ಲಿ ಪ್ರತಿಷ್ಟಾಪಿಸಿದರು. ಇದೇ ಇಂದು ಲೋಕಪ್ರಸಿದ್ಧವಾದ ಉಡುಪಿಯ ಶ್ರೀಕೃಷ್ಣ ಮಠವಾಗಿದೆ. ಉಡುಪಿಯ ಅಷ್ಟಮಠಗಳ ಮಧ್ಯದಲ್ಲಿ ಶ್ರೀ ಕೃಷ್ಣ ಮಠ, ಶ್ರೀಮದನಂತೇಶ್ವರ ದೇವಾಲಯ ಹಾಗೂ ಶ್ರೀ ಚಂದ್ರಮೌಳೇಶ್ವರ ದೇವಾಲಯಗಳಿವೆ. ಉಡುಪಿಯಲ್ಲಿರುವ ಶ್ರೀ ಕೃಷ್ಣ ಮಠವು ಅತ್ಯಂತ ಪ್ರಸಿದ್ಧವಾದ ಹಿಂದೂ ದೇವಾಲಯಗಳಲ್ಲೊಂದಾಗಿದೆ. ಶ್ರೀ ಅನಂತೇಶ್ವರ ದೇವಾಲಯದ ಈಶಾನ್ಯ ದಿಕ್ಕಿ(ದೇವಮೂಲೆ)ನಲ್ಲಿ ಶ್ರೀ ಕೃಷ್ಣ ಮಠವಿದೆ. ಇದು ಮಂಗಳೂರಿನಿಂದ ಸುಮಾರು 56 ಕಿ.ಮೀ. ದೂರದಲ್ಲಿದ್ದು, ಬೆಂಗಳೂರಿನಿಂದ ಸುಮಾರು 403 ಕಿ.ಮೀ. ದೂರದಲ್ಲಿದೆ. ಈ ದೇವಸ್ಥಾನದ ವೈಶಿಷ್ಟ್ಯವೇನೆಂದರೆ, ಶ್ರೀ ಕೃಷ್ಣನ ದರ್ಶನವು ಕೇವಲ ನವಗ್ರಹ ಕಿಡಕಿ ಹಾಗೂ ಕನಕನ ಕಿಂಡಿಯ ಮೂಲಕ ಲಭ್ಯವಿದೆ. ನವಗ್ರಹ ಕಿಡಕಿಯು ಸುಮಾರು ನಾಲ್ಕು ಇಂಚು ಚಚ್ಚೌಕದ ಒಂಭತ್ತು ರಂಧ್ರಗಳಿರುವ ಬೆಳ್ಳಿ ಹೊದಿಕೆಯ ಕಿಡಕಿಯಾಗಿದ್ದು, ಭಕ್ತರು ಈ ಕಿಡಕಿಯ ಮೂಲಕವೇ ಶ್ರೀ ಕೃಷ್ಣನ ದರ್ಶನ ಮಾಡುತ್ತಾರೆ. ಈ ನವಗ್ರಹ ಕಿಂಡಿಯ ಎಡ-ಬಲಗಳಲ್ಲಿ, ಜಯ-ವಿಜಯರ ಪ್ರತಿಮೆಗಳಿವೆ. ಚಂದ್ರಶಾಲೆಯ ಗೋಡೆಯ ಮಧ್ಯದಲ್ಲಿ, ಶ್ರೀ ಕೃಷ್ಣನ ಮೂರ್ತಿಗೆ ಎದುರಿಗಿರುವ ಕಿಂಡಿಯೇ ಕನಕನ ಕಿಂಡಿಯು. ಶ್ರೀ ಕೃಷ್ಣನನ್ನು ಕನಕದಾಸರು ಇದೇ ಕಿಂಡಿಯ ಮೂಲಕ ದರ್ಶನ ಮಾಡುತ್ತಿದ್ದುದರಿಂದ ಇದನ್ನು “ಕನಕನ ಕಿಂಡಿ” ಎಂದು ಕರೆಯುತ್ತಾರೆ. ಶ್ರೀ ಕೃಷ್ಣ ಮಠದ ಸುತ್ತಲೂ ಅನೇಕ ದೇವಾಲಯಗಳಿದ್ದು, ಇವುಗಳಲ್ಲಿ ಶ್ರೀ ಅನಂತೇಶ್ವರ ದೇವಾಲಯವು ಸುಮಾರು 1,500 ವರ್ಷಗಳಷ್ಟು ಪುರಾತನವಾದುದು ಎಂದು ಪ್ರತೀತಿ ಇದೆ. ಈ ದೇವಸ್ಥಾನಕ್ಕೆ ಬಳಸಲಾಗಿರುವ ಮರ ಮತ್ತು ಕಲ್ಲುಗಳು ಅಷ್ಟೇ ಹಳೆಯವು ಎಂದು ಹೇಳಲಾಗಿದೆ.

Nearby places

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register